ಬೆಂಗಳೂರು (ಜೂನ್ 07): ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ (chandan shetty And niveditha gowda) ಅವರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ರ್‍ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ಅವರ ನಾಲ್ಕು ವರ್ಷದ ದಾಂಪತ್ಯ ಅಂತ್ಯವಾಗಿದೆ.
ಕೆಲ ಕಾರಣಾಂತರಗಳಿಂದ ಕೂಡಿ ಇರಲು ಇಚ್ಚಿಸಿದ ಈ ಜೋಡಿ, ಪ್ರತ್ಯೇಕವಾಗಿರಲು ಬಯಸಿದೆ. ಹೀಗಾಗಿ ವಿಚ್ಛೇದನ ಕೋರಿ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತ್ತು. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಕೋರ್ಟ್, ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ವಿಚ್ಛೇದನ ಪಡೆದ ಚಂದನ್ ಶೆಟ್ಟಿ-ನಿವೇದಿತಾ ಗೌಡ? ದಂಪತಿ ಬಗ್ಗೆ ಶಾಕಿಂಗ್ ಸುದ್ದಿ
ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ ಇಂದು (ಜೂನ್ 07) ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಜ್ಯೋತಿ ಶ್ರೀ ಅವರು ಬೆಂಚ್ ಮುಂದೆ ಬಂದಿತ್ತು. ಆದ್ರೆ, ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಒಳಪಡಬೇಕು. ಅದರಂತೆ ಚಂದನ್ ಹಾಗೂ ನಿವೇದಿತಾ ಅವರಿಗೆ ಕೌಟುಂಬಿಕ ಕೋರ್ಟ್‌ನ ಮಿಡಿಯೇಷನ್ ಸೆಂಟರ್ನಲ್ಲಿ ಮಾತುಕತೆ ನಡೆಸಲಾಯಿತು. ವಿಚ್ಛೇದನ ಪ್ರಕ್ರಿಯೆ ಮೊದಲು ಈ ಸಂಧಾನ ನಡೆಯಲೇಬೇಕು. ಅಂತೆಯೇ ಸಂಧಾನಕಾರರು ಮಾತುಕತೆ ನಡೆಸಿದಾಗ ಇಬ್ಬರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗಿ ಅಂತಿಮವಾಗಿ ಕೋರ್ಟ್, ವಿಚ್ಛೇದನ ನೀಡಿ ಆದೇಶಿಸಿದೆ.
ಈ ದಂಪತಿಯ ವಿಚ್ಛೇದನ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಯಾವುದೇ ದಂಪತಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ ತಿಂಗಳಾನುಗಟ್ಟಲೇ, ವರ್ಷಗಟ್ಟಲೇ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತೆ. ಆದ್ರೆಮ ಚಂದನ್ ಶೆಟ್ಟಿ ದಂಪತಿ ವಿಚ್ಛೇದನ ಮಾತ್ರ ಒಂದೇ ದಿನದಲ್ಲಿ ಆಗಿದೆ. ಕಾರಣ ಇವರಿಬ್ಬರು ನಗು ನಗುತ್ತಲೇ, ಒಪ್ಪಂದದ ಮೇರೆಗೆಯಿಂದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕೋರ್ಟ್ಗೆ ಹಾಜರಾದ ವೇಳೆ ಈ ಜೋಡಿ ಅಕ್ಕಪಕ್ಕದಲ್ಲೇ ಇತ್ತು. ಹೀಗಾಗಿ ಬೇಗನೇ ವಿಚ್ಛೇದನ ಮಂಜೂರಾಗಲು ಪ್ರಮುಖ ಕಾರಣವಾಗಿದೆ.
ಇವರಿಬ್ಬರ ವಿಚ್ಛೇದನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಸುದ್ದಿ ಹರಿದಾಡುತ್ತಿವೆ. ಕ್ಯೂಟ್ ಕಪಲ್ ಎಂದೇ ಕರೆಯಿಸಿಕೊಂಡಿದ್ದ ಈ ಜೋಡಿ ಏಕಾಏಕಿ ಡಿವೋರ್ಸ್ ನಿರ್ಧಾರ ಕೈಗೊಂಡಿದ್ಯಾಕೆ? ಕಾರಣವೇನು? ಇವರಲ್ಲಿ ಯಾರ ತಪ್ಪು ಇರಬಹುದು? ಇಬ್ಬರಲ್ಲಿ ಮೊದಲಿಗೆ ಡಿವೋರ್ಸ್ ಬಯಸಿದ್ದು ಯಾರು? ಹೀಗೇ ನಾನಾ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ. ಆದ್ರೆ, ಚಂದನ್ ಹಾಗೂ ನಿವೇದಿತಾ ಆಗಲೇ ತಮ್ಮ ವಿಚ್ಛೇದನಕ್ಕೆ ನಿರ್ದಿಷ್ಟ ಕಾರಣ ಏನು ಎನ್ನುವುದನ್ನು ಬಹಿರಂಗಪಡಿಸಿಲ್ಲ.
Published On - 5:17 pm, Fri, 7 June 24