‘ಇಂದ್ರಜಿತ್ ಸಾಮಾಜಿಕವಾಗಿ ಮಾಡಿದ್ದು ಸರಿ, ಆದ್ರೆ ಮೊದ್ಲು ಚೇಂಬರ್​ಗೆ ಬರಬೇಕಿತ್ತು’

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ನಮ್ಮ ಸದಸ್ಯನೆ. ಸಾಮಾಜಿಕವಾಗಿ ಇಂದ್ರಜಿತ್ ಮಾಡಿದ್ದು ಸರಿ, ಆದ್ರೆ ಮೊದಲು ಅವರು ಫಿಲ್ಮ್ ಚೇಂಬರ್​ಗೆ ಬರಬೇಕಿತ್ತು ಎಂದು ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅಭಿಪ್ರಾಯಪಟ್ಟಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ನಶೆ ದುರ್ಗಂಧ ತೇಲಿ ಬಂದಿರುವ ಹಿನ್ನೆಲೆಯಲ್ಲಿ ಇಂದು ಚೇಂಬರಿನಲ್ಲಿ ನಡೆದ ಮಹತ್ವದ ಸಭೆಯ ನಂತ್ರ ಮಾತ್ನಾಡಿದ ಚೇಂಬರಿನ ಹಿರಿಯ ಸದಸ್ಯ ಸಾರಾ ಗೋವಿಂದು ಆರೋಪ ಸಾಬೀತಾದ್ರೆ ಯಾರೇ ಆಗಿರಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂದ್ರಜಿತ್ ಮೊದಲು ಚೇಂಬರ್ ಗೆ ಬರಬೇಕಿತ್ತು. ಸುಮ್ಮನೆ ಯಾರ […]

‘ಇಂದ್ರಜಿತ್ ಸಾಮಾಜಿಕವಾಗಿ ಮಾಡಿದ್ದು ಸರಿ, ಆದ್ರೆ ಮೊದ್ಲು ಚೇಂಬರ್​ಗೆ  ಬರಬೇಕಿತ್ತು’

Updated on: Sep 02, 2020 | 1:16 PM

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ನಮ್ಮ ಸದಸ್ಯನೆ. ಸಾಮಾಜಿಕವಾಗಿ ಇಂದ್ರಜಿತ್ ಮಾಡಿದ್ದು ಸರಿ, ಆದ್ರೆ ಮೊದಲು ಅವರು ಫಿಲ್ಮ್ ಚೇಂಬರ್​ಗೆ ಬರಬೇಕಿತ್ತು ಎಂದು ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ನಶೆ ದುರ್ಗಂಧ ತೇಲಿ ಬಂದಿರುವ ಹಿನ್ನೆಲೆಯಲ್ಲಿ ಇಂದು ಚೇಂಬರಿನಲ್ಲಿ ನಡೆದ ಮಹತ್ವದ ಸಭೆಯ ನಂತ್ರ ಮಾತ್ನಾಡಿದ ಚೇಂಬರಿನ ಹಿರಿಯ ಸದಸ್ಯ ಸಾರಾ ಗೋವಿಂದು ಆರೋಪ ಸಾಬೀತಾದ್ರೆ ಯಾರೇ ಆಗಿರಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂದ್ರಜಿತ್ ಮೊದಲು ಚೇಂಬರ್ ಗೆ ಬರಬೇಕಿತ್ತು. ಸುಮ್ಮನೆ ಯಾರ ಯಾರ ಮೇಲೋ ಆರೋಪ ಮಾಡಿದ್ರೆ ಸಾಲದು. ಆ ಆರೋಪ ಸಾಬೀತಾಗಲೇ ಬೇಕು. ಇದು ಚಿತ್ರರಂಗದ ಭವಿಷ್ಯ ಎಂದು ಅವರು ಹೇಳಿದರು.