ತನ್ನ ಲಾಸ್ಟ್​ ಕಾಲ್​ ಡಿಟೇಲ್ ಮುಳುವಾಗಲಿದೆ ‘ಪಾರ್ಟಿ ಅನಿಮಲ್’ ಸಂಜನಾಗೆ! ಹೇಗೆ?

[lazy-load-videos-and-sticky-control id=”ZgOt04WK2Is”] ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ಸೆಲೆಬ್ರಿಟಿ ನಟಿ, ಪಾರ್ಟಿ ಅನಿಮಲ್ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಬೇಕಾಗಿದೆ. ಆದ್ರೆ ಅದಕ್ಕೂ ಮುನ್ನ.. ವಿಚಾರಣೆ ವೇಳೆ ಅಸಹಕಾರ ಚಳುವಳಿ ಮುಂದುವರಿಸಿರುವ ಸಂಜನಾ ಕುರಿತು.. ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಸರಿಯಾಗಿ ವರ್ಕ್​ ಮಾಡಿದ್ದಾರೆ. ಕಳೆದ ವಾರ ಸಿಸಿಬಿ ಪೊಲೀಸರು ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಹೋಗಿ ಅವರನ್ನು ವಶಕ್ಕೆ ತೆಗೆದುಕೊಂಡು, ತಮ್ಮ ಕಚೇರಿಗೆ ಕರೆತಂದಿದ್ದರು. ಸಿಸಿಬಿ ಇನ್ನೇನು ತನ್ನ ಮನೆ ಮೇಲೆ ರೇಡ್ ಮಾಡುತ್ತದೆ […]

ತನ್ನ ಲಾಸ್ಟ್​ ಕಾಲ್​ ಡಿಟೇಲ್ ಮುಳುವಾಗಲಿದೆ ‘ಪಾರ್ಟಿ ಅನಿಮಲ್’ ಸಂಜನಾಗೆ! ಹೇಗೆ?
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Sep 14, 2020 | 9:52 AM

[lazy-load-videos-and-sticky-control id=”ZgOt04WK2Is”]

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದಲ್ಲಿ ಬಂಧಿತರಾಗಿರುವ ಸೆಲೆಬ್ರಿಟಿ ನಟಿ, ಪಾರ್ಟಿ ಅನಿಮಲ್ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಬೇಕಾಗಿದೆ. ಆದ್ರೆ ಅದಕ್ಕೂ ಮುನ್ನ.. ವಿಚಾರಣೆ ವೇಳೆ ಅಸಹಕಾರ ಚಳುವಳಿ ಮುಂದುವರಿಸಿರುವ ಸಂಜನಾ ಕುರಿತು.. ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಸರಿಯಾಗಿ ವರ್ಕ್​ ಮಾಡಿದ್ದಾರೆ.

ಕಳೆದ ವಾರ ಸಿಸಿಬಿ ಪೊಲೀಸರು ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಹೋಗಿ ಅವರನ್ನು ವಶಕ್ಕೆ ತೆಗೆದುಕೊಂಡು, ತಮ್ಮ ಕಚೇರಿಗೆ ಕರೆತಂದಿದ್ದರು. ಸಿಸಿಬಿ ಇನ್ನೇನು ತನ್ನ ಮನೆ ಮೇಲೆ ರೇಡ್ ಮಾಡುತ್ತದೆ ಎಂಬುದನ್ನು ಅರಿತ ಸಂಜನಾ, ಕೊನೆಯ ಬಾರಿಗೆ ಎಂಬಂತೆ ಒಬ್ಬರಿಗೆ ಮೊಬೈಲ್ ಕರೆ ಮಾಡಿದ್ದರು. ಅದೇ ಈಗ ಸಂಜನಾಗೆ ಪ್ರಕರಣದಲ್ಲಿ ಮುಳುವಾಗಿರುವುದು.  ಸಂಜನಾ ಅಂದು ಮೊಬೈಲ್​ ಕರೆ ಮಾಡಿದ್ದು ಯಾರಿಗಪ್ಪಾ ಅಂದ್ರೆ ಕೊಲೊಂಬೋದ ಕ್ಯಾಸಿನೋ ಗೆಳೆಯ ಶೇಖ್ ಫಾಝಿಲ್​ಗೆ!

ಅಂದಹಾಗೆ ಸಿಸಿಬಿ ಪೊಲೀಸರು ಡ್ರಗ್ಸ್​ ದಂಧೆ ಪ್ರಕರಣ ಬಿಚ್ಚಿಕೊಂಡಾಗಿನಿಂದ ಇದೇ ಪಾಖಂಡಿ ಫಾಝಿಲ್​ನ ಬೆನ್ನುಹತ್ತಿದ್ದಾರೆ. ಆದ್ರೆ ಅವನ Where abouts  ಇದುವರೆಗೂ ಗೊತ್ತಾಗಿಲ್ಲ. ಆದ್ರೆ ಇದೇ ಸಂಜನಾಗೆ ನೇರವಾಗಿ ಮೊಬೈಲ್​ ಕರೆಗೆ ಸಿಕ್ಕಿದ್ದಾನೆ. ತನ್ಮೂಲಕ ಸಂಜನಾ ಮತ್ತು ಫಾಝಿಲ್​ ಸಿಸಿಬಿ ಪೊಲೀಸರಿಗೆ ಇನ್ನೂ ಹತ್ತಿರವಾಗಿದ್ದಾರೆ! ಈಗಾಗಲೇ ತಮ್ಮ ವಶದಲ್ಲಿರುವ ಸಂಜನಾ ಮೇಲಿನ ಪಕಡ್​ಬಂಧಿ ಸಿಸಿಬಿ ಪೊಲೀಸರಿಗೆ ಬಿಗಿಯಾಗಿದ್ದರೆ, ಅತ್ತ ಪಾಖಂಡಿ ಫಾಝಿಲ್​ನ ಸುಳಿವೂ ಸಹ ಸಿಸಿಬಿ ವ್ಯಾಪ್ತಿ ಪ್ರದೇಶಕ್ಕೆ ದೊರೆಯುತ್ತಿದೆ.

ನಿಮಗೂ, ಮತ್ತೊಬ್ಬ ಆರೋಪಿ ಶೇಖ್ ಫಾಝಿಲ್​ಗೂ ಎತ್ತಣ ಸಂಬಂಧ? ಅಷ್ಟಕ್ಕೂ ನಿಮ್ಮ ಕಾಲ್​ ಡಿಟೇಲ್ಸ್ ಪ್ರಕಾರ ನೀವು ಕೊನೆಯ ಕರೆ ಅವನಿಗೇ ಮಾಡಿದ್ದೀರಿ! ಯಾಕೆ? ವಿಷಯ ಏನು ಎಂದು ಸಿಸಿಬಿ ಇನ್ಸ್​ಪೆಕ್ಟರ್​ ಅಂಜುಮಾಲಾ ಸಂಜನಾರನ್ನು ಅದಾಗಲೇ ಗದರಿಕೊಂಡಿದ್ದಾರೆ. ಸಂಜನಾ ಬೆಬ್ಬೆಬ್ಬೆ ಎಂದಿದ್ದಾರೆ. ಈ ಕರೆಯೇ ಇಂದು ಕೋರ್ಟ್​ನಲ್ಲಿ ಸಂಜನಾ ವಿರುದ್ಧ ಪ್ರಮುಖ ಸಾಕ್ಷ್ಯ ನುಡಿಯಲಿದೆ!

ಇದನ್ನೂ ಓದಿ:

ಕ್ಯಾಸಿನೋ ಫಾಝಿಲ್ ವಿಷವ್ಯೂಹ ಹೆಣೆಯುತ್ತಿದ್ದು ಹೇಗೆ? ಇಂಥಾ ನಟಿಯರೇ ಸಾಫ್ಟ್​ ಟಾರ್ಗೆಟ್!

ನಟಿ ಸಂಜನಾ ಕಳ್ಳಾಟ: ಮೊಬೈಲ್​ನಲ್ಲಿದ್ದ ವಾಟ್ಸಪ್ ಮೆಸೆಜ್ Delete! ಆದ್ರೆ..

Published On - 9:34 am, Mon, 14 September 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us