DBossBirthdayCDP: ಡಿ ಬಾಸ್ ದರ್ಶನ್​ ಜನ್ಮದಿನಕ್ಕೆ ಕಾಮನ್​ ಡಿಪಿ ಅಭಿಯಾನ ಆರಂಭಿಸಿದ ಅಭಿಮಾನಿಗಳು…

DBoss Darshan Birthday: ದರ್ಶನ್​ ಕಾಡಿನ ಮಧ್ಯೆ, ಪ್ರಾಣಿಗಳ ಜತೆ ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಈ ಫೋಟೋಗಳನ್ನು ರಿಶಬ್​ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ.

DBossBirthdayCDP: ಡಿ ಬಾಸ್ ದರ್ಶನ್​ ಜನ್ಮದಿನಕ್ಕೆ ಕಾಮನ್​ ಡಿಪಿ ಅಭಿಯಾನ ಆರಂಭಿಸಿದ ಅಭಿಮಾನಿಗಳು...
ದರ್ಶನ್​ ಕಾಮನ್​ ಡಿಪಿ

Updated on: Feb 13, 2021 | 8:36 PM

ದರ್ಶನ್​ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬ ಇದ್ದಂತೆ. ಅಭಿಮಾನಿಗಳು ದರ್ಶನ್​ ಮನೆ ಬಳಿ ತೆರಳಿ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಾರೆ. ದರ್ಶನ್​ ಕೂಡ ಪ್ರತಿಯೊಬ್ಬರನ್ನೂ ಭೇಟಿ ಮಾಡಿ, ಅವರು ನೀಡುವ ಉಡುಗರೆ ಸ್ವೀಕರಿಸುತ್ತಾರೆ. ಇನ್ನು, ಜನ್ಮದಿನಕ್ಕೂ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಬರ್ತ್​ಡೇ ಕೌಂಟ್​​ಡೌನ್​ ಪ್ರಾರಂಭಿಸಲಾಗುತ್ತದೆ. ಕಾಮನ್​ ಡಿಪಿ ಚಾಲೆಂಜ್​ ನೀಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕಾಮನ್​ ಡಿಪಿ ಚಾಲೆಂಜ್​ ಆರಂಭಿಸಿದ್ದಾರೆ ಅಭಿಮಾನಿಗಳು.

ಪ್ರತಿ ವರ್ಷ ಕಾಮನ್​ ಡಿಪಿ ಚಾಲೆಂಜ್​ಗೆ ದರ್ಶನ್​ ಅವರ ಒಂದು ಫೋಟೋವನ್ನು ಅಭಿಮಾನಿಗಳು ರಿಲೀಸ್​ ಮಾಡುತ್ತಾರೆ. ದರ್ಶನ್​ ಜನ್ಮದಿನದಂದು ವಾಟ್ಸಾಪ್​, ಫೇಸ್​ಬುಕ್​ನಲ್ಲಿ ಈ ಡಿಪಿ ರಾರಾಜಿಸಲಿದೆ. ನಟನೆಯಲ್ಲಿ ಮಾತ್ರವಲ್ಲದೇ, ಪ್ರಾಣಿಗಳ ರಕ್ಷಣೆ ಹಾಗೂ ಛಾಯಾಗ್ರಹಣದಲ್ಲಿ ದರ್ಶನ್​ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಮೈಸೂರಿನ ಝೂನಲ್ಲಿ ಹುಲಿಯನ್ನು ಕೂಡ ಅವರು ದತ್ತು ಪಡೆದಿದ್ದಾರೆ. ಆಗಾಗ, ಕಾಡಿಗೆ ತೆರಳಿ ಫೋಟೋಗ್ರಫಿ ಕೂಡ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅದೇ ಥೀಮ್​ಮೇಲೆ ಕಾಮನ್​ ಡಿಪಿ ಸಿದ್ಧಪಡಿಸಲಾಗಿದೆ.

ದರ್ಶನ್​ ಕಾಡಿನ ಮಧ್ಯೆ, ಪ್ರಾಣಿಗಳ ಜತೆ ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಈ ಫೋಟೋಗಳನ್ನು ರಿಶಬ್​ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us