ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಬಿಸಿಲಲ್ಲಿ ನಡೆದು ಸುಸ್ತಾದವರಿಗೆ ಉಚಿತ ಐಸ್ ಕ್ರೀಮ್ ಮತ್ತು ನೀರು!
ಐಸ್ ಕ್ರೀಮ್ ಹಂಚಿಕೆಯಲ್ಲಿ ಸಮಾನತೆ ಕಾಣುತ್ತಿದೆ ಮಾರಾಯ್ರೇ. ಅದನ್ನು ತೆಗೆದುಕೊಳ್ಳಲು ಯಾರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಗುರುತಿನ ಚೀಟಿ ತೋರಿಸಬೇಕಿಲ್ಲ!
ಮಾರ್ಚ್ ತಿಂಗಳು ಆರಂಭಗೊಂಡಿದ್ದು ಬಿಸಿಲು ಬಲಿಯಾರಂಭಿಸಿದೆ. ಕಳೆದ ವಾರದ ತಾಪಮಾನಕ್ಕಿಂತ (temperature) ಈ ವಾರದ ತಾಪಮಾನಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದು ಎಲ್ಲರಿಗಿಂತ ಚೆನ್ನಾಗಿ ನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಮೇಕೆದಾಟು ಯೋಜನೆ (Mekedatu Project) ಶೀಘ್ರ ಅನುಷ್ಠಾನಗೊಳಿಸಲು ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು (Congress leaders) ಹಾಗೂ ಕಾರ್ಯಕರ್ತರು ಬಲ್ಲರು. ಸುಡು ಬಿಸಿಲಿನಲ್ಲಿ ನಡೆದು ಮುಂದೆ ಸಾಗುತ್ತಿರುವ ಅವರಿಗೆ ಸಹಜವಾಗೇ ನೀರಿನ ದಾಹ ಅಗುತ್ತದೆ. ಅವರ ದಾಹ ದಣಿಸಲು ಮತ್ತು ರಿಹೈಡ್ರೇಟ್ ಮಾಡಲು ಯುವ ಕಾಂಗ್ರೆಸ್ ವತಿಯಿಂದ ನೀರು ಮತ್ತು ಐಸ್ ಕ್ರೀಮ್ ಸ್ಟಾಲ್ ಗಳನ್ನು ಸ್ಥಾಪಿಸಲಾಗಿದೆ. ಅಂಥದೊಂದು ಸ್ಟಾಲ್ ನಿಮಗೆ ಈ ವಿಡಿಯೋನಲ್ಲಿ ಕಾಣುತ್ತದೆ. ಈ ಸ್ಥಳ ಬೆಂಗಳೂರು ನಗರದ ಒಳಭಾಗವಾಗಿದೆ, ಅದರರ್ಥ ಪಾದಯಾತ್ರೆ ನಗರವನ್ನು ಪ್ರವೇಶಿಸಿಯಾಗಿದೆ.
ಕಾರ್ಯಕರ್ತರು ಒಬ್ಬೊಬ್ಬರಾಗಿ ಬಂದ ಐಸ್ ಕ್ರೀಮ್ ಕಪ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಐಸ್ ಕ್ರೀಮ್ ಹಂಚಿಕೆಯಲ್ಲಿ ಸಮಾನತೆ ಕಾಣುತ್ತಿದೆ ಮಾರಾಯ್ರೇ. ಅದನ್ನು ತೆಗೆದುಕೊಳ್ಳಲು ಯಾರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಗುರುತಿನ ಚೀಟಿ ತೋರಿಸಬೇಕಿಲ್ಲ!
ಚಿಕ್ಕಪುಟ್ಟ ಮಕ್ಕಳು, ಶಾಲಾ ಮಕ್ಕಳು ಸಹ ಐಸ್ ಕ್ರೀಮ್ ಕೇಳಿ ಪಡೆಯುತ್ತಿದ್ದಾರೆ. ಸ್ಟಾಲ್ ಗಳಲ್ಲಿರುವ ಯುವ ಕಾರ್ಯಕರ್ತರು ತಾರತಮ್ಯ ತೋರದೆ, ಗದರದೆ ಮಕ್ಕಳಿಗೆ ಅದನ್ನು ಕೊಡುತ್ತಿದ್ದಾರೆ.
ಆಗಲೇ ಹೇಳಿದಂತೆ ಪಾದಯಾತ್ರೆ ಬೆಂಗಳೂರು ನಗರವನ್ನು ಪ್ರವೇಶಿಸಿದೆ. ಯಾವುದೇ ಪಾದಯಾತ್ರೆ, ಮೆರವಣಿಗೆ ರಸ್ತೆ ಮೇಲೆ ಕಾಣದಿದ್ದರೂ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವ ರಾಜಧಾನಿಯಲ್ಲಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ನಡೆಯುವಾಗ ವಾಹನ ಸಂಚಾರಕ್ಕೆ ಅಡಚಣೆ ಆಗದಿರುತ್ತದೆಯೇ?
ಹಲವಾರು ಕಡೆ ಟ್ರಾಫಿಕ್ ಸಮಸ್ಯೆ ತಲೆದೋರಿದೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದರ ಬಗ್ಗೆ ತಮ್ಮ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mekedatu Padayatra 2.0 Live: ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ; ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್