ಒಂದು ಲಿಂಕ್ ತೆಗೆದರೆ, 10 ಲಿಂಕ್ ಅಪ್ಲೋಡ್ ಆಗ್ತಾ ಇತ್ತು; ಪೈರಸಿ ಬಗ್ಗೆ ‘ಏಕ್ ಲವ್ ಯಾ’ ಟೀಂ ಮಾತು
ಈ ಸಿನಿಮಾ ರಿಲೀಸ್ ಆದ ದಿನವೇ ಪೈರಸಿ ಆಗಿತ್ತು. ನಂತರದಲ್ಲೂ ಹಲವು ಲಿಂಕ್ಗಳು ಟೆಲಿಗ್ರಾಮ್ನಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರೇಮ್ ಅಸಮಾಧಾನ ಹೊರಹಾಕಿದ್ದಾರೆ.
‘ಜೋಗಿ’ ಪ್ರೇಮ್ (Jogi Prem)ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ (Ek Love Ya Movie) ಕಳೆದ ತಿಂಗಳು ರಿಲೀಸ್ ಆಗಿತ್ತು. ರಕ್ಷಿತಾ ಪ್ರೇಮ್ ನಿರ್ಮಾಣದ ಈ ಸಿನಿಮಾದಲ್ಲಿ ಅವರ ಸಹೋದರ ರಾಣ ಹೀರೋ ಆಗಿ ನಟಿಸಿದ್ದಾರೆ. ರಚಿತಾ ಹಾಗೂ ರೀಷ್ಮಾ ನಾಣಯ್ಯ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆದ ದಿನವೇ ಪೈರಸಿ ಆಗಿತ್ತು. ನಂತರದಲ್ಲೂ ಹಲವು ಲಿಂಕ್ಗಳು ಟೆಲಿಗ್ರಾಮ್ನಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರೇಮ್ ಅಸಮಾಧಾನ ಹೊರಹಾಕಿದ್ದಾರೆ. ‘ಪೈರಸಿ ಲಿಂಕ್ ತೆಗೆಯೋಕೆ ನಾನು ಒಂದು ಕಂಪನಿ ಇಟ್ಟುಕೊಂಡಿದ್ದೇನೆ. ಅವರು ಟೆಲಿಗ್ರಾಮ್ನಿಂದ ದಿನಕ್ಕೆ 100 ಲಿಂಕ್ ತೆಗೆಯುತ್ತಿದ್ದರು ಎಂದರು ಪ್ರೇಮ್. ಈ ವಿಚಾರದಲ್ಲಿ ರಕ್ಷಿತಾ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಒಂದು ಲಿಂಕ್ ತೆಗೆದರೆ ಮತ್ತೆ 10 ಲಿಂಕ್ಗಳು ಅಪ್ಲೋಡ್ ಆಗುತ್ತಿದ್ದ ಬಗ್ಗೆ ರಕ್ಷಿತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Ek Love Ya First Half Review: ಹೇಗಿದೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಮೊದಲಾರ್ಧ? ಇಲ್ಲಿದೆ ವಿವರ
ರಕ್ಷಿತಾ-ಪ್ರೇಮ್ ದಾಂಪತ್ಯಕ್ಕೆ 15 ವರ್ಷ; ‘ಹೆಂಗೆ ಕಳೆದೆ ಅಂತ ಯೋಚನೆ ಮಾಡ್ತಾ ಇದೀನಿ’ ಅಂದ್ರು ರಕ್ಷಿತಾ