ಬೆಂಗಳೂರು: ಬಂಧಿತ ಬಾಲಿವುಡ್ ನಟ ಕಿಶೋರ್ಗೂ ಅನುಶ್ರೀಗೂ 5 ವರ್ಷಗಳಿಂದ ನಂಟಿದೆ ಎಂದು ತಿಳಿದುಬಂದಿದೆ. ಮುಂಬೈ ಸೇರಿ ವಿವಿಧ ಕಡೆ ಇಬ್ಬರು ಒಟ್ಟಿಗೆ ಓಡಾಡಿರುವ ಮಾಹಿತಿ ಸಹ ಸಿಕ್ಕಿದೆ. ಜೊತೆಗೆ, ಕಿಶೋರ್ ಌಂಕರ್ ಅನುಶ್ರೀ ಜೊತೆ ಮಾತನಾಡಿರೋ ಕಾಲ್ ಲಿಸ್ಟ್ ಲಭ್ಯವಾಗಿದ್ದು ಆಕೆಗೆ ಕರೆ ಮಾಡಿದ್ದ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದಲ್ಲದೆ, ಅನುಶ್ರೀ ಜೊತೆ ಪಾರ್ಟಿ ಮಾಡಿರುವುದಾಗಿ ಮತ್ತೊಬ್ಬ ಬಂಧಿತ ಆರೋಪಿ ತರುಣ್ ಹೇಳಿದ್ದ ಎಂದು ತಿಳಿದುಬಂದಿದೆ.
ಪ್ರತೀಕ್ ಶೆಟ್ಟಿಯಿಂದ ಅನುಶ್ರೀವರೆಗೆ ತನಿಖೆ ಬಂದು ನಿಂತಿದ್ಹೇಗೆ?
ಈ ಬಗ್ಗೆ ಮಂಗಳೂರು ಸಿಸಿಬಿ ವಿಭಾಗಕ್ಕೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕಿಶೋರ್ ಶೆಟ್ಟಿಯನ್ನ ಬಂಧಿಸಿದ್ದರು. ಬಳಿಕ ಆರೋಪಿ ತರುಣ್ಗೆ ಕೂಡ ಖೆಡ್ಡಾ ತೋಡಿದ್ದರು. ಇದೀಗ, ಬಾಲಿವುಡ್ ನಟ ಕಿಶೋರ್ ಆ್ಯಂಕರ್ ಅನುಶ್ರೀ ಹೆಸರು ಬಾಯ್ಬಿಟ್ಟಿರುವ ಮಾಹಿತಿ ದೊರೆತಿದೆ. ಅದಲ್ಲದೆ, ಆ್ಯಂಕರ್ ಅನುಶ್ರೀ ಜೊತೆ ಪಾರ್ಟಿ ಮಾಡಿರೋದಾಗಿ ಸಹ ಒಪ್ಪಿಕೊಂಡಿದ್ದಾನಂತೆ. ಸದ್ಯ ಕಿಶೋರ್ ಹೇಳಿಕೆಯನ್ನ ಆಧರಿಸಿ ಅನುಶ್ರೀಗೆ ನೋಟಿಸ್ ಜಾರಿಯಾಗಿದೆ.