ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮತ್ತೆ ಬಣ್ಣ ಹಚ್ಚೋಕೆ ರೆಡಿಯಾಗ್ತಿದ್ದಾರಾ? ಹೊಸ ವರ್ಷದ ಸಂಕಲ್ಪವೇನು?

ಸ್ಯಾಂಡಲ್​ವುಡ್​ ಕ್ವೀನ್, ನಟಿ ರಮ್ಯಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರಮ್ಯಾ ಏನೇ ಸದ್ದು ಮಾಡಿದ್ರೂ ಫ್ಯಾನ್ಸ್ ಪಡೆ ಕೇಳೊದೊಂದೇ, ಮತ್ತೆ ಸಿನಿಮಾ ಯಾವಾಗ ಅಂತಾ. ಹಾಗಾದ್ರೆ ಮೋಹಕ ತಾರೆಯ ಹೊಸ ಪ್ಲ್ಯಾನಾದ್ರು ಏನು, ಮತ್ತೆ ಸ್ಯಾಂಡಲ್​ವುಡ್ ಕ್ವೀನ್ ಬಣ್ಣ ಹಚ್ಚೋಕೆ ರೆಡಿಯಾಗ್ತಿದ್ದಾರಾ...? ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರ ಇಲ್ಲಿದೆ.

ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮತ್ತೆ ಬಣ್ಣ ಹಚ್ಚೋಕೆ ರೆಡಿಯಾಗ್ತಿದ್ದಾರಾ? ಹೊಸ ವರ್ಷದ ಸಂಕಲ್ಪವೇನು?
ನಟಿ ರಮ್ಯಾ
Follow us
ಆಯೇಷಾ ಬಾನು
|

Updated on: Dec 31, 2020 | 7:24 AM

ಕನ್ನಡ ಸಿನಿಮಾ ರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟು, ಅಪಾರ ಅಭಿಮಾನಿ ಬಳಗ ಹೊಂದಿರುವ ನಟಿ ಮಣಿಯರಲ್ಲಿ ಮೋಹಕತಾರೆ ರಮ್ಯಾ ಕೂಡ ಒಬ್ಬರು. ದಶಕಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿದ್ರು ರಮ್ಯಾ.

ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸ್ಟಾರ್ ನಟಿಯಾಗಿ ಮಿಂಚಿದವರು ರಮ್ಯಾ. ಆದ್ರೆ ರಾಜಕೀಯದತ್ತ ವಾಲಿದ ಬಳಿಕ ರಮ್ಯಾ ಬಿಗ್ ಸ್ಕ್ರೀನ್​ನಿಂದ ಮಾಯವಾಗಿ ಬಿಟ್ಟಿದ್ರು. ಅಷ್ಟೇ ಅಲ್ಲಾ ಕೆಲಕಾಲ ಯಾರ ಸಹವಾಸವು ಬೇಡ ಅಂತ ಸಾಮಾಜಿಕ ಜಾಲತಾಣದಿಂದಲೂ ಕಾಣೆಯಾಗಿ ಬಿಟ್ಟಿದ್ದರು.

ಸಸ್ಯಹಾರಿ ಆದ ರಮ್ಯಾ ಇದೀಗ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಫ್ಯಾನ್ಸ್ ಜೊತೆಗೆ ಸಂವಹನ ನಡೆಸುತ್ತಿರುತ್ತಾರೆ. ಹೊಸ ವರ್ಷಕ್ಕೆ ಹೊಸ ಪ್ಲ್ಯಾನ್ಸ್​ಗಳನ್ನ ಮಾಡಿದ್ದಾರೆ. ಸಂಪೂರ್ಣವಾಗಿ ಸಸ್ಯಹಾರಿ ಆಗಲು ರಮ್ಯಾ ನಿರ್ಧರಿಸಿದ್ದಾರಂತೆ. ಈ ಬಗ್ಗೆ ರಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

ರಮ್ಯಾ ಬೆಳ್ಳಿ ಪರದೆ ಮೇಲೆ ಬರ್ತಾರಾ ರಮ್ಯಾ ಈ ಪೋಸ್ಟ್ ಹಾಕುತ್ತಲೇ ಅವರ ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ, ಮತ್ತೆ ಸಿನಿಮಾ ಯಾವಾಗ? ಅಂತಾ. ನಿಮ್ಮ ಮುಂದಿನ ಚಿತ್ರ ಯಾವುದು.? ಅಂತಾ. ಹೌದು ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾರನ್ನ ಸಿನಿಪ್ರೇಮಿಗಳು ಬಿಗ್ ಸ್ಕ್ರೀನ್ ಮೇಲೆ ಮಿಸ್ ಮಾಡಿಕೊಳ್ತಿದ್ದಾರೆ. ಹಾಗಾಗಿ ಮತ್ತೆ ರಮ್ಯಾ ಬೆಳ್ಳಿ ಪರದೆ ಮೇಲೆ ಬರಲಿ ಅಂತಿದ್ದಾರೆ. ಈ ಕಾರಣಕ್ಕೇ ರಮ್ಯಾ ಅವರಿಗೆ ಪ್ರತಿಬಾರಿಯೂ ಇದೇ ಪ್ರಶ್ನೆ ಎದುರಾಗುತ್ತಿರುತ್ತೆ.

ಒಂದ್ಕಡೆ ರಮ್ಯಾ ಅಭಿಮಾನಿ ಬಳಗವೇನೋ ಅವರನ್ನ ಮತ್ತೆ ಬಿಗ್ ಸ್ಕ್ರೀನ್​ನಲ್ಲಿ ನೋಡಲು ಕಾಯುತ್ತಿದೆ. ಆದ್ರೆ ರಮ್ಯಾ ಮಾತ್ರ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ತಾವು ಯಾವಾಗ ಮತ್ತೆ ಕನ್ನಡ ಸಿನಿ ತೆರೆಗೆ ಬರ್ತಾರೆ ಅನ್ನೋದನ್ನ ಕನ್ಫರ್ಮ್ ಮಾಡುತ್ತಿಲ್ಲ. ಆದ್ರೂ ರಮ್ಯಾ ಅಭಿಮಾನಿಗಳು ಮಾತ್ರ ನೆಚ್ಚಿನ ನಟಿ ಮತ್ತೆ ಯಾವಾಗ ಸಿನಿಮಾಗೆ ರೀ ಎಂಟ್ರಿ ಕೊಡ್ತಾರೋ ಅಂತಾ ಕಾಯ್ತಿದ್ದಾರೆ.

ಅಭಿಮಾನಿಗಳು ರೀಲ್ ರಮ್ಯಾನ್ನ ನೋಡಿದ್ದೀರಿ.. ಆದ್ರೆ ರಿಯಲ್ ರಮ್ಯಾ ಹೇಗಿದ್ದಾರೆ ಗೊತ್ತಾ!?

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ