AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳನ್ನು ಫಿದಾ ಮಾಡಿರುವ ಕ್ರೇಜಿಸ್ಟಾರ್ ಹೊಸ ಲುಕ್ | Fans go gaga over Crazy Star Ravichandran’s new look

ಕೊರೊನಾ ಪಿಡುಗು ಸೃಷ್ಟಿಸಿದ ಲಾಕ್​ಡೌನ್​ಗಳಿಂದಾಗಿ ಚಿತ್ರಮಂದಿರಗಳೆಲ್ಲ ಸುಮಾರು 6 ತಿಂಗಳು ಕಾಲ ಮುಚ್ಚಿದ್ದವು. ಈಗಷ್ಟೇ ಥಿಯೇಟರ್​ಗಳು ಕ್ರಮೇಣ ಒಂದೊಂದಾಗಿ ಪ್ರದರ್ಶನಗಳನ್ನು ಆರಂಭಿಸಿವೆ. ಏತನ್ಮಧ್ಯೆ ಹೊಸ ಸಿನಿಮಾಗಳು ಲಾಂಚ್ ಆಗುತ್ತಿದ್ದು ಕೆಲ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಫಿಲ್ಮ್ ‘ಕನ್ನಡಿಗ’ದ ಶೂಟಿಂಗ್ ಸಹ ಶುರುವಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು […]

ಅಭಿಮಾನಿಗಳನ್ನು ಫಿದಾ ಮಾಡಿರುವ ಕ್ರೇಜಿಸ್ಟಾರ್ ಹೊಸ ಲುಕ್ | Fans go gaga over Crazy Star Ravichandran's new look
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 09, 2020 | 9:17 PM

Share

ಕೊರೊನಾ ಪಿಡುಗು ಸೃಷ್ಟಿಸಿದ ಲಾಕ್​ಡೌನ್​ಗಳಿಂದಾಗಿ ಚಿತ್ರಮಂದಿರಗಳೆಲ್ಲ ಸುಮಾರು 6 ತಿಂಗಳು ಕಾಲ ಮುಚ್ಚಿದ್ದವು. ಈಗಷ್ಟೇ ಥಿಯೇಟರ್​ಗಳು ಕ್ರಮೇಣ ಒಂದೊಂದಾಗಿ ಪ್ರದರ್ಶನಗಳನ್ನು ಆರಂಭಿಸಿವೆ. ಏತನ್ಮಧ್ಯೆ ಹೊಸ ಸಿನಿಮಾಗಳು ಲಾಂಚ್ ಆಗುತ್ತಿದ್ದು ಕೆಲ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಫಿಲ್ಮ್ ‘ಕನ್ನಡಿಗ’ದ ಶೂಟಿಂಗ್ ಸಹ ಶುರುವಾಗಿದೆ.

ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು ನಿರ್ವಹಿಸುತ್ತಿರುವ ಪಾತ್ರದ ಹೆಸರು ಗುಣಭದ್ರ ಎಂದು ಗೊತ್ತಾಗಿದೆ. ಬಿಳಿ ಪಂಚೆ, ತಲೆ ಮೇಲೆ ಮುಂಡಾಸು ಮತ್ತು ಮುಖದ ಮೇಲೆ ಗಿರಿಜಾ ಮೀಸೆ ಹೊತ್ತ ರವಿಚಂದ್ರನ್ ಅವರ ಇಮೇಜ್ ಅಭಿಮಾನಿಗಳ ಕುತೂಹಲ ಕೆರಳಿಸುವದರೊಂದಿಗೆ ವೈರಲ್ ಕೂಡ ಆಗಿಬಿಟ್ಟಿದೆ.

ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರವನ್ನು ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಖ್ಯಾತ ಬಾಲಿವುಡ್ ನಟ ಟಾಮ್ ಆಲ್ಟರ್ ಅವರ ಮಗ ಜೆಮೀ ಆಲ್ಟರ್, ಕನ್ನಡಇಂಗ್ಲಿಷ್ ನಿಘಂಟು ರಚಿಸಿದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ‘ಕೆಜಿಎಫ್’ ಚಿತ್ರಕ್ಕೆ ಸಂಗೀತ ನೀಡಿದ ರವಿ ಬಸ್ರೂರ್ ‘ಕನ್ನಡಿಗ’ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಲಿದ್ದಾರೆ.

ರವಿಚಂದ್ರನ್ ಖುದ್ದು ಈ ಸಿನಿಮಾದ ಬಗ್ಗೆ ಬಹಳ ರೋಮಾಂಚಿತರಾಗಿದ್ದು ಇದರಲ್ಲಿರುವಂಥ ಪಾತ್ರವನ್ನು ಹಿಂದೆಂದೂ ಮಾಡಿಲ್ಲವೆಂದು ಹೇಳಿದ್ದಾರೆ.

Published On - 9:16 pm, Mon, 9 November 20

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ