AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೀನ್​ ತಂದೆ ಶೇಖರಪ್ಪರೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದರು

ನವೀನ್​ ತಂದೆ ಶೇಖರಪ್ಪರೊಂದಿಗೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 01, 2022 | 7:59 PM

Share

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೀನ್​ ಅವರ ತಂದೆಯೊಂದಿಗೆ ಫೋನಲ್ಲಿ ಮಾತಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಡಿಯೋನಲ್ಲಿ ಪ್ರಧಾನಿ ಮೋದಿ ಅವರು ಮಾತಾಡುತ್ತಿರುವ ಧ್ವನಿ ಕೇಳಿಸುತ್ತಿಲ್ಲ.

ಆಗಬಾರದ್ದು ಅಗಿಹೋಗಿದೆ. ಉಕ್ರೇನಲ್ಲಿ ಓದುತ್ತಿದ್ದ ನಮ್ಮ ಕನ್ನಡದ ಹುಡುಗ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gynagoudar) ಆ ದೇಶದ ಮೇಲೆ ರಷ್ಯಾ (Russia) ನಡೆಸುತ್ತಿರುವ ಶೆಲ್ಲಿಂಗ್​​ ಗೆ ಮಂಗಳವಾರ ಬೆಳಗ್ಗೆ ಬಲಿಯಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ನವೀನ್​ ಅವರ ತಂದೆಯೊಂದಿಗೆ ಫೋನಲ್ಲಿ ಮಾತಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಡಿಯೋನಲ್ಲಿ ಪ್ರಧಾನಿ ಮೋದಿ ಅವರು ಮಾತಾಡುತ್ತಿರುವ ಧ್ವನಿ ಕೇಳಿಸುತ್ತಿಲ್ಲ. ಅದರೆ ಅಪಾರ ದುಃಖದಲ್ಲಿರುವ ನವೀನ ತಂದೆ ಶೇಖರಪ್ಪನವರು ಮಾತ್ರ ಅಳುತ್ತಾ ಗದ್ಗದಿತ ಧ್ವನಿಯಲ್ಲಿ, ‘ಹಾಂ ಸರ್, ಠೀಕ್ ಹೈ ಸರ್, ಪ್ರಣಾಮ ಸರ್,’ ಮತ್ತು ಕೊನೆಯಲ್ಲಿ ‘ಹಾಂ ಸರ್, ಶುಕ್ರಿಯಾ ಸರ್ ಮತ್ತು ಪ್ರಣಾಮ್ ಸರ್,’ ಅಂತ ಹೇಳುತ್ತಾರೆ.

ಈ ಕುಟುಂಬ ದುಃಖದಿಂದ ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ.

21-ವರ್ಷ ವಯಸ್ಸಿನವಾರಾಗಿದ್ದ ನವೀನ್ ಅವರು ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದವರು. ಉಕ್ರೇನಿನ ಖಾರ್ಕಿವ್ ನಲ್ಲಿ ಅವರು ದುರ್ಮರಕ್ಕೀಡಾದ ಸಂಗತಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಕಮೀಷನರ್ ಮನೋಜ ರಾಜನ್ ಬಹಿರಂಗಪಡಿಸಿದರು. ‘ಉಕ್ರೇನಲ್ಲಿ ನವೀನ್ ಶೇಖರಪ್ಪ ಅವರ ದುರದೃಷ್ಟಕರ ಸಾವನ್ನು ವಿದೇಶಾಂಗ ವ್ಯವಹಾರಗಳ ಇಲಾಖೆ ದೃಢಪಡಿಸಿದೆ. ಅವರು ಹಾವೇರಿ ಜಿಲ್ಲೆಯ ಚಳಗೇರಿಯವರು. ಪಕ್ಕದಲ್ಲೇ ಇದ್ದ ಅಂಗಡಿಯೊಂದಕ್ಕೆ ಏನನ್ನೋ ತರಲು ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಸ್ಥಳೀಯ ಅಧಿಕಾರಿಯೊಬ್ಬರು, ನವೀನ್ ಸ್ನೇಹಿತನಿಗೆ ಫೋನ್ ಮಾಡಿ ಅವರು ಮರಣಿಸಿರುವ ವಿಷಯ ತಿಳಿಸಿದ್ದಾರೆ,’ ಎಂದು ರಾಜನ್ ಹೇಳಿದ್ದಾರೆ.

ಏತನ್ಮಧ್ಯೆ, ಸೋಮವಾರ ಸಾಯಂಕಾಲ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ ಪ್ರಧಾನಿ ಮೋದಿ ಅವರು ಉಕ್ರೇನಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಸುರಕ್ಷಿತ ಸ್ಥಳಾಂತರಕ್ಕೆ ಇಡೀ ಸರ್ಕಾರ ಎಡೆಬಿಡದೆ ದಿನದ 24 ಗಂಟೆ ಕಾಲ ಕಾರ್ಯನಿರತವಾಗಿದೆ ಅಂತ ತಿಳಿಸಿದರೆಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅರಿಂದಮ್ ಬಗ್ಚಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ನನಗೆ ಈ ಕುಟುಂಬ ಚೆನ್ನಾಗಿ ಗೊತ್ತು, ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ನವೀನ್ ಪಾರ್ಥೀವ ಶರೀರವನ್ನು ಭಾರತಕ್ಕೆ ಆದಷ್ಟು ಬೇಗ ತರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ವಿಷಯವಾಗಿ ನಾನು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಾಡಿದ್ದೇನೆ,’ ಎಂದು ಬೆಂಗಳೂರಲ್ಲಿ ಹೇಳಿದರು.

ಇದನ್ನೂ ಓದಿ:  ಶಿವರಾತ್ರಿ ದಿನ ವಿದ್ಯಾರ್ಥಿ ನವೀನ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ, ಸರಣಿ ಟ್ವೀಟ್ ಮೂಲಕ ಹೆಚ್ಡಿ ಕುಮಾರಸ್ವಾಮಿ ಸಂತಾಪ