AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನ್ವೀರ್ ಗೌಡ ವಿರುದ್ಧ ಪ್ರತಿಭಟನೆ, ಆನ್​​ಲೈನ್​​ನಲ್ಲೂ ಆಕ್ರೋಶ

ಧನ್ವೀರ್ ಮೇಲೆ ವಿಜಯಲಕ್ಷ್ಮಿ ಅವರ ಆಪ್ತರು ಸರಣಿ ದೂರುಗಳನ್ನು ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಧನ್ವೀರ್ ಅವರ ತಂದೆ, ವಿಜಯಲಕ್ಷ್ಮಿ ಮತ್ತು ಅವರ ಕೆಲ ಸಂಗಡಿಗರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಧನ್ವೀರ್ ವಿರುದ್ಧ ಪ್ರತಿಭಟನೆ ಸಹ ನಡೆದಿದ್ದು, ಧನ್ವೀರ್ ಚಿತ್ರಕ್ಕೆ ಮಸಿ ಬಳಿಯಲಾಗಿದೆ.

ಧನ್ವೀರ್ ಗೌಡ ವಿರುದ್ಧ ಪ್ರತಿಭಟನೆ, ಆನ್​​ಲೈನ್​​ನಲ್ಲೂ ಆಕ್ರೋಶ
Dhanveer Gowda
ಮಂಜುನಾಥ ಸಿ.
|

Updated on: Oct 25, 2026 | 7:42 PM

Share

ಮುಖ್ಯಾಂಶಗಳು

  • ಧನ್ವೀರ್ ಗೌಡ ವಿರುದ್ಧ ಪ್ರತಿಭಟನೆ
  • ಧನ್ವೀರ್ ಭಾವಚಿತ್ರಕ್ಕೆ ಮಸಿ ಬಳಿದ ಪ್ರತಿಭಟನಾಕಾರರು
  • ಚನ್ನಪಟ್ಟಣದಲ್ಲಿ ನಡೆಯಿತು ಧನ್ವೀರ್ ವಿರುದ್ಧ ಪ್ರತಿಭಟನೆ

ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಮುನಿಸು ತಾರಕಕ್ಕೆ ಏರಿದ್ದು, ಇಬ್ಬರ ನಡುವಿನ ವೈಮನಸ್ಯ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಳೆದ ಕೆಲ ತಿಂಗಳುಗಳಿಂದಲೂ ಈ ಇಬ್ಬರ ನಡುವೆ ಮುನಿಸು ಇದ್ದೇ ಇತ್ತು. ಆದರೆ ಕಳೆದ ಕೆಲ ದಿನಗಳಿಂದ ಅದು ಬೀದಿ ಜಗಳವಾಗಿ ಮಾರ್ಪಾಡಾಗಿದೆ. ಧನ್ವೀರ್ ಮೇಲೆ ವಿಜಯಲಕ್ಷ್ಮಿ ಅವರ ಆಪ್ತರು ಸರಣಿ ದೂರುಗಳನ್ನು ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಧನ್ವೀರ್ ಅವರ ತಂದೆ, ವಿಜಯಲಕ್ಷ್ಮಿ ಮತ್ತು ಅವರ ಕೆಲ ಸಂಗಡಿಗರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಧನ್ವೀರ್ ವಿರುದ್ಧ ಪ್ರತಿಭಟನೆ ಸಹ ನಡೆದಿದ್ದು, ಧನ್ವೀರ್ ಚಿತ್ರಕ್ಕೆ ಮಸಿ ಬಳಿಯಲಾಗಿದೆ.

ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆಡಿಯೋಗಳು, ಹೇಳಿಕೆಗಳು ಹರಿದಾಡುತ್ತಿವೆ. ಇದೀಗ ಧನ್ವೀರ್ ಹಾಗೂ ಅಗಂತುಕರೊಬ್ಬರ ನಡೆದಿದೆ ಎನ್ನಲಾದ ಮೊಬೈಲ್ ಸಂಭಾಷಣೆಯ ಆಡಿಯೋ ಒಂದು ವೈರಲ್ ಆಗಿದೆ. ಆ ಆಡಿಯೋನಲ್ಲಿ ಧನ್ವೀರ್ (ಖಾತ್ರಿ ಇಲ್ಲ), ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಚನ್ನಪಟ್ಟಣದಲ್ಲಿ ಧನ್ವೀರ್ ವಿರುದ್ಧ ಪ್ರತಿಭಟನೆ ನಡೆದಿದೆ.

ಚನ್ನಪಟ್ಟಣದ ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ಕೋಟೆ ಪ್ರದೇಶದಲ್ಲಿ ಪ್ರತಿಭಟನೆ ನಡೆದಿದ್ದು, ಅಭಿಮಾನಿ ಬಳಗದ ಅಧ್ಯಕ್ಷ ಮಹಮದ್ ತೌಸಿಫ್ ನೇತೃತ್ವದಲ್ಲಿ ಕೆಲವರು ನಟ ಧನ್ವೀರ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಝೈದ್ ಖಾನ್ ಕುರಿತು ಧನ್ವೀರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ನಟ ಧನ್ವೀರ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಧನ್ವೀರ್ ಅವರ ಭಾವಚಿತ್ರಕ್ಕೆ ಮಸಿಯನ್ನು ಪ್ರತಿಭಟನಾಕಾರರು ಹಚ್ಚಿದರು.

ಇದನ್ನೂ ಓದಿ:ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ನಟನ ಪರ ವಕೀಲ

ಸಾಮಾಜಿಕ ಜಾಲತಾಣದಲ್ಲಿಯೂ ಸಹ ಧನ್ವೀರ್ ವಿರುದ್ಧ ಆಕ್ರೋಶ ಕಂಡು ಬರುತ್ತಿದೆ. ದರ್ಶನ್ ಅವರ ಅಭಿಮಾನಿಗಳ ಪೇಜುಗಳಲ್ಲಿ ಧನ್ವೀರ್ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ. ದರ್ಶನ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ‘ಇಂಥಹವರಿಂದಲೇ ದರ್ಶನ್​​ಗೆ ಕೆಟ್ಟ ಸಮಯ ಬಂದಿದೆ’ ಎಂಬಿತ್ಯಾದಿ ಪೋಸ್ಟ್​​ಗಳು ಹಂಚಿಕೆ ಆಗುತ್ತಿವೆ. ದರ್ಶನ್​​ ಅವರ ಫ್ಯಾನ್ಸ್ ಪೇಜುಗಳು ವಿಜಯಲಕ್ಷ್ಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಧನ್ವೀರ್, ತಾವು ಎಲ್ಲರ ಮುಖವಾಡ ಬಯಲು ಮಾಡುತ್ತೀನಿ ಎಂದು ಹೇಳಿದ್ದು, ಶೀಘ್ರವೇ ಸುದ್ದಿಗೋಷ್ಠಿ ನಡೆಸುವುದಾಗಿಯೂ ಸಹ ಹೇಳಿದ್ದಾರೆ. ಮುಂದೇನಾಗಲಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ