ಧನ್ವೀರ್ ಬಗ್ಗೆ ವಿಜಯಲಕ್ಷ್ಮಿಗೆ ಮಹತ್ವದ ಸೂಚನೆ ಕೊಟ್ಟ ದರ್ಶನ್

‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅನ್ನು ಜೈಲಿನಿಂದ ಹೊರಗೆ ತರಲು ಇಷ್ಟವಿಲ್ಲ’ ಎಂದು ಧನ್ವೀರ್ ಹೇಳಿದ್ದರು. ನಿನ್ನೆ (ಅಕ್ಟೋಬರ್ 27) ವಿಜಯಲಕ್ಷ್ಮಿ ಮತ್ತು ಝೈದ್ ಖಾನ್ ಅವರುಗಳು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದು, ಧನ್ವೀರ್ ಪ್ರಕರಣವನ್ನು ವಿವರಿಸಿದ್ದಾರೆ. ದರ್ಶನ್ ಕೆಲವು ಮಹತ್ವದ ಸೂಚನೆಗಳನ್ನು ವಿಜಯಲಕ್ಷ್ಮಿ ಅವರಿಗೆ ನೀಡಿದ್ದಾರೆ.

ಧನ್ವೀರ್ ಬಗ್ಗೆ ವಿಜಯಲಕ್ಷ್ಮಿಗೆ ಮಹತ್ವದ ಸೂಚನೆ ಕೊಟ್ಟ ದರ್ಶನ್
Darshan Dhanveer

Updated on: Oct 28, 2026 | 3:30 PM

ಮುಖ್ಯಾಂಶಗಳು

  • ಧನ್ವೀರ್ ಗೌಡ ಪ್ರಕರಣದ ಬಗ್ಗೆ ದರ್ಶನ್​​ಗೆ ಮಾಹಿತಿ
  • ದರ್ಶನ್​​ರ ಭೇಟಿಯಾಗಿದ್ದ ವಿಜಯಲಕ್ಷ್ಮಿ ಮತ್ತು ಝೈದ್ ಖಾನ್
  • ಪ್ರಕರಣದ ಬಗ್ಗೆ ಸೂಚನೆ ಕೊಟ್ಟ ದರ್ಶನ್

ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ಮುನಿಸು ದೊಡ್ಡದಾಗಿದ್ದು, ಇತ್ತೀಚೆಗೆ ಆಡಿಯೋ ಒಂದರಲ್ಲಿ ಧನ್ವೀರ್, ‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅನ್ನು ಜೈಲಿನಿಂದ ಹೊರಗೆ ತರಲು ಇಷ್ಟವಿಲ್ಲ’ ಎಂದಿದ್ದರು. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮತ್ತು ಅವರ ಆಪ್ತರು ಈಗಾಗಲೇ ಹಲವು ದೂರುಗಳನ್ನು ಸಹ ದಾಖಲು ಮಾಡಿದ್ದಾರೆ. ನಿನ್ನೆ (ಅಕ್ಟೋಬರ್ 27) ವಿಜಯಲಕ್ಷ್ಮಿ ಮತ್ತು ಝೈದ್ ಖಾನ್ ಅವರುಗಳು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದು, ಧನ್ವೀರ್ ಪ್ರಕರಣವನ್ನು ವಿವರಿಸಿದ್ದಾರೆ. ದರ್ಶನ್ ಕೆಲವು ಮಹತ್ವದ ಸೂಚನೆಗಳನ್ನು ವಿಜಯಲಕ್ಷ್ಮಿ ಅವರಿಗೆ ನೀಡಿದ್ದಾರೆ.

‘ನಿಮ್ಮನ್ನು ಹೊರಗೆ ಕರೆದುಕೊಂಡು ಬರಲು ನನಗೆ ಇಷ್ಟ ಇಲ್ಲವಂತೆ’ ಎಂದು ವಿಜಯಲಕ್ಷ್ಮಿ ಅವರು ದರ್ಶನ್ ಬಳಿ ಹೇಳಿದರಂತೆ, ಕೂಡಲೇ ‘ಹೌದ ಪುಟ್ಟ’ ಎಂದು ನಕ್ಕರಂತೆ ದರ್ಶನ್. ಬಳಿಕ ಕಳೆದ ವಾರ ನಡೆದ ಎಲ್ಲ ಘಟನೆಗಳನ್ನು ವಿಜಯಲಕ್ಷ್ಮಿ ಅವರು ವಿವರಿಸಿದರಂತೆ. ಧನ್ವೀರ್ ಮನೆಗೆ ಹಣ ಕೇಳಲು ಹೋಗಿದ್ದು, ನಾಗರಾಜುಗೆ ಧನ್ವೀರ್ ಬೆದರಿಕೆ ಹಾಕಿದ್ದು, ತಮ್ಮ ಮೇಲೆ ಧನ್ವೀರ್ ತಂದೆ ಕೇಸು ದಾಖಲಿಸಿದ್ದು, ತಮ್ಮ ಕಡೆಯಿಂದ ಕೇಸು ದಾಖಲಿಸಿರುವುದು, ಧನ್ವೀರ್, ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳು, ತಮ್ಮನ್ನು ‘ಫೇಕ್’ ಎಂದು ಕರೆದಿರುವುದು ಇನ್ನೂ ಹಲವು ವಿಷಯಗಳನ್ನು ವಿಜಯಲಕ್ಷ್ಮಿ ಅವರು ದರ್ಶನ್​​ ಬಳಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಅಭಿಮಾನಿ ಎಂದರೆ ಕುಟುಂಬವನ್ನೂ ಗೌರವಿಸಬೇಕು; ಧನ್ವೀರ್​ಗೆ ಅಶ್ವಿನಿ ಕಿವಿಮಾತು

ಎಲ್ಲ ವಿಷಯ ಕೇಳಿಕೊಂಡ ದರ್ಶನ್, ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದು ಕಾನೂನು ಹೋರಾಟ ಮಾಡುವಂತೆ ಸಲಹೆ ನೀಡಿದ್ದಾರಂತೆ. ‘ಧನ್ವೀರ್ ಇಷ್ಟೆಲ್ಲ ಮಾತಾಡ್ತಿದ್ದಾನೆ ಅಂದರೆ ಅವನ ಹಿಂದೆ ಯಾರಿದ್ದಾರೆ? ಎಂದು ಸಹ ದರ್ಶನ್ ಪ್ರಶ್ನೆ ಮಾಡಿದ್ದು, ‘ಅವನು ಏನಾದರೂ ಮಾತನಾಡಲಿ, ಏನಾದರೂ ಮಾಡಲಿ ನೀವು ನಿಯಮ ಬಿಟ್ಟು ಹೋಗಬೇಡಿ, ಕಾನೂನು ಹೋರಾಟ ಮಾಡಿ, ನಮಗೂ ಒಂದು ಸಮಯ ಬರುತ್ತೆ, ಆಗ ಮಾತನಾಡೋಣ’ ಎಂದು ಹೇಳಿದ್ದಾರಂತೆ ದರ್ಶನ್.

ಸುಮಾರು ಒಂದು ಗಂಟೆಗಳ ಕಾಲ ವಿಜಯಲಕ್ಷ್ಮಿ ಹಾಗೂ ದರ್ಶನ್ ಚರ್ಚೆ ನಡೆಸಿದ್ದು, ಚರ್ಚೆಯ ಸಮಯದಲ್ಲಿ ಝೈದ್ ಖಾನ್ ಸಹ ಜೊತೆಯಲ್ಲಿದ್ದರು. ‘ಅವನ ಬಗ್ಗೆ ಕೇರ್ ಮಾಡಬೇಡಿ’ ಎಂದಿರುವ ದರ್ಶನ್, ‘ವಕೀಲರ ಜೊತೆ ಮಾತನಾಡಿ ಆತನ ವಿರುದ್ಧ ಎಫ್​​ಐಆರ್ ದಾಖಲಾಗುವಂತೆ ಮಾಡಿ’ ಎಂದು ಸಹ ದರ್ಶನ್, ವಿಜಯಲಕ್ಷ್ಮಿ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ವಕೀಲರಿಂದ ಪ್ರಕರಣದ ಮುಂದಿನ ಹಂತಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರದೋಶ್ ಮಾಫಿ ಸಾಕ್ಷಿ, ಐ ವಿಟ್​ನೆಸ್​​ಗಳ ವಿಚಾರಣೆ ಇನ್ನೂ ಹಲವು ವಿಷಯಗಳ ಬಗ್ಗೆ ದರ್ಶನ್ ಅವರು ಮಾಹಿತಿ ಪಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us