ATMನಲ್ಲಿ ಕೋಟ್ಯಂತರ ರೂ ಹಣ ಎಗರಿಸಿ ಎಸ್ಕೇಪ್ ಆದ ಮಾಜಿ ನಟ!
ಬೆಂಗಳೂರು: ಬ್ಯಾಂಕ್ ಎಟಿಎಮ್ ಗಳಿಗೆ ಹಣ ತುಂಬುವ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೋಟ್ಯಂತರ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಲಾಗಿ ಕ್ಯಾಷ್ ಎಂಬುದು ಎಟಿಎಂಗಳಿಗೆ ಹಣ ತುಂಬಿಸುವ ಕಂಪನಿ. ಇದು ಕಾಕ್ಸ್ಟೌನ್ನಲ್ಲಿದೆ. ಅನಂದ್ ರೆಡ್ಡಿ ಎಂಬಾತ ಈ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡ್ತಿದ್ದ. ಆನಂದ್ ರೆಡ್ಡಿ ಜೊತೆಗೆ ಪವನ್ ಎಂಬಾತ ಸೇರಿಕೊಂಡು ಕಾಕ್ಸ್ಟೌನ್ನಲ್ಲಿ ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದ. ಆದರೆ ಕಳೆದ ವಾರ ಎಂಟಿಎಂಗಳಲ್ಲಿದ್ದ ಹಣ ೧ ಕೋಟಿ ೬೧ ಲಕ್ಷ […]
ಬೆಂಗಳೂರು: ಬ್ಯಾಂಕ್ ಎಟಿಎಮ್ ಗಳಿಗೆ ಹಣ ತುಂಬುವ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೋಟ್ಯಂತರ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಲಾಗಿ ಕ್ಯಾಷ್ ಎಂಬುದು ಎಟಿಎಂಗಳಿಗೆ ಹಣ ತುಂಬಿಸುವ ಕಂಪನಿ. ಇದು ಕಾಕ್ಸ್ಟೌನ್ನಲ್ಲಿದೆ. ಅನಂದ್ ರೆಡ್ಡಿ ಎಂಬಾತ ಈ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡ್ತಿದ್ದ.
ಆನಂದ್ ರೆಡ್ಡಿ ಜೊತೆಗೆ ಪವನ್ ಎಂಬಾತ ಸೇರಿಕೊಂಡು ಕಾಕ್ಸ್ಟೌನ್ನಲ್ಲಿ ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದ. ಆದರೆ ಕಳೆದ ವಾರ ಎಂಟಿಎಂಗಳಲ್ಲಿದ್ದ ಹಣ ೧ ಕೋಟಿ ೬೧ ಲಕ್ಷ ದೋಚಿ ಅನಂದ್ ರೆಡ್ಡಿ ಪರಾರಿಯಾಗಿದ್ದಾನೆ. ಆನಂದ್ ರೆಡ್ಡಿ, ಈ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದ. ಆನಂದ್ ಈ ಮೊದಲು ಶಿವಾನಂದ್ ಸರ್ಕಲ್ ಹಾಗೂ ಕಾಫಿ ಕಟ್ಟೆ ಚಿತ್ರಗಳಲ್ಲಿ ನಟಿಸಿದ್ದ.
ಲಾಗಿ ಕ್ಯಾಷ್ ಮ್ಯಾನೇಜರ್ ಪುಲಿಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪುಲಿಕೇಶಿ ನಗರ ಪೊಲೀಸರು ಆರೋಪಿ ಆನಂದ್ ರೆಡ್ಡಿಗಾಗಿ ಶೋಧ ನಡೆಸಿದ್ದಾರೆ.
Published On - 1:12 pm, Wed, 25 December 19