ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್, ರಶ್ಮಿಕಾ ಮಂದಣ್ಣ ಕಣ್ಗಾವಲು
ತೀವ್ರ ಮಳೆಯ ಕೊರತೆಯ ನಡುವೆಯೂ ಬೆಳೆದ ಬೆಳೆಗೆ ದೃಷ್ಟಿ ತಾಗದಿರಲಿ ಎಂದು ರೈತನೋರ್ವ ಮಾಡಿದ ಉಪಾಯ ಎಲ್ಲರ ಗಮನಸೆಳೆಯುತ್ತಿದೆ. ಗದಗ ತಾಲೂಕಿನ ಮುಳಗುಂದ ಗ್ರಾಮದ ರೈತ ಶಿವಾನಂದ ಎನ್ನುವರು, ಮೆಣಸಿನಕಾಯಿ ಬಿತ್ತನೆ ಮಾಡಿದ್ದು, ಸುಮಾರು 50ಕ್ಕೂ ಹೆಚ್ಚು ಟ್ಯಾಂಕರ್ನಿಂದ ಬೆಳೆಗೆ ನೀರು ಹರಿಸಿದ್ದಾರೆ. ಇದರಿಂದ ಉತ್ತಮ ಫಲ ಕೊಟ್ಟಿದೆ. ಹೀಗಾಗಿ ಬೆಳಗೆ ದೃಷ್ಟಿ ತಾಗದಿರಲಿ ಎಂದು ಹೊಲದಲ್ಲಿ ರಶ್ಮೀಕ ಮಂದಣ್ಣ ಹಾಗೂ ರಚಿತಾ ರಾಮ್ ಫೋಟೋಗಳನ್ನು ಹಾಕಿದ್ದಾರೆ.
ಗದಗ, (ಅಕ್ಟೋಬರ್ 26): ತೀವ್ರ ಮಳೆಯ ಕೊರತೆಯ ನಡುವೆಯೂ ಬೆಳೆದ ಬೆಳೆಗೆ ದೃಷ್ಟಿ ತಾಗದಿರಲಿ ಎಂದು ರೈತನೋರ್ವ ಮಾಡಿದ ಉಪಾಯ ಎಲ್ಲರ ಗಮನಸೆಳೆಯುತ್ತಿದೆ. ಗದಗ ತಾಲೂಕಿನ ಮುಳಗುಂದ ಗ್ರಾಮದ ರೈತ ಶಿವಾನಂದ ಎನ್ನುವರು, ಮೆಣಸಿನಕಾಯಿ ಬಿತ್ತನೆ ಮಾಡಿದ್ದು, ಸುಮಾರು 50ಕ್ಕೂ ಹೆಚ್ಚು ಟ್ಯಾಂಕರ್ನಿಂದ ಬೆಳೆಗೆ ನೀರು ಹರಿಸಿದ್ದಾರೆ. ಇದರಿಂದ ಉತ್ತಮ ಫಲ ಕೊಟ್ಟಿದೆ. ಹೀಗಾಗಿ ಬೆಳಗೆ ದೃಷ್ಟಿ ತಾಗದಿರಲಿ ಎಂದು ಹೊಲದಲ್ಲಿ ರಶ್ಮೀಕ ಮಂದಣ್ಣ ಹಾಗೂ ರಚಿತಾ ರಾಮ್ ಫೋಟೋಗಳನ್ನು ಹಾಕಿದ್ದಾರೆ.
ಸಾಮಾನ್ಯವಾಗಿ ದೃಷ್ಟಿಯಾಗದಿರಲಿ ಎಂದು ಪ್ಲಾಸ್ಟಿಕ್ ಗೊಂಬೆ, ಕಪ್ಪು ಮಡಿಕೆಗಳು ಅಥವಾ ಹಳೆಯ ಚಪ್ಪಲಿಯಗಳನ್ನು ನೇತು ಹಾಕುತ್ತಾರೆ. ಆದ್ರೆ, ಈ ರೈತ ರಚಿತಾ ರಾಮ್ ಮತ್ತು ರಶ್ಮಿಕಾ ಮಂದಣ್ಣ ಅವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಬೆಳೆಯ ನಡುವೆ ಕಾಣಿಸುವ ನಟಿಯರ ಫೋಟೋ ಎಲ್ಲರ ಗಮನಸೆಳೆಯುತ್ತಿದ್ದು, ಈ ವಿಡಿಯೋ ಫುಲ್ ವೈರಲ್ ಆಗಿದೆ.

