UB ವೆಂಕಟೇಶ್ ಪುತ್ರನಿಂದ ಸಂಜನಾ ಅಕೌಂಟ್​ಗೆ ಲಕ್ಷಗಟ್ಟಲೆ ಹಣ ವರ್ಗ: ಯಾಕೆ? ಕೇಳಿತು CCB

| Updated By: KUSHAL V

Updated on: Oct 21, 2020 | 4:43 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕ, ಕಾಂಗ್ರೆಸ್ ಎಂಎಲ್​ಸಿ UB ವೆಂಕಟೇಶ್ ಪುತ್ರನನ್ನು ಸಿಸಿಬಿ ವಿಚಾರಣೆಗೊಳಪಡಿಸಿದ್ದು, ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಚೇರಿಯಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಚಾರಣೆ ವೇಳೆ ಕಾಂಗ್ರೆಸ್ ಎಂಎಲ್​ಸಿ ವೆಂಕಟೇಶ್ ಪುತ್ರ ವಿ.ಗಣೇಶ್ ರಾವ್, ಡ್ರಗ್ಸ್​ ಕೇಸ್​ನಲ್ಲಿ ಜೈಲುಪಾಲಾಗಿರುವ ನಟಿ ಸಂಜನಾ ಗಲ್ರಾನಿಗೆ ಆಪ್ತ ಎಂದು ತಿಳಿದುಬಂದಿದೆ. ಜೊತೆಗೆ, ನಟಿ ಸಂಜನಾ ಅಕೌಂಟ್​ನಿಂದ ಲಕ್ಷ ಲಕ್ಷ ಹಣ ವಿ. ಗಣೇಶ್ ರಾವ್ ಅಕೌಂಟ್​ಗೆ ವರ್ಗಾವಣೆಯಾಗಿರುವುದನ್ನು […]

UB ವೆಂಕಟೇಶ್ ಪುತ್ರನಿಂದ ಸಂಜನಾ ಅಕೌಂಟ್​ಗೆ ಲಕ್ಷಗಟ್ಟಲೆ ಹಣ ವರ್ಗ: ಯಾಕೆ? ಕೇಳಿತು CCB
Follow us on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕ, ಕಾಂಗ್ರೆಸ್ ಎಂಎಲ್​ಸಿ UB ವೆಂಕಟೇಶ್ ಪುತ್ರನನ್ನು ಸಿಸಿಬಿ ವಿಚಾರಣೆಗೊಳಪಡಿಸಿದ್ದು, ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ.

ಬೆಂಗಳೂರಿನ ಚಾಮರಾಜಪೇಟೆಯ ಕಚೇರಿಯಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಚಾರಣೆ ವೇಳೆ ಕಾಂಗ್ರೆಸ್ ಎಂಎಲ್​ಸಿ ವೆಂಕಟೇಶ್ ಪುತ್ರ ವಿ.ಗಣೇಶ್ ರಾವ್, ಡ್ರಗ್ಸ್​ ಕೇಸ್​ನಲ್ಲಿ ಜೈಲುಪಾಲಾಗಿರುವ ನಟಿ ಸಂಜನಾ ಗಲ್ರಾನಿಗೆ ಆಪ್ತ ಎಂದು ತಿಳಿದುಬಂದಿದೆ. ಜೊತೆಗೆ, ನಟಿ ಸಂಜನಾ ಅಕೌಂಟ್​ನಿಂದ ಲಕ್ಷ ಲಕ್ಷ ಹಣ ವಿ. ಗಣೇಶ್ ರಾವ್ ಅಕೌಂಟ್​ಗೆ ವರ್ಗಾವಣೆಯಾಗಿರುವುದನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಯಾವ ವಿಚಾರಕ್ಕೆ ನಟಿ ಸಂಜನಾ ನಿಮಗೆ ಹಣ ಕಳುಹಿಸಿದ್ದಳು? ನಿಮ್ಮ ಮತ್ತು ಸಂಜನಾ ನಡುವೆ ಏನೆಲ್ಲಾ ವ್ಯವಹಾರ ನಡೆದಿದೆ? ಎಂದು ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳು ವಿ.ಗಣೇಶ್ ರಾವ್ ಅವರನ್ನು ಪ್ರಶ್ನಿಸಿದ್ದಾರೆ.

ಸ್ಯಾಂಡಲ್​ವುಡ್​ Drugs ಜಾಲ: ರಾಯಲ್ ಮೀನಾಕ್ಷಿ‌ ಮಾಲ್ ಮಾಲೀಕನಿಗೆ CCB ಬುಲಾವ್​