ದರ್ಶನ್​ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ

|

Updated on: Dec 02, 2019 | 1:05 PM

ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್​ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್​ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ. ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ: ನಟ ಚಾಲೆಂಜಿಂಗ್ […]

ದರ್ಶನ್​ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ  ಡಿ ಬಾಸ್​ ಜಪ
Follow us on

ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್​ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್​ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ.

ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್​ ಜಪ:
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪೋಷಕ ನಟ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಆಗಮಿಸಿದ್ದಾರೆ. ಕಾದಂಬರಿಕಾರರೂ ಆದ ಸ್ಥಳೀಯ ಬಿ.ಎಲ್.ವೇಣು ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು. ಆರಂಭದಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆವರಣದಲ್ಲಿ ದರ್ಶನ್ ಅಭಿಮಾನಿಗಳು ವಾದ್ಯದ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು. ಡಿ ಬಾಸ್ ಗೆ ಜೈಕಾರದ ಘೋಷಣೆ ಮೂಲಕ ಆದರದ ಸ್ವಾಗತ ಕೋರಿದರು. ಈ ವೇಳೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಹರಸಾಹಸಪಟ್ಟರು.