ಸುಂದರಿಯರ ಫೋಟೋ ಕಳಿಸಿ ರೇಟ್ ಫಿಕ್ಸ್ ಮಾಡ್ತಿದ್ದ ವಿರೇನ್! ಇನ್ನೂ ಏನೆಲ್ಲ ಮಾಡ್ತಿದ್ದ..

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ವಿರೇನ್ ಖನ್ನಾ ಬಗ್ಗೆ ಟಿವಿ9ಗೆ ಮತ್ತಷ್ಟು ಸ್ಫೋಟಕ ಮಾಹಿತಿ ಲಭಿಸಿದೆ. ಬೆಂಗಳೂರಿನ ಪಬ್‌ಗಳನ್ನೇ ಆರೋಪಿ ವಿರೇನ್ ಖನ್ನಾ ಟಾರ್ಗೆಟ್ ಮಾಡ್ತಿದ್ದನಂತೆ. ಲಾಸ್ ಆಗಿರುವ ಪಬ್‌ಗಳ ಜತೆ ವಿರೇನ್ ಖನ್ನಾ ಡೀಲಿಂಗ್ ಮಾಡಿ ಲಾಸ್ ಆಗಿರುವ ಪಬ್‌ಗೆ ಲಾಭ ಮಾಡಿ ಕೊಡುವ ಒಪ್ಪಂದ ಮಾಡಿಕೊಂಡು ಬಂದ ಲಾಭದಲ್ಲಿ ಶೇ.25ರಷ್ಟು ಹಣ ನೀಡುವಂತೆ ಮಾತು ಕತೆ ಮಾಡಿಕೊಳ್ಳುತ್ತಿದ್ದ. ಹಲವು ಪಬ್ ಮಾಲೀಕರ ಜತೆ ಈ ರೀತಿ ಒಪ್ಪಂದ ಮಾಡಿಕೊಂಡಿದ್ದ. […]

ಸುಂದರಿಯರ ಫೋಟೋ ಕಳಿಸಿ ರೇಟ್ ಫಿಕ್ಸ್ ಮಾಡ್ತಿದ್ದ ವಿರೇನ್! ಇನ್ನೂ ಏನೆಲ್ಲ ಮಾಡ್ತಿದ್ದ..
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 17, 2020 | 3:17 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ವಿರೇನ್ ಖನ್ನಾ ಬಗ್ಗೆ ಟಿವಿ9ಗೆ ಮತ್ತಷ್ಟು ಸ್ಫೋಟಕ ಮಾಹಿತಿ ಲಭಿಸಿದೆ. ಬೆಂಗಳೂರಿನ ಪಬ್‌ಗಳನ್ನೇ ಆರೋಪಿ ವಿರೇನ್ ಖನ್ನಾ ಟಾರ್ಗೆಟ್ ಮಾಡ್ತಿದ್ದನಂತೆ.

ಲಾಸ್ ಆಗಿರುವ ಪಬ್‌ಗಳ ಜತೆ ವಿರೇನ್ ಖನ್ನಾ ಡೀಲಿಂಗ್ ಮಾಡಿ ಲಾಸ್ ಆಗಿರುವ ಪಬ್‌ಗೆ ಲಾಭ ಮಾಡಿ ಕೊಡುವ ಒಪ್ಪಂದ ಮಾಡಿಕೊಂಡು ಬಂದ ಲಾಭದಲ್ಲಿ ಶೇ.25ರಷ್ಟು ಹಣ ನೀಡುವಂತೆ ಮಾತು ಕತೆ ಮಾಡಿಕೊಳ್ಳುತ್ತಿದ್ದ. ಹಲವು ಪಬ್ ಮಾಲೀಕರ ಜತೆ ಈ ರೀತಿ ಒಪ್ಪಂದ ಮಾಡಿಕೊಂಡಿದ್ದ. ಫೈವ್‌ ಸ್ಟಾರ್ ಹೋಟೆಲ್‌ಗಳಲ್ಲಿನ ಪಬ್‌ಗಳೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಅದರಲ್ಲೂ ಸ್ವಿಮ್ಮಿಂಗ್ ಪೂಲ್, ಲಾನ್ ಇರುವ ಜಾಗವೇ ಹೆಚ್ಚು.

ಹೊರಜಗತ್ತಿಗೆ ಕಾಣದಂಥ ಸ್ಥಳಗಳೇ ಹೆಚ್ಚು: ಇನ್ನು ಹೊರಜಗತ್ತಿಗೆ ಕಾಣದಂಥ ಸ್ಥಳಗಳನ್ನ ಆಯ್ಕೆ ಮಾಡಿಕೊಳ್ತಿದ್ದ. ಲಾಸ್ ಆಗಿರುವ ಪಬ್‌ಗಳಲ್ಲಿ ಇವೆಂಟ್ ಆಯೋಜಿಸಿ ಆತನ ಲಿಸ್ಟ್‌ನಲ್ಲಿರುವವರಿಗೆ ವಾಟ್ಸಾಪ್ ಮೂಲಕ ಇವೆಂಟ್‌ ವಿವರಗಳನ್ನು ನೀಡುತ್ತಿದ್ದ. ಡಿಜೆ ಯಾರು? ಅಲ್ಲಿ ಸರಬರಾಜಾಗುವ ಡ್ರಗ್ಸ್ ಯಾವುದು? ಜತೆಗೆ ಅಲ್ಲಿ ಸರ್ಪೈಸ್ ಇದೆ ಎಂದು ಸಂದೇಶಗಳನ್ನ ಕಳಿಸ್ತಿದ್ದ.

ಇವೆಂಟ್‌ಗೆ ಕೆಲ ದೇಶಿ, ವಿದೇಶಿ ಮಾಡಲ್ಸ್‌ ಆಹ್ವಾನಿಸುವುದು, ನಟ-ನಟಿಯರನ್ನು ಆಹ್ವಾನಿಸುವ ಕೆಲಸ ಮಾಡುತ್ತಿದ್ದ ಈ ಆರೋಪಿ ವಿರೇನ್ ಖನ್ನಾ. ಜೊತೆಗೆ ಸುಂದರಿಯರ ಜತೆ ಫೋಟೋ ತೆಗೆದು ಪ್ರತಿಷ್ಠಿತ ಪತ್ರಿಕೆಗಳ ಪೇಜ್‌3ನಲ್ಲಿ ಪ್ರಕಟ ಮಾಡಿಸುತ್ತಿದ್ದ ಬಳಿಕ ಆ ಫೋಟೋ ಗ್ರೂಪ್‌ನಲ್ಲಿ ಶೇರ್ ಮಾಡುತ್ತಿದ್ದ. ಕೆಲವರಿಗೆ ಸುಂದರಿಯರ ಪ್ರತ್ಯೇಕವಾಗಿ ಫೋಟೋ ಕಳಿಸಿ ರೇಟ್ ಫಿಕ್ಸ್ ಮಾಡುತ್ತಿದ್ದ. ಇವೆಲ್ಲದರಿಂದ ವಿರೇನ್ ಖನ್ನಾ ಸಾಕಷ್ಟು ಹಣಗಳಿಸಿದ್ದ.

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ