ದರ್ಶನ್ ವಿಚಲಿತರಾಗಿದ್ದಾರೆ, ಅವರು ಚಿಕಿತ್ಸೆ ಪಡೆದುಕೊಳ್ಳಲಿ; ಇಂದ್ರಜಿತ್ ಲಂಕೇಶ್
ದರ್ಶನ್ ಅಸಂಬದ್ಧ ಪದಗಳನ್ನ ಬಳಕೆ ಮಾಡುವುದು ಬೇಡ. ಘಟನೆಯಿಂದ ನಟ ದರ್ಶನ್ ಬಹಳ ವಿಚಲಿತರಾಗಿದ್ದಾರೆ. ಅವರು ಚಿಕಿತ್ಸೆಯನ್ನು ಪಡೆದುಕೊಳ್ಳಲಿ ಎಂದಿದ್ದಾರೆ ಇಂದ್ರಜಿತ್.
ಇಂದ್ರಜಿತ್ ಲಂಕೇಶ್ ಅವರು ತಮ್ಮ ಬಳಿ ದರ್ಶನ್ ಆಡಿಯೋ ಇದೆ ಎಂದಿದ್ದರು. ಗಂಡಸಾಗಿದ್ದರೆ ಅದನ್ನು ರಿಲೀಸ್ ಮಾಡಲಿ ಎಂದು ಇಂದ್ರಜಿತ್ ಲಂಕೇಶ್ಗೆ ದರ್ಶನ್ ಸವಾಲು ಹಾಕಿದ್ದರು. ಈ ವಿಚಾರಕ್ಕೆ ಕೌಂಟರ್ ಕೊಡೋಕೆ ಇಂದ್ರಜಿತ್ ಇಂದು ಸಂಜೆ (ಜುಲೈ 17) ಸುದ್ದಿಗೋಷ್ಠಿ ನಡೆಸಿದ್ದಾರೆ.
‘ನೀವು ಹಲ್ಲೆ ಮಾಡಿದ್ರೋ, ಇಲ್ಲವೋ ಎನ್ನುವ ಬಗ್ಗೆ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡೋಣ. ನಾನು ಸಂದರ್ಶನಕ್ಕೋಸ್ಕರ ದರ್ಶನ್ಗೆ ಕರೆ ಮಾಡಿದ್ದೆ. ದರ್ಶನ್ ಕ್ಷಮೆ ಕೇಳಿದ್ರೆ ದರ್ಶನ್ ದೊಡ್ಡವರಾಗುತ್ತಿದ್ದರು. ಬಡವರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಯ ಸಿಗಬೇಕು. ದರ್ಶನ್ ಅಸಂಬದ್ಧ ಪದಗಳನ್ನ ಬಳಕೆ ಮಾಡುವುದು ಬೇಡ. ಘಟನೆಯಿಂದ ನಟ ದರ್ಶನ್ ಬಹಳ ವಿಚಲಿತರಾಗಿದ್ದಾರೆ. ಅವರು ಚಿಕಿತ್ಸೆಯನ್ನು ಪಡೆದುಕೊಳ್ಳಲಿ’ ಎಂದಿದ್ದಾರೆ ಇಂದ್ರಜಿತ್. ಪೂರ್ತಿ ಮಾಹಿತಿ ವಿಡಿಯೋದಲ್ಲಿದೆ.
Loading...
Unable to load recommendations.
Follow Us

