ಆಮಿರ್ ಖಾನ್ ಮಗಳಿಗೆ ಖಿನ್ನತೆಯಂತೆ! ಅದಕ್ಕೆ ಕಂಗನಾ ಹೇಳಿದ್ದೇನು ಗೊತ್ತಾ?
ಮುಂಬೈ: ಖ್ಯಾತ ಬಾಲಿವುಡ್ ನಟ ಆಮಿರ್ ಖಾನ್ ಪುತ್ರಿ ಐರಾ ತಾನೂ ಸಹ ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈಗ ನನ್ನ ಮನಸ್ಥಿತಿ ತುಸು ಚೇತರಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಯಸಿದೆ. ಹಾಗಾಗಿ, ಈ ವಿಡಿಯೋ ಮುಖಾಂತರ ಜನರಿಗೆ ಖಿನ್ನತೆಯ ಬಗ್ಗೆ ತಿಳಿಹೇಳಲು ಬಯಸುತ್ತೇನೆ ಎಂದು […]
ಮುಂಬೈ: ಖ್ಯಾತ ಬಾಲಿವುಡ್ ನಟ ಆಮಿರ್ ಖಾನ್ ಪುತ್ರಿ ಐರಾ ತಾನೂ ಸಹ ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈಗ ನನ್ನ ಮನಸ್ಥಿತಿ ತುಸು ಚೇತರಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಯಸಿದೆ. ಹಾಗಾಗಿ, ಈ ವಿಡಿಯೋ ಮುಖಾಂತರ ಜನರಿಗೆ ಖಿನ್ನತೆಯ ಬಗ್ಗೆ ತಿಳಿಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ‘ನಾನು 16 ವರ್ಷದವಳಾಗಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು’ ಇನ್ನು ಐರಾ ಖಾನ್ರ ವಿಡಿಯೋಗೆ ನಟಿ ಕಂಗನಾ ರಣೌತ್ ಪ್ರತಿಕ್ರಿಯಿಸಿದ್ದು ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಹಂಚಿಕೊಂಡರು. ನಾನು 16 ವರ್ಷದವಳಾಗಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಜೊತೆಗೆ, ನನ್ನ ಸಹೋದರಿಯ ಮೇಲೆ ಕಿಡಿಗೇಡಿಗಳು ಌಸಿಡ್ ಎರಚಿದ್ದರಿಂದ ನಾನು ಆಕೆಯನ್ನು ಸಹ ನೋಡಿಕೊಳ್ಳಬೇಕಾಗಿತ್ತು. ಇದೆಲ್ಲವೂ ನಾನು ಮಾಧ್ಯಮಗಳ ಸಿಟ್ಟಿನ ನಡುವೆ ಎದುರಿಸಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.
ಐರಾ ಒಡೆದ ಕುಟುಂಬದಿಂದ ಬಂದವಳು.. ಖಿನ್ನತೆ ಸಹಜ ಜೊತೆಗೆ, ಖಿನ್ನತೆಗೆ ಒಳಗಾಗಲು ಹಲವಾರು ಕಾರಣಗಳಿರುತ್ತದೆ. ಹಾಗಾಗಿ, ಸಾಂಪ್ರದಾಯಿಕ ಕುಟುಂಬಗಳಿರುವುದು ಬಹುಮುಖ್ಯ. ಅದಕ್ಕಿಂತ ಮುಖ್ಯವಾಗಿ ಆಮಿರ್ ಖಾನ್ ಪುತ್ರಿ ಐರಾ ಒಡೆದ ಕುಟುಂಬದಿಂದ ಬಂದವಳು. ಬೆಳೆಯುತ್ತಾ ಬೆಳೆಯುತ್ತಾ ಖಿನ್ನತೆ.. ಇದೆಲ್ಲ ಸಾಮಾನ್ಯ ಎಂದು World Mental Health Day ಸಂದರ್ಭದಲ್ಲಿ ಹೇಳಿದ್ದಾರೆ.
At 16 I was facing physical assault, was single handedly taking care of my sister who was burnt with acid and also facing media wrath, there can be many reasons for depression but it’s generally difficult for broken families children, traditional family system is very important. https://t.co/0paMh8gTsv
— Kangana Ranaut (@KanganaTeam) October 12, 2020