AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಬಳಿಕ ಈಗ ಮಣಿರತ್ನಂ ಸಿನಿಮಾನಲ್ಲಿ ಚೈತ್ರಾ ಆಚಾರ್

ಚೈತ್ರಾ ಆಚಾರ್ ಸಹ ಪರ ಭಾಷೆ ಸಿನಿಮಾಗಳಲ್ಲಿ ಅದ್ಭುತ ಅವಕಾಶಗಳನ್ನು ತಮ್ಮ ಪ್ರತಿಭೆ ಮಾತ್ರದಿಂದಲೇ ಪಡೆದುಕೊಳ್ಳುತ್ತಿದ್ದಾರೆ. ತಮಿಳಿನ ‘3 ಬಿಎಚ್​​ಕೆ’ ಸಿನಿಮಾನಲ್ಲಿ ನಟಿಸಿದ್ದ ಚೈತ್ರಾ ಆಚಾರ್, ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲಿ ಅವಕಾಶ ಗಿಟ್ಟಿಸಿಕೊಂಡಾಗ ಹಲವರು ಹುಬ್ಬೇರಿಸಿದ್ದರು. ಇದೀಗ ಚೈತ್ರಾ ಅವರು ಭಾರತದ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ಹೊಸ ಸಿನಿಮಾನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಅದುವೇ ‘ಇಂಜಿ ವೆಲ್ಲಂ’.

ಪ್ರಭಾಸ್ ಬಳಿಕ ಈಗ ಮಣಿರತ್ನಂ ಸಿನಿಮಾನಲ್ಲಿ ಚೈತ್ರಾ ಆಚಾರ್
Chaitra J Achar Mani Rathnam
ಮಂಜುನಾಥ ಸಿ.
|

Updated on: Nov 15, 2026 | 3:08 PM

Share

ಇತ್ತೀಚೆಗಿನ ವರ್ಷಗಳಲ್ಲಿ ಹಲವು ಕನ್ನಡದ ನಟಿಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಅವರುಗಳಂತೂ ಕನ್ನಡದಿಂದ ಹೋಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯರೇ ಆಗಿಬಿಟ್ಟಿದ್ದಾರೆ. ಇವರುಗಳ ಜೊತೆಗೆ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ, ರುಕ್ಮಿಣಿ ವಸಂತ್, ಶ್ರದ್ಧಾ ಶ್ರೀನಾಥ್ ಇನ್ನೂ ಹಲವು ಕನ್ನಡದ ನಟಿಯರು ಪರಭಾಷೆಗಳಲ್ಲಿ ಅದ್ಭುತ ಅವಕಾಶಗಳನ್ನು ಪಡೆಯುತ್ತಾ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ಇದೀಗ ಇದೇ ಸಾಲಿಗೆ ಸೇರಿದ್ದಾರೆ ಕನ್ನಡದ ನಟಿ ಚೈತ್ರಾ ಜೆ ಆಚಾರ್.

ಚೈತ್ರಾ ಆಚಾರ್ ಸಹ ಪರ ಭಾಷೆ ಸಿನಿಮಾಗಳಲ್ಲಿ ಅದ್ಭುತ ಅವಕಾಶಗಳನ್ನು ತಮ್ಮ ಪ್ರತಿಭೆ ಮಾತ್ರದಿಂದಲೇ ಪಡೆದುಕೊಳ್ಳುತ್ತಿದ್ದಾರೆ. ತಮಿಳಿನ ‘3 ಬಿಎಚ್​​ಕೆ’ ಸಿನಿಮಾನಲ್ಲಿ ನಟಿಸಿದ್ದ ಚೈತ್ರಾ ಆಚಾರ್, ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲಿ ಅವಕಾಶ ಗಿಟ್ಟಿಸಿಕೊಂಡಾಗ ಹಲವರು ಹುಬ್ಬೇರಿಸಿದ್ದರು. ಇದೀಗ ಚೈತ್ರಾ ಅವರು ಭಾರತದ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ಹೊಸ ಸಿನಿಮಾನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟನೆ ಮಾಡಿದ್ದಾರೆ. ಅದುವೇ ‘ಇಂಜಿ ವೆಲ್ಲಂ’.

ಸಾಯಿ ಪಲ್ಲವಿ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿರುವ ‘ಇಂಜಿ ವೆಲ್ಲಂ’ ಸಿನಿಮಾನಲ್ಲಿ ಚೈತ್ರಾ ಆಚಾರ್ ಅವರದ್ದು ಸಹ ಪ್ರಮುಖವಾದ ಪಾತ್ರ. ಈ ಬಗ್ಗೆ ಮಾತನಾಡಿರುವ ಚೈತ್ರಾ ಆಚಾರ್, ‘ಖುದ್ದು ಲಿಜೆಂಡರಿ ನಿರ್ದೇಶಕ ಮಣಿರತ್ನಂ ಅವರೇ ಕರೆ ಮಾಡಿ ಅವಕಾಶ ಕೊಟ್ಟಾಗ ನನಗೆ ಆದ ಖುಷಿಗೆ ಪಾರವೇ ಇಲ್ಲ. ‘ನನ್ನ ಸಿನಿಮಾನಲ್ಲಿ ಪಾತ್ರವೊಂದಿದೆ ಅದರಲ್ಲಿ ನೀವು ನಟಿಸಬೇಕು ಎಂಬುದು ನನ್ನ ಇಚ್ಛೆ’ ಎಂದು ಮಣಿ ಅವರು ಹೇಳಿದಾಗ ಕೂಡಲೇ ಒಪ್ಪಿಕೊಂಡೆ’ ಎಂದಿದ್ದಾರೆ ಚೈತ್ರಾ.

ಇದನ್ನೂ ಓದಿ:‘ಮದುವೆ ಆಗು ಪ್ಲೀಸ್’ ಅಂತ ವಿಜಯ್ ಬಳಿ 100 ಬಾರಿ ಕೇಳಿಕೊಂಡಿದ್ದ ರಶ್ಮಿಕಾ ಮಂದಣ್ಣ

‘ಇಂಜಿ ವೆಲ್ಲಂ’ ಸಿನಿಮಾನಲ್ಲಿ ನಾನು ನಟಿಸಿದ ಬಹುತೇಕ ಭಾಗಗಳು ವಿಜಯ್ ಸೇತುಪತಿ ಅವರೊಟ್ಟಿಗೆ ಇವೆ. ಅದೊಂದು ಅದ್ಭುತವಾದ, ಬಹಳ ಫ್ಯಾಷನೇಟ್ ಆದ ವಾತಾವರಣ. ನನಗೆ ಬಹಳ ವಿಭಿನ್ನವಾದ ಅನುಭವ ಅದಾಗಿತ್ತು. ಮಣಿರತ್ನಂ ಅವರ ಸಿನಿಮಾನಲ್ಲಿ ನನ್ನನ್ನು ನಾನು ನೋಡಲು ಎದುರು ನೋಡುತ್ತಿದ್ದೇನೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಕಾಯುತ್ತಿದ್ದೇನೆ’ ಎಂದಿದ್ದಾರೆ. ಸಿನಿಮಾ ಜನವರಿ 29ಕ್ಕೆ ರಿಲೀಸ್ ಆಗಲಿದೆ.

ಚೈತ್ರಾ ಆಚಾರ್ ಅವರು ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲಿಯೂ ಸಹ ನಟನೆ ಮಾಡಿದ್ದಾರೆ. ಫೌಜಿ ಸಿನಿಮಾನಲ್ಲಿ ಅಮೆರಿಕ ಮೂಲದ ಹೊಸ ಯುವತಿಯೊಬ್ಬರು ನಾಯಕಿಯಾಗಿ ನಟನೆ ಮಾಡಿದ್ದಾರೆ. ಆದರೆ ಚೈತ್ರಾ ಅವರಿಗೂ ಸಹ ಸಿನಿಮಾನಲ್ಲಿ ಮಹತ್ವದ ಪಾತ್ರ ಇದೆಯಂತೆ. ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನೂ ಸಹ ಚೈತ್ರಾ ಮುಗಿಸಿದ್ದಾರೆ. ಆದರೆ ಪೋಸ್ಟ್ ಪ್ರೊಡಕ್ಷನ್​​ನ ಕೊನೆಯ ಹಂತ ಮಾತ್ರ ಬಾಕಿ ಇದೆಯಂತೆ. ಆ ಸಿನಿಮಾದ ಬಗ್ಗೆಯೂ ಬಹಳ ಕುತೂಹಲದಿಂದ ಇದ್ದಾರೆ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರ
ಸಿಎಂ ಸ್ಥಾನ ಸಿಗದಿದ್ದಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಬೇಸರ
ನವೆಂಬರ್ 16 ರಿಂದ 22ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 16 ರಿಂದ 22ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮೊದಲ ದಿನವೇ ಭರ್ಜರಿ ಸ್ಪಂದನೆ