ಪರಪ್ಪನ ಅಗ್ರಹಾರದಲ್ಲಿ ರಾಗಿಣಿ, ಸಂಜನಾಗೆ ED ಅಧಿಕಾರಿಗಳಿಂದ ಡ್ರಿಲ್

|

Updated on: Sep 27, 2020 | 12:48 PM

ಆನೇಕಲ್: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಶೆಯ ನಂಟಿದೆ ಎಂಬ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ರಾಗಿಣಿ, ಸಂಜನಾಗೆ ಇಡಿ ಅಧಿಕಾರಿಗಳಿಂದ ವಿಚಾರಣೆ ನಡೆದಿದೆ. ನಟಿಯರ ವಿರುದ್ಧ ಅಕ್ರಮ ಹಣ ಗಳಿಕೆ ಆರೋಪ ಹಿನ್ನೆಲೆಯಲ್ಲಿ NDPS ಕೋರ್ಟ್ ಅನುಮತಿ ಪಡೆದು ಇಡಿಯಿಂದ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ ವಿಚಾರಣೆ ನಡೆದಿದೆ. ಹವಾಲಾ ದಂಧೆ ವರ್ಗಾವಣೆ ದಾಖಲೆಗಳನ್ನು ತೋರಿಸಿ ಅಧಿಕಾರಿಗಳು ನಟಿಯರನ್ನ ಪ್ರಶ್ನಿಸಿದ್ದಾರೆ. ನಿನ್ನೆ ಸುಮಾರು 7 ಗಂಟೆ ಕಾಲ ಸಂಜನಾ, ರಾಗಿಣಿ ವಿಚಾರಣೆ ನಡೆದಿದೆ. ರಾಗಿಣಿ, ಸಂಜನಾ ಸೇರಿ 5 […]

ಪರಪ್ಪನ ಅಗ್ರಹಾರದಲ್ಲಿ ರಾಗಿಣಿ, ಸಂಜನಾಗೆ ED ಅಧಿಕಾರಿಗಳಿಂದ ಡ್ರಿಲ್
Follow us on

ಆನೇಕಲ್: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಶೆಯ ನಂಟಿದೆ ಎಂಬ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ರಾಗಿಣಿ, ಸಂಜನಾಗೆ ಇಡಿ ಅಧಿಕಾರಿಗಳಿಂದ ವಿಚಾರಣೆ ನಡೆದಿದೆ. ನಟಿಯರ ವಿರುದ್ಧ ಅಕ್ರಮ ಹಣ ಗಳಿಕೆ ಆರೋಪ ಹಿನ್ನೆಲೆಯಲ್ಲಿ NDPS ಕೋರ್ಟ್ ಅನುಮತಿ ಪಡೆದು ಇಡಿಯಿಂದ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ ವಿಚಾರಣೆ ನಡೆದಿದೆ.

ಹವಾಲಾ ದಂಧೆ ವರ್ಗಾವಣೆ ದಾಖಲೆಗಳನ್ನು ತೋರಿಸಿ ಅಧಿಕಾರಿಗಳು ನಟಿಯರನ್ನ ಪ್ರಶ್ನಿಸಿದ್ದಾರೆ. ನಿನ್ನೆ ಸುಮಾರು 7 ಗಂಟೆ ಕಾಲ ಸಂಜನಾ, ರಾಗಿಣಿ ವಿಚಾರಣೆ ನಡೆದಿದೆ. ರಾಗಿಣಿ, ಸಂಜನಾ ಸೇರಿ 5 ಜನರನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದೆ. ನಟಿಯರು ವಿದೇಶದಲ್ಲಿ ಸಾಕಷ್ಟು ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಸಾಕಷ್ಟು ಹಣವೂ ವಿದೇಶಕ್ಕೆ ವರ್ಗಾವಣೆ ಆಗಿರೋ ದಾಖಲೆ ಕೂಡ ಸಿಕ್ಕಿದೆ. ಈ ಬಗ್ಗೆ ಈಗಾಗಲೇ ಸಿಸಿಬಿ ಅಧಿಕಾರಿಗಳಿಂದ ಇಡಿ ಅಧಿಕಾರಿಗಳು ದಾಖಲೆಗಳನ್ನು ಕಲೆಹಾಕಿದ್ದಾರೆ.

ಮೂರು ದಿನಗಳ ಕಾಲ ರಾಹುಲ್, ವಿರೇನ್ ಖನ್ನಾ ಹಾಗೂ ರವಿಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತೆ. ನ್ಯಾಯಾಲಯ ಐದು ದಿನಗಳ ಕಾಲ ಜೈಲನಲ್ಲಿಯೇ ವಿಚಾರಣೆ ನಡೆಸಲು ಅನಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರೆದಿದೆ. ಆದರೆ ಇಂದು ಭಾನುವಾರವಾದ ಕಾರಣ ಯಾವುದೇ ತನಿಖೆ ಇಲ್ಲ.