ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹೆದರಿದ್ದಾರಂತೆ. ಸಾಹೋ ನಂತ್ರ ಬರ್ತಿರೋ ಸಿನಿಮಾ ಟೈಟಲ್ ಬಗ್ಗೆ ತುಂಬಾನೇ ಯೋಚ್ನೆ ಮಾಡ್ತಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್ ಹೆದರಿಕೆಗೂ ಅವ್ರ ಮುಂದಿನ ಚಿತ್ರಕ್ಕೂ ಏನು ಸಂಬಂಧ ಅನ್ನೋದ್ರ ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ.
ಸಾಹೋ ಚಿತ್ರದ ಬಳಿಕ ಪ್ರಭಾಸ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಬ್ರೇಕ್ ಹಾಕಿದ್ದೇ ಜಾನ್ ಸಿನಿಮಾ. ಸಾಹೋ ಎಡವಟ್ಟಿನ ನಂತ್ರ ಜಾನ್ ಸಿನಿಮಾವನ್ನ ಪ್ರಭಾಸ್ ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಧಾಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗ್ಲೆ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗಿದ್ದು, ಜಾನ್ನಲ್ಲಿನ ಪ್ರಭಾಸ್ ಲುಕ್ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.
ಸಮಂತಾ ಮತ್ತು ಶರ್ವಾನಂದ್ ಅಭಿನಯದ ಜಾನು ಚಿತ್ರದ ಟ್ರೇಲರ್ ಈಗಾಗ್ಲೆ, ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಿನಿಮಾರಂಗದಲ್ಲಿ ದಶಕ ಕಳೆದು ಸಮಂತಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜೊತೆಗೆ ಸಮಂತಾ ಚಿತ್ರಗಳ ಬಗ್ಗೆ ಒಂದು ಕ್ರೇಜ್ ಇದೆ. ಈಗಾಗ್ಲೆ ಸಮಂತಾಳನ್ನ ಜಾನು ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ.
ಜಾನು ಮತ್ತು ಜಾನ್ ಎರಡೂ ಟೈಟಲ್ಗಳು ಒಂದೇ ರೀತಿ ಇವೆ. ಎರಡರ ಮಧ್ಯೆ ಅಷ್ಟೇನು ವ್ಯತ್ಯಾಸವಿಲ್ಲ. ಹಾಗಾಗಿ ಪ್ರಭಾಸ್ ಜಾನ್ ಟೈಟಲ್ ಬದಲಿಸುವಂತೆ ಸಿನಿಮಾತಂಡಕ್ಕೆ ಸೂಚಿಸಿದ್ದಾರಂತೆ. ಪ್ರಭಾಸ್ ಸಿನಿಮಾಗಳು ಅಂದ್ರೆ ಅಲ್ಲಿ ಟೈಟಲ್ನದ್ದೇ ಒಂದು ಟ್ರೆಂಡ್ ಇರುತ್ತೆ. ಹಾಗಾಗಿ, ಮತ್ತೊಮ್ಮೆ ಟ್ರೆಂಡ್ ಹುಟ್ಟುಹಾಕಲು ಪ್ರಭಾಸ್ ಸಿದ್ಧವಾಗಿದ್ದು, ಹೊಸ ಟೈಟಲ್ನೊಂದಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ.
Published On - 2:08 pm, Sat, 1 February 20