ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಝೈದ್ ಖಾನ್ ಬಗ್ಗೆ ಧನ್ವೀರ್ ಗೌಡ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಆದ್ದರಿಂದ ಝೈದ್ ಖಾನ್ ಅಭಿಮಾನಿಗಳು ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಭಿಮಾನಿಗಳು ದೂರು ನೀಡಲು ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ನಟ ಝೈದ್ ಖಾನ್ ಬಗ್ಗೆ ಧನ್ವೀರ್ ಗೌಡ ಅವರು ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಆದ್ದರಿಂದ ಝೈದ್ ಖಾನ್ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಭಿಮಾನಿಗಳು ದೂರು ನೀಡಲು ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಝೈದ್ ಖಾನ್ ಅವರ ಅಭಿಮಾನಿಗಳಾಗಿ ನಾವು ಧನ್ವೀರ್ ವಿರುದ್ಧ ದೂರು ನೀಡಲು ಬಂದಿದ್ದೇವೆ. ಧನ್ವೀರ್ ಗೌಡ ಕ್ಷಮೆ ಕೇಳಬೇಕು. ಇಡೀ ರಾಜ್ಯದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಪೊಲೀಸರಿಗೂ ದೂರು ನೀಡುತ್ತೇವೆ. ಎಲ್ಲ ಜಿಲ್ಲೆಗಳಲ್ಲೂ ಅವನ ಮೇಲೆ ದೂರು ದಾಖಲಾಗುತ್ತದೆ. ಅವನು ಕ್ಷಮೆ ಕೇಳುವ ತನಕ ಹೋರಾಟ ಮುಂದುವರಿಯುತ್ತದೆ. ಮುಂದಿನ ಎರಡು-ಮೂರು ದಿನದಲ್ಲಿ ಅವನ ಮನೆಗೆ ಮುತ್ತಿಗೆ ಹಾಕುವುದು ನೂರಕ್ಕೆ ನೂರು ಸತ್ಯ’ ಎಂದು ಝೈದ್ ಖಾನ್ ಅವರ ಅಭಿಮಾನಿಗಳು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

