ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ‘ನಶೆ’ರಾಣಿ ರಾಗಿಣಿಗೆ ಹೊಸ ಸಮಸ್ಯೆ ಎದುರಾಗಿದೆ. ಆರೋಗ್ಯ ಸಮಸ್ಯೆಯಿದ್ರೂ ನಟಿಗೆ ಜಾಮೀನು ಸಿಗುತ್ತಿಲ್ಲ. ಜಾಮೀನು ಪಡೆಯಲು ಅವಕಾಶವಿದ್ರೂ ಅರ್ಜಿ ಸಲ್ಲಿಸಿಲ್ಲ. ಯಾಕಂದ್ರೆ ರಾಗಿಣಿ ಹಿರಿಯ ವಕೀಲರ ಹುಡುಕಾಟದಲ್ಲಿದ್ದಾರೆ.
ಹೌದು ರಾಗಿಣಿ ಸಂಬಂಧಿಕರು ಹೈಕೋರ್ಟ್ ಮುಂದೆ ವಾದಿಸಲು ಯಾರು ಸೂಕ್ತವೆಂದು ಲಾಯರ್ನ ಹುಡುಕಾಟದಲ್ಲಿದ್ದಾರೆ. ರಾಗಿಣಿ ಈ ಪ್ರಕರಣದಲ್ಲಿ ಈಗಾಗಲೇ ಒಬ್ಬರು ವಕೀಲರನ್ನು ಬದಲಿಸಿದ್ದಾರೆ. ವಕೀಲ ಸುದರ್ಶನ್ ಬದಲಿಗೆ ಕಲ್ಯಾಣ್ಕೃಷ್ಣ ಬಂಡಾರು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಈ ಹಿಂದೆ ಸಲ್ಲಿಸಿದ್ದ ಜಾಮೀನು ಸಿಗದ ಕಾರಣ ಈಗ ಮತ್ತೆ ಹೊಸ ವಕೀಲರ ಹುಡುಕಾಟದಲ್ಲಿದ್ದಾರೆ.
ಇನ್ನು ನಟಿ ಸಂಜನಾ ಈಗಾಗಲೇ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹಾಗೂ ರಾಗಿಣಿ NDPSಕೋರ್ಟ್ಗೆ ಮೂರು ಅರ್ಜಿ ಸಲ್ಲಿಸಿದ್ದರು. ಸ್ಲಿಪ್ ಡಿಸ್ಕ್ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳಿವೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಅನುಮತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲು ಕೋರ್ಟ್ ಸೂಚಿಸಿದೆ.