AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫ್ರೆಂಡ್ಸ್ & ಫ್ಯಾಮಿಲಿಸ್’: ಮತ್ತೆ ಒಂದಾದ ‘ದಿಯಾ’ ಜೋಡಿ

ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ರವಿ ಅವರುಗಳು ಒಟ್ಟಿಗೆ ನಟನೆ ಮಾಡಿದ್ದ ‘ದಿಯಾ’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಅನ್ನು ಕೆಎಸ್ ಅಶೋಕ್ ಕುಮಾರ್ ನಿರ್ದೇಶನ ಮಾಡಿದ್ದರು. ಆದರೆ ಆ ಸಿನಿಮಾದ ಬಳಿಕ ಯಾವುದೇ ಹೊಸ ಕನ್ನಡ ಸಿನಿಮಾ ಅನ್ನು ಅಶೋಕ್ ನಿರ್ದೇಶಿಸಿರಲಿಲ್ಲ. ಆದರೆ ಇದೀಗ ತಮ್ಮ ಅಶೋಕ್ ಕುಮಾರ್ ಮತ್ತೆ ಬಂದಿದ್ದಾರೆ. ಮತ್ತೆ ‘ದಿಯಾ’ ಜೋಡಿಯೊಟ್ಟಿಗೆ ಮರಳಿದ್ದಾರೆ.

‘ಫ್ರೆಂಡ್ಸ್ & ಫ್ಯಾಮಿಲಿಸ್’: ಮತ್ತೆ ಒಂದಾದ ‘ದಿಯಾ’ ಜೋಡಿ
Diya Friends
ಮಂಜುನಾಥ ಸಿ.
|

Updated on:Nov 15, 2026 | 9:05 PM

Share

‘ದಿಯಾ’ ಕೋವಿಡ್ ಸಮಯದಲ್ಲಿ ಒಟಿಟಿಯಲ್ಲಿ ಭಾರಿ ಹಿಟ್ ಆದ ಸಿನಿಮಾ. ಈಗ ಚಿತ್ರರಂಗದಲ್ಲಿ ಬೇಡಿಕೆಯ ನಟರುಗಳೆನಿಸಿಕೊಂಡಿರುವ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ರವಿ ಅವರುಗಳು ಒಟ್ಟಿಗೆ ನಟನೆ ಮಾಡಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಅನ್ನು ಕೆಎಸ್ ಅಶೋಕ ನಿರ್ದೇಶನ ಮಾಡಿದ್ದರು. ಆದರೆ ಆ ಸಿನಿಮಾದ ಬಳಿಕ ಯಾವುದೇ ಹೊಸ ಕನ್ನಡ ಸಿನಿಮಾ ಅನ್ನು ಅಶೋಕ ನಿರ್ದೇಶಿಸಿರಲಿಲ್ಲ. ಆದರೆ ಇದೀಗ ತಮ್ಮ ಅಶೋಕ್ ಕುಮಾರ್ ಮತ್ತೆ ಬಂದಿದ್ದಾರೆ. ಮತ್ತೆ ‘ದಿಯಾ’ ಜೋಡಿಯೊಟ್ಟಿಗೆ ಮರಳಿದ್ದಾರೆ.

‘6-5=2’ ಹಾಗೂ ಸೂಪರ್ ಹಿಟ್ ‘ದಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕೆ ಎಸ್ ಅಶೋಕ ‘ಫ್ರೆಂಡ್ಸ್ & ಫ್ಯಾಮಿಲಿಸ್’ ಹೆಸರಿನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಇಂದು ಅಧಿಕೃತವಾಗಿ ಲಾಂಚ್ ಆಗಿದೆ. ‘ದಿಯಾ’ ಚಿತ್ರದ ಯಶಸ್ವಿ ಜೋಡಿಯಾದ ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ‘ಫ್ರೆಂಡ್ಸ್ & ಫ್ಯಾಮಿಲಿಸ್’ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆ ನಿವೀನ್ (ಶ್ರೀಧರ್) ಮತ್ತು ಆಯಿಷಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾನಲ್ಲಿ ಖುಷಿ ರವಿ ಇರುವ ಬಗ್ಗೆ ಈಗಲೇ ಚಿತ್ರತಂಡ ಏನೂ ಹೇಳಿಲ್ಲ.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಶೋಕ್, ‘‘ಫ್ರೆಂಡ್ಸ್ & ಫ್ಯಾಮಿಲಿಸ್’ ಮೂವರು ಗೆಳೆಯರು ಮತ್ತು ಅವರ ಕುಟುಂಬಗಳ ಸುತ್ತ ನಡೆಯುವ ಒಂದು ಹಾಸ್ಯಾತ್ಮಕ ಸೋಶಿಯಲ್ ಡ್ರಾಮಾ. ‘ದಿಯಾ’ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಇದ್ದಂತಹ ಭಾವನಾತ್ಮಕ ಪಯಣ ಈ ಚಿತ್ರದ ಮೂರು ಪ್ರಮುಖ ಪಾತ್ರಗಳಿಗೂ ಇದೆ. ಪ್ರೇಕ್ಷಕರು ಸಿನಿಮಾ ನೋಡುವಾಗ ತಮ್ಮದೇ ಜೀವನದ ಘಟನೆಗಳನ್ನು ಮೆಲಕು ಹಾಕುವಂತೆ ಚಿತ್ರೀಕರಿಸಲಾಗಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಹೆಚ್ಚು ಪ್ರಬುದ್ಧವಾದ ಕಥೆ ಹಾಗೂ ಪಾತ್ರಗಳ ಆಳವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ’ ಎಂದರು.

ಇದನ್ನೂ ಓದಿ:‘ಬಾಲಿವುಡ್​ ಹೀರೋಗಿಂತ ಹೆಚ್ಚಿನ ಹಣವನ್ನು ನಾವೇ ಗಳಿಸ್ತೇವೆ’; ರಣವೀರ್ ಅಲಹಾಬಾದಿಯಾ ಅಚ್ಚರಿಯ ಹೇಳಿಕೆ

ನಿರ್ದೇಶಕರೊಂದಿಗಿನ ಏಳು ವರ್ಷಗಳ ಸುದೀರ್ಘ ಒಡನಾಟವನ್ನು ಮೆಲುಕು ಹಾಕಿದ ನಟ ಪೃಥ್ವಿ ಅಂಬಾರ್, ‘2014ರಲ್ಲಿ ‘6-5=2’ ಸಿನಿಮಾ ಬಿಡುಗಡೆಯಾದಾಗ ಅದು ನೈಜ ಘಟನೆ ಎಂದು ನಂಬಲು ಸಾಧ್ಯವಾಗದೆ ನಾನು ಅಶೋಕ್ ಸರ್ ಜೊತೆ ಜಗಳವಾಡಿದ್ದೆ. ಬಳಿಕ ಮಂಗಳೂರಿನಲ್ಲಿ ಆ ಸಿನಿಮಾ ಶತದಿನೋತ್ಸವ ಆಚರಿಸಿದಾಗ ನಾನೇ ಮೂರು ಬಾರಿ ನೋಡಿದ್ದೆ. ಇಂದು ಅವರ ನಿರ್ದೇಶನದಲ್ಲಿ ನಾನು ನಾಲ್ಕನೇ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ. ಜೀವನದಲ್ಲಿ ಕಷ್ಟವಿರಲಿ ಅಥವಾ ಸುಖವಿರಲಿ, ಜೊತೆಗಿರುವ ಸ್ನೇಹಿತರು ಮತ್ತು ಕುಟುಂಬವೇ ನಿಜವಾದ ಆಸ್ತಿ ಎಂಬುದನ್ನು ಈ ಸಿನಿಮಾ ಸಾರುತ್ತದೆ. ಅಶೋಕ್ ಅವರ ಮೊದಲ ದಿನದ ಗೆಳೆಯರು ಹಾಗೂ ತಂತ್ರಜ್ಞರ ಬಳಗ ಇಂದಿಗೂ ಬದಲಾಗದೆ ಜೊತೆಗಿರುವುದೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದರು.

ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ‘2015ರಲ್ಲಿ ಫೇಸ್‌ಬುಕ್‌ನಲ್ಲಿ ಆಡಿಶನ್ ಜಾಹೀರಾತು ನೋಡಿ ‘6-5=2’ ಪೋಸ್ಟರ್ ಕಂಡಾಗಲೇ ಇವರ ನಿರ್ದೇಶನದಲ್ಲಿ ನಟಿಸಬೇಕೆಂದು ಕನಸು ಕಂಡಿದ್ದೆ. ‘ದಿಯಾ’ ಸಿನಿಮಾ ನನ್ನ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಇಲ್ಲಿ ಕತೆಗಿಂತ ಹೆಚ್ಚಾಗಿ ಅಶೋಕ್ ಸರ್ ಮೇಲಿನ ನಂಬಿಕೆಯಿಂದ ಈ ಸಿನಿಮಾ ಒಪ್ಪಿಕೊಂಡೆ. ಕುಂದಾಪುರದ ನಾನು ಮತ್ತು ಮಂಗಳೂರಿನ ಪೃಥ್ವಿ ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ವರ್ಕ್‌ಶಾಪ್ ಮಾಡಿ, ಸಂಪೂರ್ಣ ಮಂಡ್ಯ ಶೈಲಿಯ ಭಾಷೆಯನ್ನು ಕಲಿತು ನಟಿಸಿದ್ದೇವೆ. ಸೆಟ್‌ನಲ್ಲಿ ಸ್ಕ್ರಿಪ್ಟ್ ಪೇಪರ್ ಕೂಡ ನೋಡದಷ್ಟು ಪೂರ್ವತಯಾರಿಯೊಂದಿಗೆ ಚಿತ್ರೀಕರಣ ನಡೆಸಿದ್ದೇವೆ. ಈ ಸಿನಿಮಾದ ಮೂರು ಪಾತ್ರಗಳು ಪ್ರೇಕ್ಷಕರನ್ನೇ ಪ್ರತಿಬಿಂಬಿಸಲಿವೆ’ ಎಂದು ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.

ನವೀನ್ ಎಸ್. ಪಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅಶೋಕ್ ಅವರೆ ಕಥೆ, ಚಿತ್ರಕಥೆ ಬರೆದು ಸಂಕಲನ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ಹೇಮಂತ್ ಕುಮಾರ್ ಛಾಯಾಗ್ರಹಣ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Sun, 15 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ