
ಕೆಲವು ಕಲಾವಿದರು ಫ್ಯಾಮಿಲಿ ಡ್ರಾಮಾ ಮಾತ್ರ ಮಾಡುತ್ತಾರೆ. ಆ್ಯಕ್ಷನ್ ಸಿನಿಮಾಗಳನ್ನು ಮಾಡಲು ಅವರು ಎಂದಿಗೂ ಮನಸ್ಸು ಮಾಡುವುದಿಲ್ಲ. ಇದರಿಂದ ಕೆಲವೊಮ್ಮೆ ಸೋಲು ಉಂಟಾಗುವ ಸಾಧ್ಯತೆ ಇರುತ್ತದೆ. ಈ ವಿಷಯಗಳ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. ತಾವು ಫ್ಯಾಮಿಲಿ ಡ್ರಾಮಾ ಸಿನಿಮಾಗಳನ್ನು ಮಾತ್ರ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್, ಅಮೃತಾ ಅಯ್ಯಂಗಾರ್, ನಾಗಭೂಷಣ್ ಮೊದಲಾದವರು ‘ಫಾದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ‘ಗಗನದ ನೇಸರ’ ಸಾಂಗ್ ರಿಲೀಸ್ ಆಗಿದೆ. ಈ ಈವೆಂಟ್ನಲ್ಲಿ ಮಾತನಾಡಿದ ಕೃಷ್ಣ, ತಾವು ಯಾಕೆ ಫ್ಯಾಮಿಲಿ ಓರಿಯಂಟೆಡ್ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಿದರು.
ಇದನ್ನೂ ಓದಿ: ‘ಲವ್ ಮಾಕ್ಟೆಲ್ 3’ ಸೆಟ್ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಫಾದರ್ ಸಿನಿಮಾದಲ್ಲಿ ಕಥೆ ಚೆನ್ನಾಗಿದೆ. ವಿಷಯದಲ್ಲಿ ತಾಕತ್ತಿದೆ. ನನಗೆ ತುಂಬಾನೇ ಎಗ್ಸೈಟ್ಮೆಂಟ್ ಇದೆ. ನಾನು ಫ್ಯಾಮಿಲಿ ಸಿನಿಮಾನೇ ಮಾಡೋದು. ಯಾಕೆ ಆ್ಯಕ್ಷನ್ ಮಾಡಲ್ಲ ಎಂದು ಕೇಳ್ತಾರೆ. ನಾನು ಟೊಮ್ಯಾಟೋ ಬೆಳೆಯೋದು. ರೇಟ್ ಇರಲಿ ಬಿಡಲಿ ಅದನ್ನೇ ಬೆಳೆಯುತ್ತಿದ್ದೇನೆ. ಟೊಮ್ಯಾಟೋಗೆ ಸೀಸನ್ (ಫ್ಯಾಮಿಲಿ ಸಿನಿಮಾಗಳಿಗೆ) ರೇಟ್ ಬಂದಿದೆ. ಹೊಡಿಬಡಿಯಿಂದ ಬ್ರೇಕ್ ಪಡೆದಿದ್ದಾರೆ. ಈ ರೀತಿಯ ಸಿನಿಮಾ ನೋಡುತ್ತಿದ್ದಾರೆ. ನಿರ್ಮಾಪಕ ಚಂದ್ರು ಅವರಿಗೆ ಇದರಿಂದ ಲಾಭ ಆಗಲಿ’ ಎಂದು ಕೃಷ್ಣ ಹಾರೈಸಿದ್ದಾರೆ.
‘ಫಾದರ್’ ಚಿತ್ರವನ್ನು ಆರ್ ಚಂದ್ರು ಅವರು ತಮ್ಮ ಆರ್ಸಿ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಅವರ ಪತ್ನಿ ಯಮುನಾ ಚಂದ್ರಶೇಖರ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ರಾಜಮೋಹನ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಹಾಡಿದ್ದಾರೆ.
ಡಿಸೆಂಬರ್ 4ರಂದು ‘ಫಾದರ್’ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಸಿನಿಮಾ ಸಿದ್ಧವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂಬುದು ಚಂದ್ರು ಉದ್ದೇಶ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.