ಸಂಜನಾ ಮನೆ ಮೇಲೆ ದಾಳಿ ನಡೆಸಿದಾಗ CCB ವಶಕ್ಕೆ ಪಡೆದ ‘ನವ’ ವಸ್ತುಗಳು ಇವೇ!

ಸಂಜನಾ ಮನೆ ಮೇಲೆ ದಾಳಿ ನಡೆಸಿದಾಗ CCB ವಶಕ್ಕೆ ಪಡೆದ ‘ನವ’ ವಸ್ತುಗಳು ಇವೇ!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಬಂಧಿಯಾಗಿರುವ ನಟಿ ಸಂಜನಾ ಗಲ್ರಾನಿ ಮನೆಯ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ 9 ವಸ್ತುಗಳು ಸಿಕ್ಕಿವೆ. ಆ ನವ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಆ ವಸ್ತುಗಳು ಯಾವುವು ಅನ್ನೋದನ್ನ ನೋಡೋದಾದ್ರೆ.. ಸಂಜನಾ ಮನೆಯಲ್ಲಿ ಗೋಲ್ಡ್ ಕಲರ್ ಐಫೋನ್-11 ಪ್ರೊ ಮ್ಯಾಕ್ಸ್, ಕೆಂಪು ಬಣ್ಣದ ಐಫೋನ್ XR, ಒಂದು ಹಾರ್ಡ್ ಡಿಸ್ಕ್ ಸಿಕ್ಕಿದ್ದು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಒಂದು ಆ್ಯಪಲ್ ಐಪ್ಯಾಡ್, ಸಿಮ್ ಇಲ್ಲದ 1 […]

Ayesha Banu

| Edited By: sadhu srinath

Sep 17, 2020 | 2:04 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಬಂಧಿಯಾಗಿರುವ ನಟಿ ಸಂಜನಾ ಗಲ್ರಾನಿ ಮನೆಯ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ 9 ವಸ್ತುಗಳು ಸಿಕ್ಕಿವೆ. ಆ ನವ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಆ ವಸ್ತುಗಳು ಯಾವುವು ಅನ್ನೋದನ್ನ ನೋಡೋದಾದ್ರೆ..

ಸಂಜನಾ ಮನೆಯಲ್ಲಿ ಗೋಲ್ಡ್ ಕಲರ್ ಐಫೋನ್-11 ಪ್ರೊ ಮ್ಯಾಕ್ಸ್, ಕೆಂಪು ಬಣ್ಣದ ಐಫೋನ್ XR, ಒಂದು ಹಾರ್ಡ್ ಡಿಸ್ಕ್ ಸಿಕ್ಕಿದ್ದು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಒಂದು ಆ್ಯಪಲ್ ಐಪ್ಯಾಡ್, ಸಿಮ್ ಇಲ್ಲದ 1 ಐಫೋನ್ 7, ಸಿಮ್ ಕಾರ್ಡ್ ಇಲ್ಲದ ಸ್ಯಾಮ್ಸಂಗ್ ಗೆಲಾಕ್ಸಿ M11 ಮೊಬೈಲ್ ಮತ್ತೊಂದು ಸಿಮ್ ಕಾರ್ಡ್ ಇಲ್ಲದ ಒನ್ ಪ್ಲಸ್ ಮೊಬೈಲ್ ಹಾಗೂ 5 ಮೊಬೈಲ್ ಸೇರಿ 9 ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಆದರೆ ಈ ಮೊಬೈಲ್​ಗಳಿಂದ ಸಂಜನಾ ಏನ್ ಮಾಡ್ತಿದ್ರು? ಇಷ್ಟೊಂದು ಮೊಬೈಲ್​ಗಳ ಅವಶ್ಯಕತೆ ಅವರಿಗೆ ಇತ್ತಾ? ಹೀಗೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada