ನಟಿ ಸಂಜನಾ CCB ಪೊಲೀಸ್ ಕಸ್ಟಡಿಗೆ, ಎಷ್ಟು ದಿನ?

|

Updated on: Sep 08, 2020 | 5:02 PM

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಜಾಲದ ನಶೆ ನಂಟಿರುವ ಪ್ರಕರಣ ಸಂಬಂಧಿಸಿ ಈಗಾಗಲೇ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಎ-14. ನಿಯಾಜ್ ಎ-13 ಆಗಿದ್ದಾರೆ. 14ನೇ ಆರೋಪಿಯಾಗಿ ಸಂಜನಾಳ ಹೆಸರನ್ನು FIRನಲ್ಲಿ ದಾಖಲಿಸಲಾಗಿದೆ. ಸದ್ಯ ಸಂಜನಾರನ್ನ ವಸಂತನಗರದಲ್ಲಿರುವ ರಿಮ್ಯಾಂಡ್ ಕೋರ್ಟ್​ನ 8ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಸಿಸಿಬಿ ತಂಡ ಮನವಿ ಮಾಡಿಕೊಂಡಿತ್ತು. ಅದರಂತೆ ನಟಿ ಸಂಜನಾ 5 ದಿನಗಳ ಕಾಲ ಸಿಸಿಬಿ ಪೊಲೀಸರ […]

ನಟಿ ಸಂಜನಾ CCB ಪೊಲೀಸ್ ಕಸ್ಟಡಿಗೆ, ಎಷ್ಟು ದಿನ?
Follow us on

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಜಾಲದ ನಶೆ ನಂಟಿರುವ ಪ್ರಕರಣ ಸಂಬಂಧಿಸಿ ಈಗಾಗಲೇ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಎ-14. ನಿಯಾಜ್ ಎ-13 ಆಗಿದ್ದಾರೆ. 14ನೇ ಆರೋಪಿಯಾಗಿ ಸಂಜನಾಳ ಹೆಸರನ್ನು FIRನಲ್ಲಿ ದಾಖಲಿಸಲಾಗಿದೆ.

ಸದ್ಯ ಸಂಜನಾರನ್ನ ವಸಂತನಗರದಲ್ಲಿರುವ ರಿಮ್ಯಾಂಡ್ ಕೋರ್ಟ್​ನ 8ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಸಿಸಿಬಿ ತಂಡ ಮನವಿ ಮಾಡಿಕೊಂಡಿತ್ತು. ಅದರಂತೆ ನಟಿ ಸಂಜನಾ 5 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ರಾಗಿಣಿ ಇರುವಾಗ ಜಾಗಕ್ಕೇ ಸಂಜನಾನೂ ಶಿಫ್ಟ್:
ಕೋರ್ಟ್​ನ ಆದೇಶದ ನಂತರ ನಟಿ ಸಂಜನಾ ಗಲ್ರಾನಿನ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ನಟಿ ಸಂಜನಾ 5 ದಿನ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿ ಇರಬೇಕಾಗಿದೆ. ಹೀಗಾಗಿ ಪೊಲೀಸರು ಸಂಜನಾಳನ್ನ ನಟಿ ರಾಗಿಣಿ ಇರುವಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ.

Published On - 4:56 pm, Tue, 8 September 20