
ನಟ ಚಿಕ್ಕಣ್ಣ ಅವರು ಕಾಮಿಡಿಯನ್ ಪಾತ್ರದ ಮೂಲಕ ಮಿಂಚಿದವರು. ಈಗ ಅವರು ಹೀರೋ ಆಗಿ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ‘ಉಪಾಧ್ಯಕ್ಷ’ ಹೆಸರಿನ ಸಿನಿಮಾ ಮೂಲಕ ಮಿಂಚಿದ ಚಿಕ್ಕಣ್ಣ, ಈಗ ‘ಲಕ್ಷ್ಮೀಪುತ್ರ’ನಾಗಿ ಗಮನ ಸೆಳೆಯಲು ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಹಾಸ್ಯದ ಹೊಳೆಯ ಜೊತೆಗೆ ಆ್ಯಕ್ಷನ್ ಕೂಡ ಇದೆ. ಚಿಕ್ಕಣ್ಣ ಅವರು ಹಳ್ಳಿ ಹುಡುಗನ ಗೆಟಪ್ನಲ್ಲಿ ಗಮನ ಸೆಳೆದಿದ್ದಾರೆ.
‘ಲಕ್ಷ್ಮೀಪುತ್ರ’ ಚಿತ್ರದ ಟ್ರೇಲರ್ನಲ್ಲಿ ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ ಅನ್ನೋದು ಸ್ಪಷ್ಟವಾಗುತ್ತದೆ. ಕೃಷ್ಣ (ಚಿಕ್ಕಣ್ಣ) ಹಳ್ಳಿಯಲ್ಲಿರುವ ಹುಡುಗಿಯರಿಗೆಲ್ಲ ಕಾಳು ಹಾಕುತ್ತಾ ಜೀವನ ನಡೆಸುತ್ತಿರುತ್ತಾನೆ. 10 ಜನರಿಗೆ ಕಾಳು ಹಾಕಿ ರಿಜೆಕ್ಟ್ ಆಗೋದಕ್ಕಿಂತ ಒಂದೇ ಹುಡುಗಿಗೆ 10 ಬಾರಿ ಐ ಲವ್ ಯೂ ಎಂದರೆ ಬೀಳುತ್ತಾಳೆ ಎಂಬ ಬಲವಾದ ನಂಬಿಕೆಯಮೇಲೆ ಕಥಾ ನಾಯಕಿ (ವಂದಿತಾ ಗೌಡ) ಹಿಂದೆ ಬೀಳುತ್ತಾನೆ. ಈ ಚಿತ್ರದಲ್ಲಿ ಹಿರಿಯ ನಟಿ ತಾರಾ ಅವರು ಚಿಕ್ಕಣ್ಣನ ತಾಯಿ ಪಾತ್ರ ಮಾಡುತ್ತಿದ್ದಾರೆ.
‘ಲಕ್ಷ್ಮೀ ಪುತ್ರ’ ಸಿನಿಮಾದ ವಿಶೇಷತೆ ಎಂದರೆ ಚಿಕ್ಕಣ್ಣ ಅವರ ಆ್ಯಕ್ಷನ್. ಅವರು ಈ ಚಿತ್ರದಲ್ಲಿ ಜನರಿಗೆ ನಗುವಿನ ಜೊತೆ ಥ್ರಿಲ್ ಕೂಡ ಕೊಡುತ್ತಾರೆ ಎನ್ನಲಾಗಿದೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾನ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿ ಹೇಳುವಾಗ ತಡಬಡಿಸಿದ ಚಿಕ್ಕಣ್ಣ; ಯಶಸ್ ಹೇಳಿದ್ದೇನು?
‘ಲಕ್ಷ್ಮೀಪುತ್ರ’ ಚಿತ್ರವನ್ನು ಎ.ಪಿ. ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಿಸುತ್ತಿದ್ದಾರೆ. ರವಿಕಿರಣ್ ಎಂ. ಗೌಡ ನಿರ್ಮಾಣದಲ್ಲಿ ಸಾತ್ ಕೊಟ್ಟಿದ್ದಾರೆ. ಚಿತ್ರಕ್ಕೆ ಎ.ಪಿ. ಅರ್ಜುನ್ ಅವರ ಕಥೆ ಮತ್ತು ಸಾಹಿತ್ಯವಿದ್ದು, ವಿಜಯ್ ಎಸ್. ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ, ತಾರಾ ಅನುರಾಧಾ, ವಂದಿತಾ ಗೌಡ, ಕುರಿ ಪ್ರತಾಪ್, ಧರ್ಮಣ್ಣ ಹಾಗೂ ಮಿತ್ರ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಗಿರೀಶ್ ಆರ್. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದ್ದು, ‘ಡಿ ಬೀಟ್ಸ್’ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಡಿಸೆಂಬರ್ 27ರಂದು ಈ ಚಿತ್ರ ವಿಶ್ವಾದ್ಯಂತ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.