ಉಕ್ರೇನಲ್ಲಿ ಭಾರತೀಯರು ಪಡುತ್ತಿರುವ ಬವಣೆ ಸ್ವದೇಶದಲ್ಲಿ ಅವರ ಕುಟುಂಬಗಳಿಗೆ ನೋಡಲಾಗುತ್ತಿಲ್ಲ

ಉಕ್ರೇನಲ್ಲಿ ಭಾರತೀಯರು ಪಡುತ್ತಿರುವ ಬವಣೆ ಸ್ವದೇಶದಲ್ಲಿ ಅವರ ಕುಟುಂಬಗಳಿಗೆ ನೋಡಲಾಗುತ್ತಿಲ್ಲ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 01, 2022 | 9:08 PM

ಭಾರತ ಸರ್ಕಾರ ಉಕ್ರೇನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ನಾಲ್ಕು ಸಚಿವರನ್ನು ರುಮೇನಿಯಾ, ಪೋಲೆಂಡ್, ಹಂಗರಿಗಳಿಗೆ ಕಳಿಸಿದೆ. ಸರ್ಕಾರದ ಪ್ರತಿನಿಧಿಗಳು ಹತ್ತಿರದಲ್ಲೇ ಇದ್ದಾರೆ ಎಂಬ ಅರಿವು ಸಹ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಇಲ್ಲವೇ?

ಉಕ್ರೇನಿನ ನಾನಾಭಾಗಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ (Indian students) ಅವಸ್ಥೆ ನಾವು ನೋಡಲಾಗದಷ್ಟು, ಹೇಳಲಾಗದಷ್ಟು ಕೆಟ್ಟಿದೆ. ಟಿವಿಗಳಲ್ಲಿ ಅವರ ಅಸಹಾಯಕ, ದಯನೀಯ ಸ್ಥಿತಿಯನ್ನು ಪ್ರತಿದಿನ ನೋಡುತ್ತಿರುವ ತಂದೆತಾಯಿಗಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಊಟ ನೀರು ಬಿಟ್ಟು ಅವರ ಸುರಕ್ಷಿತ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿ ಗಂಟೆಗೊಮ್ಮೆ ತಮ್ಮ ಕರುಣಾಜನಕ ಸ್ಥಿತಿಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಉಕ್ರೇನಿನ ಒಡೆಸಾ (Odesa) ನ್ಯಾಶನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ (National Medical University) ಓದುತ್ತಿರುವ ವಿದ್ಯಾರ್ಥಿಗಳು ಕಳಿಸಿದ್ದಾರೆ. ಅವರು ಹೇಳುವುದನ್ನು ಕೇಳಿಸಿಕೊಳ್ಳಿ. ಕಳೆದ ಒಂದೂವರೆ ದಿನಗಳಿಂದ ಅವರು ಚೌಗ್ ಹೆಸರಿನ ರೇಲ್ವೇ ನಿಲ್ದಾಣದಲ್ಲಿ ಊಟದ ಮಾತು ಹಾಗಿರಲಿ ನೀರು ಸಹ ಇಲ್ಲದೆ ಕಾಯುತ್ತಿದ್ದಾರೆ. ಭಾರತದ ರಾಯಭಾರಿ ಕಚೇರಿಯಿಂದ ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ. ಇವರ ಕರೆಗಳನ್ನು ಕಚೇರಿ ಸ್ವೀಕರಿಸುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರು ನಿಂತಿರುವ ಸ್ಥಳದ ಸುತ್ತಮುತ್ತ ಒಂದೇ ಒಂದು ಅಂಗಡಿ ಇಲ್ಲವಂತೆ.

ಈ ವಿಡಿಯೋ ರೆಕಾರ್ಡ್ ಮಾಡುವ ಮೊದಲು ಅವರು 12 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಟಿಕೆಟ್ ಗಳನ್ನು ಖರೀದಿಸಿದ್ದಾರೆ. ಆದರೆ ಎಂಬೇಸಿಯಿಂದ ಅವರಿಗೆ ಇಮ್ಮಿಗ್ರೇಷನ್ ಸಿಗುತ್ತಿಲ್ಲವಂತೆ. ಮತ್ತೊಬ್ಬ ವಿದ್ಯಾರ್ಥಿನಿ ಇಂಟರ್ನ್ ಗಳಿಂದ (ಅವರು ಸೀನಿಯರ್ ಗಳಾಗಿರುವುದರಿಂದ) ಸಹಾಯ ಕೇಳಿದರೂ ಅವರು ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಮತ್ತೊಬ್ಬ ಪುರುಷ ವಿದ್ಯಾರ್ಥಿ ಅನ್ನ ನೀರಿಲ್ಲದೆ ಸ್ಟೂಡೆಂಟ್ಸ್ ಮೂರ್ಚೆ ಹೋಗುತ್ತಿದ್ದಾರೆ ಅಂತ ಹೇಳುತ್ತಾರೆ. ಭಾರತ ಸರ್ಕಾರ ಉಕ್ರೇನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ನಾಲ್ಕು ಸಚಿವರನ್ನು ರುಮೇನಿಯಾ, ಪೋಲೆಂಡ್, ಹಂಗರಿಗಳಿಗೆ ಕಳಿಸಿದೆ. ಸರ್ಕಾರದ ಪ್ರತಿನಿಧಿಗಳು ಹತ್ತಿರದಲ್ಲೇ ಇದ್ದಾರೆ ಎಂಬ ಅರಿವು ಸಹ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಇಲ್ಲವೇ?

ಭಾರತ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳು ಸಾಲವು ಅಂತ ಅನಿಸುತ್ತಿದೆ.

ಇದನ್ನೂ ಓದಿ:   ಉಕ್ರೇನ್​ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ 4ನೇ ಬಾರಿಗೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

Published on: Mar 01, 2022 09:07 PM