ಹೊಸದಾಗಿ ಪಕ್ಷ ಸೇರಿದ ನಾಯಕನಿಗೆ ಶಿವಕುಮಾರ, ಸಲೀಂ ಹೆಗಲ ಮೇಲಿದ್ದ ಶಾಲನ್ನು ತೆಗೆದು ಹೊದಿಸಿದರು!!
ಸಲೀಂ ಬೇರೆ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ ಅನ್ನೋದು ಬೇರೆ ಮಾತು. ಪಕ್ಷದ ಅಧ್ಯಕ್ಷರೇ ಶಾಲನ್ನು ತೆಗೆದುಕೊಂಡಾಗ ಏನು ಮಾಡಲಾಗುತ್ತದೆ. ಅಲ್ಲದೆ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಸಲೀಂ, ಈಗ ಶಿವಕುಮಾರ ಅವರ ಕೃಪಾಕಟಾಕ್ಷದಲ್ಲಿದ್ದಾರೆ.
ಕೆ ಪಿ ಸಿ ಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ಬಳಿ ಸಮಸ್ಯೆಗಳಿಗೆ ಇನ್ಸ್ಟಂಟ್ ಪರಿಹಾರವಿದೆ ಅನಿಸುತ್ತೆ. ಯಾಕೆ ಅಂತ ಈ ವಿಡಿಯೋದ ಆರಂಭದಲ್ಲೇ ಗೊತ್ತಾಗುತ್ತದೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ (Mekedatu Project) ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪಾದಯಾತ್ರೆಯಿಂದ ಪ್ರಭಾವಿತರಾಗಿರುವ ಬೇರೆ ಪಕ್ಷಗಳ ನಾಯಕರಿಗೆ ಕಾಂಗ್ರೆಸ್ ಸೇರುವ ಆಸೆ ಹುಟ್ಟಿಬಿಟ್ಟಿದೆ. ಅಂಥ ಕೆಲವರು ಮಂಗಳವಾರದಂದು ಪಾದಯಾತ್ರೆ ಮೈಸೂರು ರಸ್ತೆಯಲ್ಲಿದ್ದಾಗ ಕಾಂಗ್ರೆಸ್ ಪಕ್ಷ ಸೇರಿದರು. ಶಿವಕುಮಾರ ಅವರು ಅವರನ್ನಯ ರಸ್ತೆಯಲ್ಲೇ ಹೂವಿನ ಹಾರ ಸ್ವಾಗತಿಸಿದರು. ಆದರೆ ಹೊಸದಾಗಿ ಪಕ್ಷ ಸೇರುವವರಿಗೆ ಪಕ್ಷದ ಶಾಲು ಹೊದಿಸಿ ಸ್ವಾಗತಿಸಲಾಗುತ್ತದೆ. ಆದರೆ, ನಡುರಸ್ತೆಯಲ್ಲಿ ಶಿವಕುಮಾರ ಅವರ ಬಳಿ ಶಾಲು ಎಲ್ಲಿಂದ ಬರಬೇಕು? ಅವರ ಪಕ್ಕದಲ್ಲೇ ನಿಂತಿದ್ದ ಎಮ್ ಎ ಸಲೀಂ (MA Salim) ಅವರ ಹೆಗಲ ಮೇಲಿದ್ದ ಶಾಲನ್ನು ಅವರಿಗೆ ಸುಳಿವು ಕೂಡ ನೀಡದೆ ತೆಗೆದು ಪಕ್ಷ ಸೇರಿದ ವ್ಯಕ್ತಿಗೆ ಹೊದಿಸಿದರು. ಅವರ ವರ್ತನೆಯಿಂದ ಒಂದು ಕ್ಷಣ ತಬ್ಬಿಬ್ಬಾದ ಸಲೀಂ ನಂತರ ಪೆಚ್ಚುಮೋರೆ ಹಾಕಿ ಒಂದು ನೀರಸ ನಗೆ ಬೀರಿದರು.
ಸಲೀಂ ಬೇರೆ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ ಅನ್ನೋದು ಬೇರೆ ಮಾತು. ಪಕ್ಷದ ಅಧ್ಯಕ್ಷರೇ ಶಾಲನ್ನು ತೆಗೆದುಕೊಂಡಾಗ ಏನು ಮಾಡಲಾಗುತ್ತದೆ. ಅಲ್ಲದೆ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಸಲೀಂ, ಈಗ ಶಿವಕುಮಾರ ಅವರ ಕೃಪಾಕಟಾಕ್ಷದಲ್ಲಿದ್ದಾರೆ.
ನಿಮಗೆ ಸಲೀಂ-ಉಗ್ರಪ್ಪ ಸಂವಾದ ನೆನಪಿದೆ ತಾನೆ? ಶಿವಕುಮಾರ ಬಗ್ಗೆ ಹಗುರವಾಗಿ ಮಾತಾಡಿ 6 ವರ್ಷಗಳ ಅವಧಿಗೆ ಉಚ್ಚಾಟನೆಗೊಂಡಿದ್ದ ಅವರು ಅತ್ತು ಕರೆದು ಕ್ಷಮೆಯಾಚಿಸಿ ವಾಪಸ್ಸು ಬಂದಿದ್ದಾರೆ.
ಪಾದಯಾತ್ರೆ ಬೆಂಗಳೂರು ತಲುಪಿ ನಗರದ ಹಲವಾರು ಭಾಗಗಳಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ. ಶಿವಕುಮಾರ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಶ್ವಾಸನೆ ನೀಡಿದ್ದರಂತೆ.
ಅದನ್ನು ಬೊಮ್ಮಾಯಿ ನಂಬಿದ್ದರೇ? ಗೊತ್ತಿಲ್ಲ ಮಾರಾಯ್ರೇ.
ಇದನ್ನೂ ಓದಿ: Mekedatu Padayatra 2.0 Live: ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ; ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್