ಧ್ರುವ ಸರ್ಜಾ ಜನ್ಮದಿನಕ್ಕೆ ‘ಕೆಮಿಸ್ಟ್ರಿ’ ಸಿನಿಮಾ ಅನೌನ್ಸ್; ಸ್ಯಾಂಡಲ್‌ವುಡ್‌ಗೆ ನಭಾ ನಟೇಶ್ ಕಂಬ್ಯಾಕ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜನ್ಮದಿನದ ಅಂಗವಾಗಿ 'ಕೆಮಿಸ್ಟ್ರಿ' ಸಿನಿಮಾ ಅನೌನ್ಸ್ ಆಗಿದೆ. 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ವಿಶಾಲ್ ಆತ್ರೇಯ ನಿರ್ದೇಶಿಸುತ್ತಿದ್ದು, ಸುದೀರ್ಘ ವಿರಾಮದ ನಂತರ ನಟಿ ನಭಾ ನಟೇಶ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ ಧ್ರುವಗೆ ಜೋಡಿಯಾಗುತ್ತಿದ್ದಾರೆ.

ಧ್ರುವ ಸರ್ಜಾ ಜನ್ಮದಿನಕ್ಕೆ ‘ಕೆಮಿಸ್ಟ್ರಿ’ ಸಿನಿಮಾ ಅನೌನ್ಸ್; ಸ್ಯಾಂಡಲ್‌ವುಡ್‌ಗೆ ನಭಾ ನಟೇಶ್ ಕಂಬ್ಯಾಕ್
ಧ್ರುವ ಸರ್ಜಾ-ನಭಾ

Updated on: Oct 06, 2026 | 10:51 AM

ಮುಖ್ಯಾಂಶಗಳು

  • ಧ್ರುವ ಸರ್ಜಾ ಬರ್ತ್‌ಡೇ ಸರ್ಪ್ರೈಸ್
  • ವಿಶಾಲ್ ಆತ್ರೇಯ ನಿರ್ದೇಶನದಲ್ಲಿ ‘ಕೆಮಿಸ್ಟ್ರಿ’ ಶುರು
  • ಸ್ಯಾಂಡಲ್‌ವುಡ್‌ಗೆ ಹಿಂತಿರುಗಿದ 'ನಭಾ ನಟೇಶ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು (ಅಕ್ಟೋಬರ್ 6) ಜನ್ಮದಿನದ ಸಂಭ್ರಮ. ಇದರ ಅಂಗವಾಗಿ ಅವರ ಅಭಿಮಾನಿಗಳಿಗೆ ಚಿತ್ರತಂಡದಿಂದ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಖ್ಯಾತ ಟಾಲಿವುಡ್ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಕೃತಿ ಪ್ರಸಾದ್ ನಿರ್ಮಿಸುತ್ತಿರುವ ಈ ನೂತನ ಸಿನಿಮಾಗೆ ‘ಕೆಮಿಸ್ಟ್ರಿ’ ಎಂದು ಶೀರ್ಷಿಕೆ ಇಡಲಾಗಿದೆ. ಜೊತೆಗೆ ಪ್ರೋಮೋ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ‘ತತ್ಸಮ ತದ್ಭವ’ ಚಿತ್ರದ ಮೂಲಕ ಗಮನಸೆಳೆದಿದ್ದ ನಿರ್ದೇಶಕ ವಿಶಾಲ್ ಆತ್ರೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬಿಡುಗಡೆಯಾಗಿರುವ ಟೀಸರ್​ನಲ್ಲಿ ಧ್ರುವ ಸರ್ಜಾ ಅವರ ಮಾಸ್ ಮತ್ತು ಕ್ಲಾಸ್ ಶೈಲಿಯ ಡೈಲಾಗ್‌ಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ‘ಪ್ರೀತಿ, ಕೋಪ, ಫೈಟು, ಕೇರಿಂಗ್ ಹಾಗೂ ಬ್ರೇಕಪ್… ಈ ಎಲ್ಲದರ ನಡುವೆ ಇರೋ ಒಂದೇ ಒಂದು ಕಾಮನ್ ಪಾಯಿಂಟ್ ಎಂದರೆ ಅದುವೇ ಕೆಮಿಸ್ಟ್ರಿ’ ಎನ್ನುವ ಡೈಲಾಗ್ಸ್ ವೀಡಿಯೊದಲ್ಲಿ ಹೈಲೈಟ್ ಆಗಿವೆ. ಹೈ-ವೋಲ್ಟೇಜ್ ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವ, ಈ ಬಾರಿ ಈ ಫೀಲ್-ಗುಡ್ ಎಮೋಷನಲ್ ಶೇಡ್‌ನಲ್ಲಿ ಡೈಲಾಗ್ ಹೊಡೆಯುತ್ತಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ವಿಭಿನ್ನ ಕಥಾಹಂದರ ಹಾಗೂ ಹೆಚ್ಚಿದ ನಿರೀಕ್ಷೆ:

ಇಲ್ಲಿಯವರೆಗೆ ಧ್ರುವ ಸರ್ಜಾ ಅವರನ್ನು ಪಕ್ಕಾ ಮಾಸ್ ಮತ್ತು ರಗಡ್ ಲುಕ್‌ನಲ್ಲಿ ನೋಡಿದ್ದ ಅಭಿಮಾನಿಗಳಿಗೆ ನಿರ್ದೇಶಕ ವಿಶಾಲ್ ಆತ್ರೇಯ ಅವರು ಈ ಬಾರಿ ಸಂಪೂರ್ಣ ವಿಭಿನ್ನ ಹಾಗೂ ಎಮೋಷನಲ್ ಅವತಾರದಲ್ಲಿ ತೋರಿಸಲು ಹೊರಟಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಶೀಘ್ರದಲ್ಲೇ ಉಳಿದ ತಾರಾಗಣ ಹಾಗೂ ಚಿತ್ರೀಕರಣದ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

ಸ್ಯಾಂಡಲ್‌ವುಡ್‌ಗೆ ನಭಾ ನಟೇಶ್ ಗ್ರ್ಯಾಂಡ್ ಕಂಬ್ಯಾಕ್:

ಈ ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ನಟಿ ನಭಾ ನಟೇಶ್ ಅವರ ಕನ್ನಡ ಚಿತ್ರರಂಗದ ಮರುಪ್ರವೇಶ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ‘ವಜ್ರಕಾಯ’ ಸಿನಿಮಾದಲ್ಲಿ ಧೂಳೆಬ್ಬಿಸಿದ್ದ ನಭಾ, ನಂತರ ‘ಲೀ’ ಸಿನಿಮಾದಲ್ಲೂ ನಟಿಸಿದ್ದರು. ದೀರ್ಘ ವಿರಾಮದ ಬಳಿಕ ಈಗ ಕನ್ನಡಕ್ಕೆ ಮರಳಿದ್ದು, ಧ್ರುವ ಸರ್ಜಾ ಜೊತೆಗೆ ಮೊದಲ ಬಾರಿಗೆ ಜೋಡಿಯಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 

ಟಾಲಿವುಡ್‌ನಲ್ಲಿ ನಭಾ ಸಾಧಿಸಿದ ಸಫಲ ಪಯಣ:

ಕನ್ನಡದ ನಂತರ ತೆಲುಗು ಚಿತ್ರರಂಗಕ್ಕೆ ಹೋದ ನಭಾ ನಟೇಶ್, ‘ನನ್ನು ದೋಚುಕುಂದುವಟೇ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದರು. ಬಳಿಕ ಉಸ್ತಾದ್ ರಾಮ್ ಪೋತಿನೇನಿ ಜೊತೆ ನಟಿಸಿದ ‘ಇಸ್ಮಾರ್ಟ್ ಶಂಕರ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ, ಅವರಿಗೆ ‘ಇಸ್ಮಾರ್ಟ್ ಬ್ಯೂಟಿ’ ಎನ್ನುವ ಹೆಸರು ತಂದುಕೊಟ್ಟಿತು. ನಂತರ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಪ್ರಮುಖ ನಟಿಯಾಗಿ ಹೊರಹೊಮ್ಮಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us