ಹೈದರಾಬಾದ್: ಆಹುತಿ, ಅಂಕುಶಂ ಅಂತಹ ಸಿನಿಮಾಗಳಲ್ಲಿ ಅತ್ಯದ್ಭುತವಾಗಿ ನಟಿಸಿದ ಡಾ. ವಿ. ರಾಜಶೇಖರ್ಗೆ ಇತ್ತೀಚೆಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 54 ವರ್ಷದ ಡಾ. ರಾಜಶೇಖರ್ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆತಂಕದ ವಿಚಾರವೆಂದರೆ ಅವರ ತಾರಾ ಪತ್ನಿ ಜೀವಿತಾಗೂ ಕೊರೊನಾ ತಗುಲಿದೆ.
ಅದಕ್ಕೂ ಮುನ್ನ.. ತಾರಾ ದಂಪತಿಯ ಇಬ್ಬರು ಪುತ್ರಿಯರಿಗೂ ಕೊರೊನಾ ಸೋಂಕು ತಗುಲಿ, ಅವರಿಬ್ಬರೂ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ರಾಜಶೇಖರ್ ಮತ್ತು ಜೀವಿತಾ ಮಾತ್ರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.
ತಮಿಳುನಾಡಿನ ಪೊಲೀಸ್ ಅಧಿಕಾರಿಯ ಪುತ್ರ ಡಾ. ರಾಜಶೇಖರ್ ವರದರಾಜನ್ ಮೂಲತಃ ವೈದ್ಯರಾಗಿದ್ದು, 30 ವರ್ಷಕ್ಕೂ ಹೆಚ್ಚು ಕಾಲದಿಂದ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ತಲಂಬ್ರಾಲು, ಶೃತಿಲಯಲು, ಆಹುತಿ, ಅಂಕುಶಂ, ಮಗಾಡು, ಅಲ್ಲರಿ ಪ್ರಿಯುಡು, ಅನ್ನ, ಸೂರ್ಯುಡು, ಶಿವಯ್ಯ, ಮನಸುನ್ನ ಮಾರಾಜು, ಮಾ ನ್ನಯ್ಯ, ಎವಡೈತೆ ನಾಕೇಂಟಿ ಮತ್ತು ಗೋರಿಂಟಾಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
The news is true that Jeevitha, Kids and I have tested positive for corona and are currently being treated in the hospital.
Both the kids are completely out of it, Jeevitha and I are feeling much better and will be back home soon!
Thank you !— Dr.Rajasekhar (@ActorRajasekhar) October 17, 2020
Published On - 5:35 pm, Thu, 22 October 20