AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಅಂಬರೀಶ್​​ಗೆ ಬೈದರಾ ಧನ್ವೀರ್? ‘ಅಭಿ’ ಎಂದರೆ ಯಾರು?

ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಅವರ ತಂದೆ ದೂರೊಂದನ್ನು ದಾಖಲಿಸಿದ್ದಾರೆ. ಇದರ ನಡುವೆ ಧನ್ವೀರ್ ಅವರದ್ದು ಎನ್ನಲಾದ ಹಲವು ಆಡಿಯೋಗಳು ಹಳೆಯ ವಿಡಿಯೋಗಳೆಲ್ಲ ಒಂದೊಂದೇ ಹೊರಗೆ ಬರುತ್ತಿವೆ. ಇತ್ತೀಚೆಗೆ ಹೊರಬಂದ ಆಡಿಯೋ ಒಂದನ್ನು ಧನ್ವೀರ್, ‘ಅಭಿ’ ಎಂಬುವರ ಬಗ್ಗೆ ಅವಾಚ್ಯವಾಗಿ ಬೈದಿರುವುದು ತಿಳಿಯುತ್ತಿದೆ. ಇದು ಅಭಿಷೇಕ್ ಅಂಬರೀಶ್​​ಗೆ ಧನ್ವೀರ್ ಬೈದಿದ್ದಾರೆ ಎನ್ನಲಾಗಿತ್ತು. ಆದರೆ ಸತ್ಯಾಂಶ ಬೇರೆಯೇ ಇದೆ.

ಅಭಿಷೇಕ್ ಅಂಬರೀಶ್​​ಗೆ ಬೈದರಾ ಧನ್ವೀರ್? ‘ಅಭಿ’ ಎಂದರೆ ಯಾರು?
Dhanveer Ambareesh
ಮಂಜುನಾಥ ಸಿ.
|

Updated on: Oct 28, 2026 | 12:18 PM

Share

ಮುಖ್ಯಾಂಶಗಳು

  • ನಟ ಧನ್ವೀರ್ ಗೌಡ ಆಡಿಯೋ ವೈರಲ್
  • ಅಭಿಷೇಕ್ ಅಂಬರೀಶ್​​ ಅನ್ನು ನಿಂದಿಸಿದರೇ ಧನ್ವೀರ್ ಗೌಡ
  • ಧನ್ವೀರ್ ಬೈದಿರುವ ‘ಅಭಿ’ ಎಂದರೆ ಯಾರು?

ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ದರ್ಶನ್ ನಡುವಿನ ಮುನಿಸು ಬೀದಿ ಜಗಳವಾಗಿ ಮಾರ್ಪಟ್ಟಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮತ್ತು ದರ್ಶನ್ ಆಪ್ತರೆಲ್ಲ ಸೇರಿ ಒಟ್ಟಿಗೆ ಮುಗಿಬಿದ್ದಿದ್ದಾರೆ. ಧನ್ವೀರ್ ವಿರದ್ಧ ಈಗಾಗಲೇ ಹಲವು ದೂರುಗಳು ದಾಖಲಾಗಿವೆ. ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಅವರ ತಂದೆ ದೂರೊಂದನ್ನು ದಾಖಲಿಸಿದ್ದಾರೆ. ಇದರ ನಡುವೆ ಧನ್ವೀರ್ ಅವರದ್ದು ಎನ್ನಲಾದ ಹಲವು ಆಡಿಯೋಗಳು ಹಳೆಯ ವಿಡಿಯೋಗಳೆಲ್ಲ ಒಂದೊಂದೇ ಹೊರಗೆ ಬರುತ್ತಿವೆ. ಇತ್ತೀಚೆಗೆ ಹೊರಬಂದ ಆಡಿಯೋ ಒಂದನ್ನು ಧನ್ವೀರ್, ‘ಅಭಿ’ ಎಂಬುವರ ಬಗ್ಗೆ ಅವಾಚ್ಯವಾಗಿ ಬೈದಿರುವುದು ತಿಳಿಯುತ್ತಿದೆ. ಇದು ಅಭಿಷೇಕ್ ಅಂಬರೀಶ್​​ಗೆ ಧನ್ವೀರ್ ಬೈದಿದ್ದಾರೆ ಎನ್ನಲಾಗಿತ್ತು. ಆದರೆ ಸತ್ಯಾಂಶ ಬೇರೆಯೇ ಇದೆ.

ವೈರಲ್ ಆಗಿರುವ ಆಡಿಯೋನಲ್ಲಿ ಧನ್ವೀರ್, ನಾಗು ಹಾಗೂ ಅಭಿ ಎಂಬುವರ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದು, ಅವರಿಬ್ಬರಿಗೂ ರಕ್ತಕಾರಿಕೊಳ್ಳುವಂತೆ ಹೊಡೆಯುತ್ತೇನೆ ಎಂದು ರೌಡಿ ರೀತಿ ಹೇಳಿದ್ದಾರೆ. ಆಡಿಯೋನಲ್ಲಿ ನಟ ಧನ್ವೀರ್ ಅವರು ಹೇಳಿರುವ ‘ನಾಗು’ ಎಂದರೆ ಅದು ದರ್ಶನ್​ ಅವರ ಪಿಎ ನಾಗರಾಜು, ಅಭಿ ಎಂದು ಹೇಳಿರುವುದು ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್​​ ಬಗ್ಗೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ‘ಅಭಿ’ ಎಂದರೆ ಅಭಿಷೇಕ್ ಅಂಬರೀಶ್ ಅಲ್ಲ ಬದಲಿಗೆ, ವಿಜಯಲಕ್ಷ್ಮಿ ಅವರೊಟ್ಟಿಗೆ ಇರುವ ಗೌತಮ್ ಜೈನ್ ಅವರ ಬಗ್ಗೆ ಎನ್ನಲಾಗಿದೆ. ಗೌತಮ್ ಜೈನ್​ ಅನ್ನು ಧನ್ವೀರ್ ಅಭಿ ಎಂದು ಕರೆದಿದ್ದು, ಅಭಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ:ಧನ್ವೀರ್ ಗೌಡ ವಿರುದ್ಧ ಪ್ರತಿಭಟನೆ, ಆನ್​​ಲೈನ್​​ನಲ್ಲೂ ಆಕ್ರೋಶ

ಅಭಿಷೇಕ್ ಅಂಬರೀಶ್​​ ಬಗ್ಗೆ ಧನ್ವೀರ್ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಾಗಿತ್ತು. ಆದರೆ ಈಗ ಆ ಬಗ್ಗೆ ಸ್ಪಷ್ಟನೆ ದೊರಕಿದೆ. ಧನ್ವೀರ್ ಅವರು ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್​​ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದಾದ ಬಳಿಕ ಧನ್ವೀರ್ ವಿರುದ್ಧ ಚನ್ನಪಟ್ಟಣ, ಬೆಂಗಳೂರು ಸೇರಿದಂತೆ ಇನ್ನೂ ಕೆಲವೆಡೆ ಪ್ರತಿಭಟನೆ ನಡೆದಿದ್ದು, ವಾಣಿಜ್ಯ ಮಂಡಳಿಯಲ್ಲಿ ದೂರು ಸಹ ದಾಖಲಾಗಿದೆ. ಅದಾದ ಬಳಿಕ ಅಭಿಷೇಕ್ ಅಂಬರೀಶ್ ವಿರುದ್ಧವೂ ಮಾತನಾಡಿದ್ದಾರೆ ಎಂದು ಆಡಿಯೋ ವೈರಲ್ ಆಯ್ತು. ಆದರೆ ಧನ್ವೀರ್ ಅಭಿಷೇಕ್ ಅಂಬರೀಶ್ ಅವರಿಗೆ ಬೈದಿಲ್ಲ ಎನ್ನಲಾಗುತ್ತಿದೆ.

ಇದರ ನಡುವೆ ಧನ್ವೀರ್ ಅವರ ಹಳೆಯ ವಿಡಿಯೋ ಒಂದು ಸಹ ವೈರಲ್ ಆಗಿದ್ದು ವಿಡಿಯೋನಲ್ಲಿ ಧನ್ವೀರ್ ಗೌಡ, ಫಾರಂ ಹೌಸ್​​ನ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯಗಳಿವೆ. ಮದ್ಯ ಪಾನ ಮಾಡಿಸುತ್ತಿರುವ. ಬಲವಂತದಿಂದ ಯುವಕನೊಬ್ಬನ ಬಟ್ಟೆ ಬಿಚ್ಚುತ್ತಿರುವ ದೃಶ್ಯಗಳು ಸಹ ವಿಡಿಯೋನಲ್ಲಿವೆ. ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವೆ 10 ಕೋಟಿ ರೂಪಾಯಿ ಹಣಕ್ಕೆ ಸಂಬಂಧಿಸಿದಂತೆ ಮುನಿಸು ಮೂಡಿದ್ದು, ಹಣಕಾಸಿನ ವಿಷಯಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More