‘ಏಕ್​ ಲವ್​ ಯಾ’ ಲೀಕ್​ ಬೆನ್ನಲ್ಲೇ ಪೈರಸಿ ವಿರುದ್ಧ ತೊಡೆತಟ್ಟಿದ ‘ಜೋಗಿ’ ಪ್ರೇಮ್​

‘ಏಕ್​ ಲವ್​ ಯಾ’ ಸಿನಿಮಾ ರಿಲೀಸ್​ ಆದ ದಿನವೇ ಪೈರಸಿ ಆಗಿತ್ತು. ಚಿತ್ರದ ಥಿಯೇಟರ್​ ಪ್ರಿಂಟ್​ ಟೆಲಿಗ್ರಾಮ್​ ಹಾಗೂ ಕೆಲ ಪೈರಸಿ ತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ನಿರ್ದೇಶಕ ಪ್ರೇಮ್ ಅಸಮಾಧಾನಗೊಂಡಿದ್ದಾರೆ.

TV9kannada Web Team

| Edited By: Rajesh Duggumane

Mar 01, 2022 | 8:04 PM

‘ಜೋಗಿ’ ಪ್ರೇಮ್​ (Jogi Prem)ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾಗೆ (Ek Love Ya Movie) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಕ್ಷಿತಾ ಪ್ರೇಮ್​ ನಿರ್ಮಾಣದ ಈ ಸಿನಿಮಾದಲ್ಲಿ ಅವರ ಸಹೋದರ ರಾಣ ಹೀರೋ ಆಗಿ ನಟಿಸಿದ್ದಾರೆ. ರಚಿತಾ ಹಾಗೂ ರೀಷ್ಮಾ ನಾಣಯ್ಯ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್​ ಆದ ದಿನವೇ ಪೈರಸಿ ಆಗಿತ್ತು. ಚಿತ್ರದ ಥಿಯೇಟರ್​ ಪ್ರಿಂಟ್​ ಟೆಲಿಗ್ರಾಮ್​ ಹಾಗೂ ಕೆಲ ಪೈರಸಿ ತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ನಿರ್ದೇಶಕ ಪ್ರೇಮ್ ಅಸಮಾಧಾನಗೊಂಡಿದ್ದಾರೆ. ಈ ವಿಚಾರವನ್ನು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommai) ಬಳಿ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ‘ಮುಂದಿನ ವಾರ ಸಿಎಂ ಭೇಟಿ ಮಾಡ್ತೀನಿ. ಅವರಿಗೆ ಲೆಟರ್​ ಕೊಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡ್ತೀನಿ. ನನ್ನ ಸಿನಿಮಾ ಅಂತಲ್ಲ, ಎಲ್ಲ ಚಿತ್ರಕ್ಕೂ ಇದೇ ತೊಂದರೆ ಕಾಡುತ್ತಿದೆ’ ಎಂದಿದ್ದಾರೆ ಪ್ರೇಮ್​.

ಇದನ್ನೂ ಓದಿ: Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

Ek Love Ya Movie Review: ಅದ್ದೂರಿ ‘ಪ್ರೇಮ್​’ ಕಹಾನಿಯ ಪ್ಲಸ್​ ಏನು? ಮೈನಸ್​ ಏನು?

Follow us on

Click on your DTH Provider to Add TV9 Kannada