ರಕ್ಷಿತಾ-ಪ್ರೇಮ್​ ದಾಂಪತ್ಯಕ್ಕೆ 15 ವರ್ಷ; ‘ಹೆಂಗೆ ಕಳೆದೆ ಅಂತ ಯೋಚನೆ ಮಾಡ್ತಾ ಇದೀನಿ’ ಅಂದ್ರು ರಕ್ಷಿತಾ

‘ಏಕ್​ ಲವ್​ ಯಾ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ರಕ್ಷಿತಾ ಮತ್ತು ಪ್ರೇಮ್ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ತಮ್ಮ ದಾಂಪತ್ಯಕ್ಕೆ 15 ವರ್ಷ ಆಗಿದೆ ಎಂಬುದನ್ನು ಕೂಡ ರಕ್ಷಿತಾ ತಿಳಿಸಿದರು.

TV9kannada Web Team

| Edited By: Madan Kumar

Mar 11, 2022 | 10:08 AM

ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿದ್ದವರು ನಟಿ ರಕ್ಷಿತಾ (Rakshitha Prem). ಹ್ಯಾಟ್ರಿಕ್​ ಡೈರೆಕ್ಟರ್​ ಆಗಿ ಗುರುತಿಸಿಕೊಂಡವರು ‘ಜೋಗಿ’ ಪ್ರೇಮ್​. ಇವರಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 15 ವರ್ಷ ಕಳೆದಿದೆ. ನಟನೆಯಿಂದ ರಕ್ಷಿತಾ ಅವರು ದೂರ ಉಳಿದುಕೊಂಡಿದ್ದಾರೆ. ತಮ್ಮದೇ ಸ್ವಂತ ಬ್ಯಾನರ್​ ಆರಂಭಿಸಿರುವ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅವರು ಬಂಡವಾಳ ಹೂಡಿದ ‘ಏಕ್​ ಲವ್​ ಯಾ’ (Ek Love Ya Movie) ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಚಾರಗಳನ್ನು ರಕ್ಷಿತಾ ಮತ್ತು ಪ್ರೇಮ್ (Director Prem) ಹಂಚಿಕೊಂಡರು. ಚಿತ್ರದ ಬಜೆಟ್​ ಬಗ್ಗೆಯೂ ಮಾತನಾಡಿದರು. ಈ ವೇಳೆ ತಮ್ಮ ದಾಂಪತ್ಯಕ್ಕೆ 15 ವರ್ಷ ಆಗಿದೆ ಎಂಬುದನ್ನು ಕೂಡ ರಕ್ಷಿತಾ ತಿಳಿಸಿದರು. ‘ಮದುವೆ ಆದಾಗ ಕ್ವಾಲಿಟಿ ಗೊತ್ತಿರಲಿಲ್ಲ’ ಎಂದು ತಮಾಷೆ ಮಾಡಿದ ರಕ್ಷಿತಾ, ‘ಮದುವೆ ಆಗಿ 15 ವರ್ಷ ಆಯ್ತು. ಇವರ ಜೊತೆ 15 ವರ್ಷ ಹೇಗೆ ಕಳೆದೆ ಅಂತ ನಾನು ಇನ್ನೂ ಯೋಚನೆ ಮಾಡ್ತಾ ಇದೀನಿ’ ಎಂದರು. ‘ಏಕ್​ ಲವ್​ ಯಾ’ ಸಿನಿಮಾ ಮೂಲಕ ಸಹೋದರ ರಾಣಾ ಅವರನ್ನು ರಕ್ಷಿತಾ ಪ್ರೇಮ್​ ಲಾಂಚ್​ ಮಾಡಿದ್ದಾರೆ.

ಇದನ್ನೂ ಓದಿ:

‘ಏಕ್​ ಲವ್​ ಯಾ’ ಲೀಕ್​ ಬೆನ್ನಲ್ಲೇ ಪೈರಸಿ ವಿರುದ್ಧ ತೊಡೆತಟ್ಟಿದ ‘ಜೋಗಿ’ ಪ್ರೇಮ್​

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ

Follow us on

Click on your DTH Provider to Add TV9 Kannada