ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ -ಮತ್ತೊಬ್ಬ ನಟ ತಪ್ಪೊಪ್ಪಿಗೆ?

ಬೆಂಗಳೂರು: ಯಾವುದೇ ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ ಎಂದು ಮತ್ತೊಬ್ಬ ನಟ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೊಂಡಿರುವಿದಾಗಿ ತಿಳಿದುಬಂದಿದೆ.  ಲಾಕ್‌ಡೌನ್‌ ಸಮಯದಲ್ಲಿ ಮೂರು-ನಾಲ್ಕು ಬಾರಿ ಕೊಕೇನ್‌ ಸೇವಿಸಿರುವುದಾಗಿ CCB ಅಧಿಕಾರಿಗಳ ಬಳಿ ನಟ ದಿಗಂತ್‌ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮನೆಯಲ್ಲಿ ನಾನು ಕೊಕೇನ್‌ ಸೇವಿಸಿಲ್ಲ. ತಂದೆ-ತಾಯಿ ಎದುರು ಕೊಕೇನ್‌ ಸೇವಿಸಲಾಗಲ್ಲ. ಸ್ನೇಹಿತರ ಮನೆಯಲ್ಲಿ ಸ್ನೇಹಿತರೊಂದಿಗೆ ಸೇರಿ ಕೊಕೇನ್ ಸೇವಿಸಿದ್ದೇನೆ ಎಂದು ದೂಧ್‌ಪೇಡಾ ದಿಗಂತ್‌ ತಪ್ಪೊಪ್ಪಿಗೆ ನೀಡಿದ್ದಾರಂತೆ. ಕೊಕೇನ್​ ನೈಜೀರಿಯಾ ಮೂಲದ […]

ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ -ಮತ್ತೊಬ್ಬ ನಟ ತಪ್ಪೊಪ್ಪಿಗೆ?
Follow us
KUSHAL V
|

Updated on:Sep 23, 2020 | 4:29 PM

ಬೆಂಗಳೂರು: ಯಾವುದೇ ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ ಎಂದು ಮತ್ತೊಬ್ಬ ನಟ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೊಂಡಿರುವಿದಾಗಿ ತಿಳಿದುಬಂದಿದೆ.  ಲಾಕ್‌ಡೌನ್‌ ಸಮಯದಲ್ಲಿ ಮೂರು-ನಾಲ್ಕು ಬಾರಿ ಕೊಕೇನ್‌ ಸೇವಿಸಿರುವುದಾಗಿ CCB ಅಧಿಕಾರಿಗಳ ಬಳಿ ನಟ ದಿಗಂತ್‌ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮನೆಯಲ್ಲಿ ನಾನು ಕೊಕೇನ್‌ ಸೇವಿಸಿಲ್ಲ. ತಂದೆ-ತಾಯಿ ಎದುರು ಕೊಕೇನ್‌ ಸೇವಿಸಲಾಗಲ್ಲ. ಸ್ನೇಹಿತರ ಮನೆಯಲ್ಲಿ ಸ್ನೇಹಿತರೊಂದಿಗೆ ಸೇರಿ ಕೊಕೇನ್ ಸೇವಿಸಿದ್ದೇನೆ ಎಂದು ದೂಧ್‌ಪೇಡಾ ದಿಗಂತ್‌ ತಪ್ಪೊಪ್ಪಿಗೆ ನೀಡಿದ್ದಾರಂತೆ. ಕೊಕೇನ್​ ನೈಜೀರಿಯಾ ಮೂಲದ ಪ್ರಜೆಗಳ ಮೂಲಕ ಸ್ನೇಹಿತನೊಬ್ಬ ತರಿಸಿದ್ದ. ಹೀಗಾಗಿ, ಎಲ್ಲರೂ ಒಟ್ಟಿಗೆ ಸೇರಿ ಕೊಕೇನ್‌ ಸೇವಿಸಿದ್ದೆವು ಎಂದು ತನಿಖಾಧಿಕಾರಿಗಳಿಂದ ವಿಚಾರಣೆ ವೇಳೆ ದಿಗಂತ್‌ ಹೇಳಿಕೆ ಕೊಟ್ಟಿದ್ದಾರಂತೆ.

ಸಾಕ್ಷ್ಯಗಳ ಸಮೇತ ಸಿಸಿಬಿ ಇಂಟರೋಗೇಶನ್: ಇನ್ನು ವಿಚಾರಣೆ ವೇಳೆ ದಿಗಂತ್​ ಮೊದಲ ಸಲ ಹೇಳಿದ್ದ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಈಗಿನ ಹೇಳಿಕೆಗಳು ಕೊಡುತ್ತಿದ್ದಾರಂತೆ. ಈ ಬಾರಿ ಸಾಕ್ಷ್ಯಗಳನ್ನ ಮುಂದಿಟ್ಟು ಪ್ರಶ್ನೆ ಕೇಳುತ್ತಿರುವ ಅಧಿಕಾರಿಗಳು ಆರೋಪಿ ಬೆನಾಲ್ಡ್ ವುಡ್ಡೆನಾ ಹೇಳಿಕೆ ಆಧರಿಸಿ ದಿಗಂತ್ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಬೆನಾಲ್ಡ್ ವಿಚಾರಣೆ ವೇಳೆ ದಿಗಂತ್ ಹೆಸರು ಪ್ರಸ್ತಾಪವಾಗಿದ್ದು ಹೀಗಾಗಿ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮೊದಲ ಬಾರಿ ನಡೆದ ವಿಚಾರಣೆಯಲ್ಲಿ ಕೂಲ್ ಆಗಿ ಬಂದಿದ್ದ ದಿಗಂತ್ ಈ ಬಾರಿ ಸಪ್ಪೆ ಮುಖ ಇಟ್ಟುಕೊಂಡು ಬಂದಿದ್ದರು ಎಂದು ಹೇಳಲಾಗಿದೆ.

‘ನನ್ನ ಕೆರಿಯರ್ ಹಾಳಾಗತ್ತೆ ಮತ್ತೆ ಕರೆಯಬೇಡಿ ಪ್ಲೀಸ್’ ನಟ ದಿಗಂತ್ ವಿಚಾರಣೆ ವೇಳೆ ನನ್ನ ಕೆರಿಯರ್ ಹಾಳಾಗತ್ತೆ. ನನ್ನನ್ನ ಮತ್ತೆ ಕರೆಯಬೇಡಿ ಪ್ಲೀಸ್ ಎಂದು ಕೇಳಿಕೊಂಡಿದ್ದಾರಂತೆ. ಆಗ, ವಿಚಾರಣೆ ಮುಗಿಸಿ ನೀವು ಹೊರಡಿ. ಮತ್ತೆ ಅವಶ್ಯಕತೆ ಬಿದ್ದರೆ ನಾವು ಕರೆಯುತ್ತೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರಂತೆ.

ಪದೇ ಪದೇ ಈ ರೀತಿ ವಿಚಾರಣೆಗೆ ಬರೋದ್ರಿಂದ ನನ್ನ ಕೆರಿಯರ್​ಗೆ ಡ್ಯಾಮೆಜ್ ಆಗತ್ತೆ ಸರ್. ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತೆ. ಏನೇ ಇದ್ರೂ ಒಂದೇ ಸಲ ವಿಚಾರಿಸಿ ಪ್ಲೀಸ್, ಉತ್ತರಿಸುತ್ತೇನೆ ಎಂದು ದಿಗಂತ್ ಮನವಿ ಮಾಡಿಕೊಂಡಿದ್ದಾರಂತೆ. ಅವಶ್ಯಕತೆ ಇದ್ದಾಗ ಬರಲೇಬೇಕಾಗುತ್ತೆ ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ಕೊಕೇನ್‌ ತಲುಪಿಸಿದ ನೈಜೀರಿಯಾ ಪ್ರಜೆಗಳು ಎಸ್ಕೇಪ್‌ ಇನ್ನು ದಿಗಂತ್‌ ಮತ್ತು ನಟನ ಸ್ನೇಹಿತರಿಗೆ ಕೊಕೇನ್‌ ತಲುಪಿಸಿದ ನೈಜೀರಿಯಾ ಪ್ರಜೆಗಳು ಎಸ್ಕೇಪ್‌ ಆಗಿದ್ದಾರಂತೆ. ನಟ ದಿಗಂತ್‌ರನ್ನು ಮೊದಲ ಬಾರಿ ವಿಚಾರಣೆಗೆ ಕರೆದ ಸಮಯದಲ್ಲೇ ಎಸ್ಕೇಪ್‌ ಆಗಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಮೊಬೈಲ್‌ ಸ್ವಿಚ್‌ ಆಫ್​ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ವಿಚಾರಣೆ ವೇಳೆ ದಿಗಂತ್‌ ಮೊಬೈಲ್‌ನಲ್ಲಿ ನೈಜಿರಿಯಾ ಪ್ರಜೆಗಳ ಮಾಹಿತಿ ಸಿಕ್ಕಿತ್ತು. ಹಾಗಾಗಿ, ನೈಜೀರಿಯಾ ಪ್ರಜೆಗೆ ದಿಗಂತ್​ ಮೊಬೈಲ್‌ ಮೂಲಕ ಸಂಪರ್ಕಿಸಿರುವ ಬಗ್ಗೆ ವಿಚಾರಣೆ ನಡೆಸಲಾಯಿತಂತೆ. ಇಬ್ಬರ ನಡುವೆ ಮೊಬೈಲ್‌ಗಳಲ್ಲಿ ಕೋಡ್‌ವರ್ಡ್‌ ಮೂಲಕ ಮೆಸೇಜ್‌ ಕಮ್ಯುನಿಕೇಷನ್​‌ ಆಗಿತ್ತು ಎಂಬ ಮಾಹಿತಿ ದೊರೆತಿದೆ.

ಆದರೆ, ಈ ವಿಚಾರವಾಗಿ ಸೂಕ್ತ ಉತ್ತರ ನೀಡದೆ ತಬ್ಬಿಬ್ಬಾದ ದಿಗಂತ್‌ ಕೊಕೇನ್‌ ಸಂಬಂಧ ಉತ್ತರಿಸಲು ತನಿಖಾಧಿಕಾರಿಗಳ ಬಳಿ ಸಮಯ ಕೋರಿದ್ದಾರಂತೆ.

Published On - 4:09 pm, Wed, 23 September 20

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್