‘ಅರ್ಧ ಪ್ರೇಕ್ಷಕರಿಗಾಗಿ’ ನನ್ನ ಸಿನಿಮಾ ಬಿಡುಗಡೆ ಮಾಡೋಲ್ಲ -ಕೆ.ಪಿ. ಶ್ರೀಕಾಂತ್

| Updated By: ಸಾಧು ಶ್ರೀನಾಥ್​

Updated on: Oct 01, 2020 | 4:31 PM

ಮೈಸೂರು: ಕೇಂದ್ರ ಸರ್ಕಾರ ಲಾಕ್​ಡೌನ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳನ್ನ ಓಪನ್‌ ಮಾಡಲು ಅನುಮತಿ ನೀಡಿದೆ. ಆದರೆ ಅರ್ಧ ಪ್ರೇಕ್ಷಕರಿಗಾಗಿ ನನ್ನ ‘ಸಲಗ’ ಚಿತ್ರ ಬಿಡುಗಡೆ ಮಾಡಲ್ಲ ಎಂದು ಮೈಸೂರಿನಲ್ಲಿ ಸಲಗ ಚಿತ್ರ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹೇಳಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್ ಆದ ಮೇಲೆಯೇ ತೆರೆಗೆ ಈ ಬಗ್ಗೆ ಮಾತನಾಡಿದ ಅವರು ಚಿತ್ರಮಂದಿರ ತೆರೆಯಲು ಅವಕಾಶ ನೀಡಿದ್ದಾರೆ ಸರಿ. ಆದರೆ ಅರ್ಧ ಪ್ರೇಕ್ಷಕರಿಗೆ ಅವಕಾಶ ನೀಡಿರೋದಕ್ಕೆ ನಮಗೆ ಅಸಮಾಧಾನ ಇದೆ. ನಮ್ಮ ಸಿನಿಮಾ ದೊಡ್ಡ ಬಜೆಟ್‌ […]

‘ಅರ್ಧ ಪ್ರೇಕ್ಷಕರಿಗಾಗಿ’ ನನ್ನ ಸಿನಿಮಾ ಬಿಡುಗಡೆ ಮಾಡೋಲ್ಲ -ಕೆ.ಪಿ. ಶ್ರೀಕಾಂತ್
Follow us on

ಮೈಸೂರು: ಕೇಂದ್ರ ಸರ್ಕಾರ ಲಾಕ್​ಡೌನ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳನ್ನ ಓಪನ್‌ ಮಾಡಲು ಅನುಮತಿ ನೀಡಿದೆ. ಆದರೆ ಅರ್ಧ ಪ್ರೇಕ್ಷಕರಿಗಾಗಿ ನನ್ನ ‘ಸಲಗ’ ಚಿತ್ರ ಬಿಡುಗಡೆ ಮಾಡಲ್ಲ ಎಂದು ಮೈಸೂರಿನಲ್ಲಿ ಸಲಗ ಚಿತ್ರ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹೇಳಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್ ಆದ ಮೇಲೆಯೇ ತೆರೆಗೆ
ಈ ಬಗ್ಗೆ ಮಾತನಾಡಿದ ಅವರು ಚಿತ್ರಮಂದಿರ ತೆರೆಯಲು ಅವಕಾಶ ನೀಡಿದ್ದಾರೆ ಸರಿ. ಆದರೆ ಅರ್ಧ ಪ್ರೇಕ್ಷಕರಿಗೆ ಅವಕಾಶ ನೀಡಿರೋದಕ್ಕೆ ನಮಗೆ ಅಸಮಾಧಾನ ಇದೆ. ನಮ್ಮ ಸಿನಿಮಾ ದೊಡ್ಡ ಬಜೆಟ್‌ ಸಿನಿಮಾ ಆಗಿದೆ. ಇದಕ್ಕೆ ಅರ್ಧ ಪ್ರೇಕ್ಷಕರಿಗೆ ಚಿತ್ರ ನೋಡಲು ಅವಕಾಶ ನೀಡಿದ್ರೆ ನಷ್ಟವಾಗುತ್ತೆ. ಸಲಗ ಚಿತ್ರ ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್ ಆದ ಮೇಲೆಯೇ ತೆರೆಗೆ ಬರಲಿದೆ.

ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಅರ್ಧ ಪ್ರೇಕ್ಷಕರು ಸಾಕಾಗೋದಿಲ್ಲ
ಆಕ್ಟಿವ್‌ ಪ್ರೊಡ್ಯೂಸರ್‌ ಟೀಂನಿಂದ ಸೋಮವಾರ ಸಭೆ ಕರೆದಿದ್ದೇವೆ. ಆ ಟೀಂನಲ್ಲಿ ರಾಬರ್ಟ್, ಕೋಟಿಗೊಬ್ಬ, ಕೆಜಿಎಫ್‌, ಯುವರತ್ನ ಸಲಗ ಚಿತ್ರ ನಿರ್ಮಾಪಕರಿರಲಿದ್ದಾರೆ. ಎಲ್ಲರೂ ಒಟ್ಟಾಗಿ ಕುಳಿತು ನಿರ್ಧಾರ ಮಾಡ್ತೀವಿ. ಯಾವ ಚಿತ್ರ ಬಿಡುಗಡೆ ಮಾಡಬೇಕು ಅನ್ನೋ ಬಗ್ಗೆಯೂ ನಿರ್ಧಾರ ಮಾಡ್ತೀವಿ. ಆದ್ರೆ ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ಅರ್ಧ ಪ್ರೇಕ್ಷಕರು ಸಾಕಾಗೋದಿಲ್ಲ. ನಮಗೆ ಪೂರ್ತಿ ಅನುಮತಿ ಸಿಕ್ಕರಷ್ಟೇ ನಾವು ಚಿತ್ರ ಬಿಡುಗಡೆ ಮಾಡಲು ಆಗೋದು. ಓಟಿಟಿ ವೇದಿಕೆಗಳು ದೊಡ್ಡ ಬಜೆಟ್‌ ಸಿನಿಮಾಗಳಿಗೆ ಸರಿಹೊಂದುವುದಿಲ್ಲ ಎಂದೂ ಕೆ.ಪಿ. ಶ್ರೀಕಾಂತ್‌ ತಿಳಿಸಿದ್ದಾರೆ.