ಹನುಮಂತ ಮುಗ್ಧನಾ? ಚಾಲಾಕಿಯಾ? ಸುದೀಪ್ ಎದುರು ಮನೆ ಮಂದಿ ಹೇಳಿದ್ದೇನು?
Bigg Boss Kannada: ಹನುಮಂತ ಮುಗ್ಧನಾ ಅಥವಾ ಚಾಲಾಕಿಯಾ ಎಂಬ ಪ್ರಶ್ನೆ ಬಿಗ್ಬಾಸ್ ಮನೆ ಮಂದಿಗೆ ಎದುರಾಗಿದೆ. ಬಹುತೇಕರು ಹನುಮಂತ ಭಾರಿ ಚಾಲಾಕಿ ಎಂದಿದ್ದಾರೆ. ಅದಕ್ಕೆ ಹನುಮಂತ ಸಹ ತಕ್ಕ ಪ್ರತ್ಯುತ್ತರವನ್ನೇ ಕೊಟ್ಟಿದ್ದಾನೆ.
ಶನಿವಾರದ ಎಪಿಸೋಡ್ನಲ್ಲಿ ಪ್ರತಿ ಬಾರಿಯಂತೆ ಕಿಚ್ಚ ಸುದೀಪ್ ಮನೆ ಮಂದಿಯ ಮುಂದೆ ಕೆಲ ಪ್ರಶ್ನೆಗಳನ್ನು ಇರಿಸಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ಹನುಮಂತ ನಾಯಕನಾಗಿದ್ದ, ಈ ವಾರದ ಅಂತ್ಯಕ್ಕೆ ಮತ್ತೊಬ್ಬ ನಾಯಕ ಆಗಿದ್ದಾರೆ. ಇಬ್ಬರು ಕಳಪೆ ಆಗಿದ್ದಾರೆ. ಉತ್ತಮ ಒಬ್ಬರಾಗಿದ್ದಾರೆ. ಹನುಮಂತ ಟಾಸ್ಕ್ಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಸುದೀಪ್ ಎದುರು ಮನೆಯ ಸದಸ್ಯರು ಹನುಮಂತ ಮುಗ್ಧನಲ್ಲ, ಅವನು ಬಹಳ ಚಾಲಾಕಿ ಎಂದು ಹೇಳುತ್ತಿದ್ದಾರೆ. ಅವರ ಮಾತುಗಳಿಗೆ ಹನುಮಂತ ದಿಟ್ಟ ಉತ್ತರ ಕೊಟ್ಟಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 09, 2024 07:39 PM
Latest Videos