2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ?

2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ?

ಬೆಂಗಳೂರು: 2018ನೇ ಸಾಲಿನ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಆ ಕರಾಳ ರಾತ್ರಿ ಚಲನಚಿತ್ರಕ್ಕೆ ಅತ್ಯುತ್ತಮ ಮೊದಲ ಚಿತ್ರ ಲಭಿಸಿದೆ. ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಮತ್ತು ಡಾ.ವಿಷ್ಣುವರ್ಧನ್​ ಪ್ರಶಸ್ತಿಯು ತಲಾ 5 ಲಕ್ಷ ನಗದು ಹಾಗು 50 ಗ್ರಾಂ ಚಿನ್ನದ ಪದಕವನ್ನೊಳಗೊಂಡಿದೆ. ಆಯ್ಕೆ ಸಮಿತಿಗಳ ಅಧ್ಯಕ್ಷರುಗಳಾದ ಜೋಸೈಮನ್, ಬಸಂತಕುಮಾರ್ ಪಾಟೀಲ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಅವರು ಉಪಸ್ಥಿತರಿದ್ದರು. 2018ನೇ ಸಾಲಿನ ರಾಜ್ಯ […]

sadhu srinath

|

Jan 10, 2020 | 3:39 PM

ಬೆಂಗಳೂರು: 2018ನೇ ಸಾಲಿನ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಆ ಕರಾಳ ರಾತ್ರಿ ಚಲನಚಿತ್ರಕ್ಕೆ ಅತ್ಯುತ್ತಮ ಮೊದಲ ಚಿತ್ರ ಲಭಿಸಿದೆ. ಡಾ.ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಮತ್ತು ಡಾ.ವಿಷ್ಣುವರ್ಧನ್​ ಪ್ರಶಸ್ತಿಯು ತಲಾ 5 ಲಕ್ಷ ನಗದು ಹಾಗು 50 ಗ್ರಾಂ ಚಿನ್ನದ ಪದಕವನ್ನೊಳಗೊಂಡಿದೆ. ಆಯ್ಕೆ ಸಮಿತಿಗಳ ಅಧ್ಯಕ್ಷರುಗಳಾದ ಜೋಸೈಮನ್, ಬಸಂತಕುಮಾರ್ ಪಾಟೀಲ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಅವರು ಉಪಸ್ಥಿತರಿದ್ದರು.

2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಮೊದಲ ಚಿತ್ರ -ಆ ಕರಾಳ ರಾತ್ರಿ ಅತ್ಯುತ್ತಮ ಎರಡನೇ ಚಿತ್ರ -ರಾಮನ ಸವಾರಿ ಅತ್ಯುತ್ತಮ ಮೂರನೇ ಚಿತ್ರ -ಒಂದಲ್ಲಾ ಎರಡಲ್ಲಾ ವಿಶೇಷ ಸಾಮಾಜಿಕ ಕಳಕಳಿ ಚಿತ್ರ -ಸಂತಕವಿ ಕನಕದಾಸರ ರಾಮಧಾನ್ಯ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ಮಕ್ಕಳ ಚಿತ್ರ -ಹೂವು ಬಳ್ಳಿ ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ -ಬೆಳಕಿನ ಕನ್ನಡಿ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ -ದೇಯಿ ಬೈದೇತಿ (ತುಳು) ಅತ್ಯುತ್ತಮ ಮನರಂಜನೆ ಸಿನಿಮಾ -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಸಿನಿಮಾ -ಬೆಳಕಿನ ಕನ್ನಡಿ ಅತ್ಯುತ್ತಮ ನಟ -ರಾಘವೇಂದ್ರ ರಾಜ್ ಕುಮಾರ್ ಅತ್ಯುತ್ತಮ ನಟಿ -ಮೇಘನಾ ರಾಜ್ ಅತ್ಯುತ್ತಮ ಪೋಷಕ ನಟ -ಬಾಲಾಜಿ ಮನೋಹರ್ ಅತ್ಯುತ್ತಮ‌ ಪೋಷಕ ನಟಿ -ವೀಣಾ ಸುಂದರ್

2018ನೇ ಸಾಲಿನ ಜೀವ‌ಮಾನದ ಪ್ರಶಸ್ತಿ ಡಾ.ರಾಜ್ ಕುಮಾರ್ ಪ್ರಶಸ್ತಿ -ಜೆ.ಕೆ.ಶ್ರೀನಿವಾಸ ಮೂತ್ರಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ -ಪಿ.ಶೇಷಾದ್ರಿ ಡಾ.ವಿಷ್ಣುವರ್ಧನ್ ಪ್ರಶಸ್ತಿ -ಬಿ.ಎಸ್.ಬಸವರಾಜು

ಒಟ್ಟು 162 ಚಿತ್ರಗಳನ್ನು ವೀಕ್ಷಣೆ ಮಾಡಿ ಆಯ್ಕೆ ಸಮಿತಿಗಳ ಅಧ್ಯಕ್ಷರಾದ ಜೋಸೈಮನ್ ನೇತೃತ್ವದ ಸಮಿತಿಯು ಜೀವ‌ಮಾನದ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ

Follow us on

Related Stories

Most Read Stories

Click on your DTH Provider to Add TV9 Kannada