ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!

| Updated By: ಸಾಧು ಶ್ರೀನಾಥ್​

Updated on: Sep 17, 2020 | 12:22 PM

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ. ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ […]

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!
Follow us on

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ.

ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ:
ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ ಮೇಕಪ್ ಕಿಟ್ ಸಮೇತ ಬಟ್ಟೆಯ ಬ್ಯಾಗ್ ಜೊತೆ ರಾಗಿಣಿ ಕುಟುಂಬ ಬಂದಿತ್ತು. ಆದರೆ ಅವರಿಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಜೈಲಿನ ರೂಲ್ಸ್ ಪ್ರಕಾರ ಬಟ್ಟೆಗಳನ್ನು ಸಹ ಕ್ವಾರಂಟೈನ್ ಮಾಡಲಾಗತ್ತೆ. ಮೂರು ದಿನಗಳ ನಂತರ ಆ ಬಟ್ಟೆಗಳನ್ನು ಆಯಾ ಸಂಭಂದಪಟ್ಟವರಿಗೆ ನೀಡಲಾಗತ್ತೆ. ಕೋವಿಡ್ ಇರೋದ್ರಿಂದ ಈ ರೀತಿಯಾದ ಚಿಂತನೆ ಮಾಡಲಾಗಿದೆ. ಸಮೇತ ಬಟ್ಟೆಗಳನ್ನು ತಂದು ಕೊಟ್ಟಿರುವ ಕುಟುಂಬ..

ಚಿಂತೆಯಲ್ಲಿ ಮುಳುಗಿದ ಸಂಜನಾ:
ಸದ್ಯ ಸಂಜನಾ ಮತ್ತು ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರಿಗೂ ಒಂದೇ ಕೊಠಡಿ ನೀಡಲಾಗಿದೆ. ಜೈಲಿನ ಕೊಠಡಿಯಲ್ಲಿ ನಟಿ ಸಂಜನಾ ಚಿಂತೆಯಲ್ಲಿ ಮುಳುಗಿದ್ದಾರೆ. ಕುಟುಂಬದರು ಬರುವಂತಹ ನಿರೀಕ್ಷೆಯಲ್ಲಿ ಸಂಜನಾ ಕಾಲ ಕಳೆಯುತ್ತಿದ್ದಾರೆ. ಆದರೆ ಕುಟುಂಬದರು ಅಥವಾ ವಕೀಲರಿಗೆ ನೋ ಎಂಟ್ರಿ. ನಾಲ್ಕು ಗೋಡೆಗಳ ಮಧ್ಯೆ ಒಂಟಿಯಾಗಿದ್ದಾರೆ. ನಾಳೆ ಬೇಲ್ ಅರ್ಜಿ ವಿಚಾರಣೆ ಇರೋದ್ರಿಂದ ಇಂದು ಸಂಜಾನಾ ಪರ ವಕೀಲರು ಜೈಲಿಗೆ ಭೇಟಿ ನೀಡೋ ಸಾಧ್ಯತೆ ಇದೆ.