AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲಿವುಡ್​ ಹೀರೋಗಿಂತ ಹೆಚ್ಚಿನ ಹಣವನ್ನು ನಾವೇ ಗಳಿಸ್ತೇವೆ’; ರಣವೀರ್ ಅಲಹಾಬಾದಿಯಾ ಅಚ್ಚರಿಯ ಹೇಳಿಕೆ

ಬಾಲಿವುಡ್ ನಟರಿಗಿಂತ ಕಂಟೆಂಟ್ ಕ್ರಿಯೇಟರ್‌ಗಳೇ ಹೆಚ್ಚು ಹಣ ಗಳಿಸುತ್ತಾರೆ ಎಂದು ಪೋಡ್‌ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ಹೇಳಿದ್ದಾರೆ. ಚಿತ್ರರಂಗದಲ್ಲಿ ಕೆಲವೇ ಜನರಿಗೆ ದೊಡ್ಡ ಆದಾಯ ಸಿಗುತ್ತದೆ. ಆದರೆ ಡಿಜಿಟಲ್ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗದಿದ್ದರೂ ಸಾವಿರಾರು ಕ್ರಿಯೇಟರ್‌ಗಳು ಉತ್ತಮ ಜೀವನ ಕಟ್ಟಿಕೊಳ್ಳಲು ನೈಜ ಅವಕಾಶಗಳಿವೆ ಎಂದು ನಿರ್ದೇಶಕಿ ಫರಾ ಖಾನ್ ಹಾಗೂ ಇತರ ಪ್ರಮುಖರು ಒಪ್ಪಿಕೊಂಡಿದ್ದಾರೆ.

‘ಬಾಲಿವುಡ್​ ಹೀರೋಗಿಂತ ಹೆಚ್ಚಿನ ಹಣವನ್ನು ನಾವೇ ಗಳಿಸ್ತೇವೆ’; ರಣವೀರ್ ಅಲಹಾಬಾದಿಯಾ ಅಚ್ಚರಿಯ ಹೇಳಿಕೆ
ರಣವೀರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 19, 2026 | 2:00 PM

Share

ಮುಖ್ಯಾಂಶಗಳು

  • ಬಾಲಿವುಡ್ ನಟರಿಗಿಂತ ಕಂಟೆಂಟ್ ಕ್ರಿಯೇಟರ್ಸ್ ಕಮಾಲ್
  • ರಣವೀರ್ ಅಲ್ಲಾಬಾದಿಯಾ ಬಾಂಬ್
  • ಸಿನಿಮಾಗಿಂತ ಯೂಟ್ಯೂಬ್‌ನಲ್ಲೇ ಹೆಚ್ಚು ಸಂಪಾದನೆ

ಬಾಲಿವುಡ್ ಚಿತ್ರರಂಗಕ್ಕಿಂತ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳೇ ಹೆಚ್ಚು ಗಳಿಸುತ್ತಾರೆಯೇ ಎಂಬ ಚರ್ಚೆ ಈಗ ಶುರುವಾಗಿದೆ. ಜನಪ್ರಿಯ ಪಾಡ್‌ಕಾಸ್ಟರ್ ರಣವೀರ್ ಅಲಹಾಬಾದಿಯಾ ಈ ಮಾತು ಹೇಳಿದ್ದಾರೆ. ‘ಚಿತ್ರರಂಗದಲ್ಲಿ ಕೆಲವೇ ಜನರಿಗೆ ದೊಡ್ಡ ಮಟ್ಟದ ಆದಾಯ ಸಿಗುತ್ತದೆ. ಆದರೆ ಡಿಜಿಟಲ್ ಲೋಕದಲ್ಲಿ ಸಾವಿರಾರು ಜನರು ಉತ್ತಮವಾಗಿ ಸಂಪಾದಿಸುತ್ತಿದ್ದಾರೆ. ಅನೇಕ ಕ್ರಿಯೇಟರ್‌ಗಳಿಗೆ ಒಳ್ಳೆಯ ಆದಾಯ ಲಭಿಸುತ್ತಿದೆ’ ಎಂದಿದ್ದಾರೆ ಅವರು.

ರಣವೀರ್ ಅಲಹಾಬಾದಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ‘ಬಾಲಿವುಡ್‌ನಲ್ಲಿ ಕೇವಲ ಮೂವತ್ತು ಜನ ಮಾತ್ರ ದೊಡ್ಡ ಹಣ ಗಳಿಸುತ್ತಾರೆ. ಕಂಟೆಂಟ್ ಕ್ರಿಯೇಷನ್ ಕ್ಷೇತ್ರದಲ್ಲಿ ಎಲ್ಲರಿಗೂ ಬೆಳೆಯಲು ಅವಕಾಶವಿದೆ. ನಟರಂತೆ ಪ್ರಖ್ಯಾತಿ ಪಡೆಯದಿದ್ದರೂ ಸ್ಥಿರ ಆದಾಯ ಗಳಿಸಬಹುದು’ ಎಂದಿದ್ದಾರೆ.

ಆದರೆ ಈ ಕ್ಷೇತ್ರದಲ್ಲಿ ಅಪಾಯಗಳೂ ಇವೆ. ಸಮ್ಮಯ್ ರೈನಾ ಅವರ ಶೋನಲ್ಲಿ ನಡೆದ ವಿವಾದದಿಂದ ರಣವೀರ್ ಸಂಕಷ್ಟಕ್ಕೆ ಸಿಲುಕಿದ್ದರು. ಎಫ್‌ಐಆರ್ ದಾಖಲಾಗಿ ಕೆಲಸ ಹಾಗೂ ಗೌರವ ಕಳೆದುಕೊಂಡಿದ್ದರು. ನಂತರ ತಮ್ಮ ‘ದಿ ರಣವೀರ್ ಶೋ’ ಮೂಲಕ ಅವರು ಕಂಬ್ಯಾಕ್ ಮಾಡಿದರು. ಕಂಟೆಂಟ್ ಕ್ರಿಯೇಟರ್ ಅಪೂರ್ವ ಮಖಿಜಾ ಕೂಡ ವಿವಾದಕ್ಕೆ ಸಿಲುಕಿದ್ದರು. ಈಗ ಅವರು ನ್ಯೂಯಾರ್ಕ್‌ನಲ್ಲಿ ಎಂ‌ಬಿ‌ಎ ಓದುತ್ತಿದ್ದಾರೆ. ತಮಗೆ ಸರಿ ತಪ್ಪುಗಳ ಅರಿವಾಗದೆ ವಿವಾದಗಳು ಎದುರಾಗುತ್ತವೆ ಎಂದು ಅಪೂರ್ವ ಹೇಳಿದ್ದಾರೆ.

ರಣವೀರ್ ಅವರ ಹೇಳಿಕೆಗೆ ಬಾಲಿವುಡ್‌ನ ಪ್ರಮುಖರು ಬೆಂಬಲ ನೀಡಿದ್ದಾರೆ. ನಿರ್ದೇಶಕಿ ಫರಾ ಖಾನ್ ತಮ್ಮ ಯೂಟ್ಯೂಬ್ ಆದಾಯದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನಿರ್ದೇಶನಕ್ಕಿಂತ ಯೂಟ್ಯೂಬ್ ಮೂಲಕ ಹೆಚ್ಚು ಸಂಪಾದಿಸುತ್ತಿರುವುದಾಗಿ ತಿಳಿಸಿದ್ದಾರೆ. ಮಕ್ಕಳ ವಿದೇಶಿ ಶಿಕ್ಷಣಕ್ಕೆ ಈ ಹಣ ನೆರವಾಗಲಿದೆ ಎಂದಿದ್ದಾರೆ.

ನಟ ಪರ್ಮೀತ್ ಸೇಥಿ ಮತ್ತು ಅರ್ಚನಾ ಪೂರನ್ ಸಿಂಗ್ ಕೂಡ ಇದನ್ನೇ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ಗೆ ಲಕ್ಷಾಂತರ ಚಂದಾದಾರರಿದ್ದಾರೆ. ಪೂರ್ಣಪ್ರಮಾಣದ ಕೆಲಸವಾಗಿ ಸ್ವೀಕರಿಸಿದರೆ ಸಿನಿಮಾ ಹಾಗೂ ಟಿವಿಗಿಂತ ಮೂರು ಪಟ್ಟು ಹೆಚ್ಚು ಸಂಪಾದಿಸಬಹುದು ಎಂದು ಪರ್ಮೀತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ
ಕೋಲಾರದಲ್ಲಿ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ: ದರ ಏರಿಕೆಗೆ ಆಗ್ರಹ
Video: ರಸ್ತೆ ದಾಟಲು ಪರದಾಡಿದ ಕಾಡಾನೆಗಳ ಹಿಂಡು!
Video: ರಸ್ತೆ ದಾಟಲು ಪರದಾಡಿದ ಕಾಡಾನೆಗಳ ಹಿಂಡು!
ಬಾಗಲಕೋಟೆಯ ಬೀಳಗಿ ಕ್ರಾಸ್ ಬಳಿ ಬಸ್ ಪಲ್ಟಿ, ಇಬ್ಬರು ಸಾವು
ಬಾಗಲಕೋಟೆಯ ಬೀಳಗಿ ಕ್ರಾಸ್ ಬಳಿ ಬಸ್ ಪಲ್ಟಿ, ಇಬ್ಬರು ಸಾವು
ಸರ್ಕಾರಿ ಆಂಬ್ಯುಲೆನ್ಸ್ ಏರ್‌ಪೋರ್ಟ್‌ನ ವಿಐಪಿ ಪ್ರೋಟೋಕಾಲ್‌ಗೆ ಬಳಕೆ
ಸರ್ಕಾರಿ ಆಂಬ್ಯುಲೆನ್ಸ್ ಏರ್‌ಪೋರ್ಟ್‌ನ ವಿಐಪಿ ಪ್ರೋಟೋಕಾಲ್‌ಗೆ ಬಳಕೆ
ಕೆಆರ್​ಎಸ್​ನಿಂದ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸ್ತಿದ್ಯಾ ಸರ್ಕಾರ?
ಕೆಆರ್​ಎಸ್​ನಿಂದ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸ್ತಿದ್ಯಾ ಸರ್ಕಾರ?
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಚಿಕ್ಕಬಳ್ಳಾಪುರ: 2 ವರ್ಷದಲ್ಲಿ 30 ಮಂದಿಯನ್ನು ಬಲಿ ಪಡೆದ ಸಾವಿನ ಹೆದ್ದಾರಿ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಸಾಹುಕಾರ್ ನಿವಾಸಗಳಲ್ಲಿ 22 ಗಂಟೆಯಿಂದ ನಡೆಯುತ್ತಿದೆ ಇಡಿ ಪರಿಶೀಲನೆ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ
ಬೆಳಗ್ಗೆ 7ರಿಂದಲೇ ಬಿಜೆಪಿ ಕಚೇರಿಯಲ್ಲಿ ಬಿ.ಸಿ ನಾಗೇಶ್ ಅಂತಿಮ ದರ್ಶನ