ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರದ ಫಸ್ಟ್‌ ಲುಕ್ ಪೋಸ್ಟರ್ ಔಟ್

|

Updated on: Aug 10, 2020 | 11:15 AM

ಬೆಂಗಳೂರು:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದ್ದು, ಎಂದಿನಂತೆ ಕಿಚ್ಚ ಸುದೀಪ್ ಚಿತ್ರಗಳ ವಿಭಿನ್ನ ರೀತಿಯ ಪೋಸ್ಟರ್​ಗಳ ಸರಣಿ ಇಲ್ಲೂ ಸಹ ಮುಂದುವರೆದಿದೆ. ಪೋಸ್ಟರ್​ನಲ್ಲಿ ಸ್ಲೀವ್​ಲೆಸ್ ಶರ್ಟ್ ಧರಿಸಿರುವ ಅಭಿನಯ ಚಕ್ರವರ್ತಿ, ವಿಭಿನ್ನ ಶೈಲಿಯ ಆಸನದ ಮೇಲೆ ಕುಳಿತು, ಕೈಯಲ್ಲಿ ಗನ್ ಹಿಡಿದು ರಗಡ್ ಲುಕ್ ನೀಡಿದ್ದಾರೆ. ಈ ವಿಭಿನ್ನ ರೀತಿಯ ಪೋಸ್ಟರ್ ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಬಹು ನಿರೀಕ್ಷೆಯ ಈ ಚಿತ್ರವನ್ನು ರಂಗಿತರಂಗ ಖ್ಯಾತಿಯ […]

ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರದ ಫಸ್ಟ್‌ ಲುಕ್ ಪೋಸ್ಟರ್ ಔಟ್
Follow us on

ಬೆಂಗಳೂರು:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದ್ದು, ಎಂದಿನಂತೆ ಕಿಚ್ಚ ಸುದೀಪ್ ಚಿತ್ರಗಳ ವಿಭಿನ್ನ ರೀತಿಯ ಪೋಸ್ಟರ್​ಗಳ ಸರಣಿ ಇಲ್ಲೂ ಸಹ ಮುಂದುವರೆದಿದೆ.

ಪೋಸ್ಟರ್​ನಲ್ಲಿ ಸ್ಲೀವ್​ಲೆಸ್ ಶರ್ಟ್ ಧರಿಸಿರುವ ಅಭಿನಯ ಚಕ್ರವರ್ತಿ, ವಿಭಿನ್ನ ಶೈಲಿಯ ಆಸನದ ಮೇಲೆ ಕುಳಿತು, ಕೈಯಲ್ಲಿ ಗನ್ ಹಿಡಿದು ರಗಡ್ ಲುಕ್ ನೀಡಿದ್ದಾರೆ. ಈ ವಿಭಿನ್ನ ರೀತಿಯ ಪೋಸ್ಟರ್ ಕಿಚ್ಚನ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಬಹು ನಿರೀಕ್ಷೆಯ ಈ ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದು, ಶಾಲಿನಿ ಮಂಜುನಾಥ್ ಹಾಗೂ ಜಾಕ್ ಮಂಜು ನಿರ್ಮಾಣದ ಹೊರೆ ಹೊತ್ತಿದ್ದಾರೆ.