ಪ್ರಾಮುಖ್ಯತೆ ಕೊಡಬೇಕಾಗಿದ್ದು ಸೋಲಿಗೆ, ಗೆಲುವಿಗಲ್ಲ; ಇದು ರವಿಚಂದ್ರನ್ ಪಾಠ
ಗೆಲುವು ಅಭಿಮಾನಿಗಳದ್ದು. ಸೋಲು ನನ್ನದು. ನನಗೆ ವಿಕಲಚೇತನ ಮಗು ಹುಟ್ಟಿದರೆ ಅದು ಬೇರೆಯವರದ್ದು ಆಗಲ್ಲ. ಅದು ನನ್ನದೇ ಆಗಿರುತ್ತದೆ ಎಂದರು ರವಿಚಂದ್ರನ್.
ರವಿಚಂದ್ರನ್ ಅವರು ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಈ ವಿಚಾರಗಳ ಬಗ್ಗೆ ರವಿಚಂದ್ರನ್ ಟಿವಿ9 ಕನ್ನಡದ ಜತೆಗೆ ಎಕ್ಸ್ಕ್ಲ್ಯೂಸಿವ್ ಆಗಿ ಮಾತನಾಡಿದ್ದಾರೆ. ಈ ವೇಳೆ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
‘ಗೆಲುವು ಅಭಿಮಾನಿಗಳದ್ದು. ಸೋಲು ನನ್ನದು. ನನಗೆ ವಿಕಲಚೇತನ ಮಗು ಹುಟ್ಟಿದರೆ ಅದು ಬೇರೆಯವರದ್ದು ಆಗಲ್ಲ. ಅದು ನನ್ನದೇ ಆಗಿರುತ್ತದೆ. ಚೆನ್ನಾಗಿರುವ ಮಗುವನ್ನು ನೋಡಿಕೊಳ್ಳಬೇಕು ಎಂದಿಲ್ಲ. ಅದೇ ರೀತಿ ನಾವು ಸೋಲಿಗೆ ಪ್ರಾಮುಖ್ಯತೆ ಕೊಡಬೇಕು, ಗೆಲುವಿಗೆ ಅಲ್ಲ’ ಎಂದರು ರವಿಚಂದ್ರನ್.
ಇದನ್ನೂ ಓದಿ: ಪ್ರೇಮಲೋಕ ಸೃಷ್ಟಿಸಿದ ರವಿಚಂದ್ರನ್ಗೆ ಕಾಡಿತ್ತು ಏಕಾಂಗಿತನ? ಕ್ರೇಜಿ ಸ್ಟಾರ್ ಬಿಚ್ಚು ಮಾತು