ನಿರ್ದೇಶಕ ಇಂದ್ರಜಿತ್ ಲಂಕೇಶ್​ರ CCB ವಿಚಾರಣಾ ಪ್ರಕ್ರಿಯೆ ಹೇಗಿರಲಿದೆ?

| Updated By: ಸಾಧು ಶ್ರೀನಾಥ್​

Updated on: Aug 31, 2020 | 11:38 AM

[lazy-load-videos-and-sticky-control id=”VWa7FJsS9dU”] ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ಲಿಂಕ್​ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ರ ವಿಚಾರಣೆಗಾಗಿ ಸಿಸಿಬಿಯಿಂದ ಈಗಾಗಲೆ ತನಿಖೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಇಂದ್ರಜಿತ್ ಮಾತನಾಡಿರುವ ವಿಡಿಯೋ ಸಂಗ್ರಹ ಮಾಡಿರುವ ಸಿಸಿಬಿ ವೀಡಿಯೋ ಆಧಾರದ ಮೇರೆಗೆ ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ ದೊರೆತಿದೆ. ಮೊದಲು ಇಂದ್ರಜಿತ್ ಹೇಳಿಕೆಗೆ ಅವಕಾಶ ನೀಡಲಿರುವ ಸಿಸಿಬಿ ನಂತರ ಹೇಳಿಕೆಯ ಆಧಾರದ ಮೇಲೆ ಅವರನ್ನು ಪ್ರಶ್ನಸಲು ಮುಂದಾಗಲಿದೆ. ಇಂದ್ರಜಿತ್​ ಮಾಧ್ಯಮದಲ್ಲಿ ಹೇಳಿರುವ ಹೇಳಿಕೆಗೂ ಹಾಗೂ ತಮ್ಮ ಮುಂದೆ […]

ನಿರ್ದೇಶಕ ಇಂದ್ರಜಿತ್ ಲಂಕೇಶ್​ರ CCB ವಿಚಾರಣಾ ಪ್ರಕ್ರಿಯೆ ಹೇಗಿರಲಿದೆ?
Follow us on

[lazy-load-videos-and-sticky-control id=”VWa7FJsS9dU”]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ಲಿಂಕ್​ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ರ ವಿಚಾರಣೆಗಾಗಿ ಸಿಸಿಬಿಯಿಂದ ಈಗಾಗಲೆ ತನಿಖೆಗೆ ತಯಾರಿ ಮಾಡಿಕೊಳ್ಳಲಾಗಿದೆ.

ಈಗಾಗಲೇ ಇಂದ್ರಜಿತ್ ಮಾತನಾಡಿರುವ ವಿಡಿಯೋ ಸಂಗ್ರಹ ಮಾಡಿರುವ ಸಿಸಿಬಿ ವೀಡಿಯೋ ಆಧಾರದ ಮೇರೆಗೆ ಪ್ರಶ್ನೆಗಳನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ ದೊರೆತಿದೆ. ಮೊದಲು ಇಂದ್ರಜಿತ್ ಹೇಳಿಕೆಗೆ ಅವಕಾಶ ನೀಡಲಿರುವ ಸಿಸಿಬಿ ನಂತರ ಹೇಳಿಕೆಯ ಆಧಾರದ ಮೇಲೆ ಅವರನ್ನು ಪ್ರಶ್ನಸಲು ಮುಂದಾಗಲಿದೆ.

ಇಂದ್ರಜಿತ್​ ಮಾಧ್ಯಮದಲ್ಲಿ ಹೇಳಿರುವ ಹೇಳಿಕೆಗೂ ಹಾಗೂ ತಮ್ಮ ಮುಂದೆ ಹೇಳುವ ಹೇಳಿಕೆಗೂ ಸಿಸಿಬಿ ಹೋಲಿಕೆ ಮಾಡಲಿದೆ. ಜೊತೆಗೆ, ಸಿಸಿಬಿ ತಂಡವು ಆರೋಪಿತ ನಟ ನಟಿಯರ ಲಿಸ್ಟ್ ಮಾಡಲಿದೆ. ಅಷ್ಟೇ ಅಲ್ಲದೆ, ಲಂಕೇಶ್​ರ ಎಲ್ಲಾ ಹೇಳಿಕೆಗಳನ್ನೂ ವಿಡಿಯೋ ರೆಕಾರ್ಡ್ ಸಹ ಮಾಡಲಿದೆ.

ನಿರ್ದೇಶಕ ಲಂಕೇಶ್​ರ ವಿಚಾರಣೆ ಮಾಡಲು ನಾರ್ಕೊಟಿಕ್ ವಿಂಗ್ ಇನ್​ಸ್ಪೆಕ್ಟರ್​ ಮಲ್ಲೇಶ್ ಬೋಳೆತ್ತಿನ್​ರನ್ನ ನೇಮಕ ಮಾಡಲಾಗಿದೆ. ಬೋಳೆತ್ತಿನ್​ರಿಂದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್ ಹಾಗೂ ಎಸಿಪಿ ಗೌತಮ್​ತರಿಗೆ ಮಾಹಿತಿ ರವಾನೆಯಾಗಲಿದೆ ಎಂದು ತಿಳಿದುಬಂದಿದೆ.

Published On - 10:25 am, Mon, 31 August 20