ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಇದು ಕನ್ನಡ ಚಿತ್ರರಂಗದ ಹೆಮ್ಮೆ

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆ.ಜೆ. ಪೆರ್ರಿ ಅವರು ಈ ಚಿತ್ರದಲ್ಲಿ ಕೆಲಸ ಮಾಡಿದ್ದು ವಿಶೇಷ. ಚಿತ್ರದ ಟೀಸರ್ ಜನವರಿ 8 ರಂದು ಬಿಡುಗಡೆಯಾಗಿದೆ. ಆರಂಭದಲ್ಲಿ ಏಪ್ರಿಲ್ ನಲ್ಲಿ ಬಿಡುಗಡೆ ಎಂದು ಘೋಷಿಸಲಾಗಿತ್ತು ಆದರೆ 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಇದು ಕನ್ನಡ ಚಿತ್ರರಂಗದ ಹೆಮ್ಮೆ
ಯಶ್-ಪೆರ್ರಿ

Updated on: Mar 13, 2025 | 7:34 AM

‘ಟಾಕ್ಸಿಕ್’ ಚಿತ್ರ ಯಾವ ರೀತಿಯಲ್ಲಿ ಸಿದ್ಧವಾಗುತ್ತಿದೆ ಎನ್ನುವ ಮುನ್ಸೂಚನೆ ಸಿಗುತ್ತಲೇ ಇದೆ. ಈ ಚಿತ್ರಕ್ಕೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಒಟ್ಟಾಗಿ ಶೂಟಿಂಗ್ ಮಾಡಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಈ ರೀತಿ ಕನ್ನಡ ಹಾಗೂ ಇಂಗ್ಲಿಷನ್​ನಲ್ಲಿ ಚಿತ್ರವನ್ನು ಒಟ್ಟಿಗೆ ಶೂಟ್ ಮಾಡುತ್ತಿರುವುದು ಸ್ಯಾಂಡಲ್​ವುಡ್ ಇತಿಹಾಸದಲ್ಲಿ ಇದೇ ಮೊದಲು ಅನ್ನೋದು ವಿಶೇಷ. ಈಗ ಸಿನಿಮಾ ಬಗ್ಗೆ, ಯಶ್ (Yash) ಬಗ್ಗೆ ಅಮೆರಿಕದ ಸಾಹಸ ನಿರ್ದೇಶಕ ಜೆಜೆ ಪಿರ್ರಿ ಅವರು ಮಾತನಾಡಿದ್ದಾರೆ. ಅವರು ಯಶ್ ಅವರನ್ನು ಹೊಗಳಿದ್ದಾರೆ.

ಹಾಲಿವುಡ್​ನಲ್ಲಿ ಬೇರೆಯದೇ ಅಲೆ ಸೃಷ್ಟಿಸಿದ ‘ಐರನ್ ಮ್ಯಾನ್’, ‘ಎಕ್ಸ್ ಮ್ಯಾನ್’, ‘ಜಾನ್ ವಿಕ್ 2’ ಸೇರಿ ಹಲವಾರು ಚಿತ್ರಗಳಲ್ಲಿ ಜೆಜೆ ಪೆರ್ರಿ ಅವರು ಕೆಲಸ ಮಾಡಿದ್ದಾರೆ. ಈಗ ‘ಟಾಕ್ಸಿಕ್’ ಸಿನಿಮಾಗೆ ಆಕ್ಷನ್ ದೃಶ್ಯಗಳನ್ನು ಇವರು ಸಂಯೋಜನೆ ಮಾಡಿದ್ದಾರೆ. ಎಲ್ಲಾ ಫೈಟ್​ಗಳು ಭಿನ್ನವಾಗಿ ಇವೆ ಎನ್ನಲಾಗಿದೆ. ಅವರು ಯಶ್ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಅನುಭವ ಹೇಗಿತ್ತು ಎಂಬುದನ್ನು ಇವರು ವಿವರಿಸಿದ್ದಾರೆ.

ಇದನ್ನೂ ಓದಿ
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು
ಅಕ್ಕನ ಮಗನನ್ನೇ ‘ಡೆವಿಲ್’ ಚಿತ್ರದಿಂದ ಹೊರಗಿಟ್ಟ ದರ್ಶನ್; ಕಾರಣ ನೀಡಿದ ನಟ
ಚಂದನ್ ಶೆಟ್ಟಿ ಜೊತೆ ಮತ್ತೆ ಬಾಳುತ್ತೀರಾ? ನೇರವಾಗಿ ಉತ್ತರ ನೀಡಿದ ನಿವೇದಿತಾ
ಮತ್ತೆ ಚಂದನ್ ಶೆಟ್ಟಿ ತಬ್ಬಿಕೊಂಡು ಕಣ್ಣೀರು ಹಾಕಿದ ನಿವೇದಿತಾ ಗೌಡ

‘ಟಾಕ್ಸಿಕ್’ ಚಿತ್ರದಲ್ಲಿ ನನ್ನ ಸ್ನೇಹಿತ ಯಶ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಭಾರತದಲ್ಲಿ ಇದ್ದಿದ್ದು ಖುಷಿ ಕೊಟ್ಟಿತು. ಯುರೋಪ್​ನ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದನ್ನು ನೋಡಲು ಕಾದಿದ್ದೇನೆ. ಇದು ನಿಜಕ್ಕೂ ಅದ್ಭುತ. ನಾವು ಏನನ್ನು ಮಾಡಿದ್ದೇವೋ ಆ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?

‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಯಶ್ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಈ ಚಿತ್ರದ ಟೀಸರ್ ರಿಲೀಸ್ ಆಯಿತು. ಇದರಲ್ಲಿ ಹೆಚ್ಚಿನ ಅಂಶವನ್ನು ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ಏಪ್ರಿಲ್​ನಲ್ಲಿ ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. 2025ರ ಅಂತ್ಯದ ವೇಳೆಗೆ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us