‘ಸಂಘಕ್ಕೆ ಭೇಟಿ ಕೋಡಿ’; ಪ್ರಕಾಶ್ ರಾಜ್​​​ಗೆ ಜಗ್ಗೇಶ್ ಆಹ್ವಾನ

ಶಾಸಕ ಶಿವಲಿಂಗೇಗೌಡರ ಆರ್​ಎಸ್​ಎಸ್ ಕುರಿತ ಟೀಕೆಗೆ ರಾಜ್ಯ ಸಭಾ ಸದಸ್ಯ ಜಗ್ಗೇಶ್ ತಿರುಗೇಟು ನೀಡಿದ್ದಾರೆ. ಸಂಘದ ಬಗ್ಗೆ ತಪ್ಪು ಕಲ್ಪನೆ ಹೊಂದಿರುವವರಿಗೆ ಸಂಘಕ್ಕೆ ಬಂದು ಅರಿತುಕೊಳ್ಳುವಂತೆ ಅವರು ಆಹ್ವಾನಿಸಿದ್ದಾರೆ. ಪ್ರಕಾಶ್ ಬೆಳವಾಡಿ ಅವರ ಅನುಭವವನ್ನು ಉದಾಹರಿಸಿ ಜಗ್ಗೇಶ್ ಮಾತನಾಡಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಕೂಡ ಆಹ್ವಾನಿಸಿದ್ದಾರೆ.

‘ಸಂಘಕ್ಕೆ ಭೇಟಿ ಕೋಡಿ’; ಪ್ರಕಾಶ್ ರಾಜ್​​​ಗೆ ಜಗ್ಗೇಶ್ ಆಹ್ವಾನ
ಜಗ್ಗೇಶ್-ಪ್ರಕಾಶ್ ರಾಜ್

Updated on: Feb 07, 2026 | 2:53 PM

ಇತ್ತೀಚೆಗೆ ಆರ್​​ಎಸ್​​ಎಸ್​ ಬಗ್ಗೆ ಶಾಸಕ ಶಿವಲಿಂಗೇಗೌಡ ಅವರು ಹಗುರವಾಗಿ ಮಾತನಾಡಿದ್ದು, ಸಂಘದವರನ್ನು ಕೆರಳಿಸಿತ್ತು. ಅವರು ಮಾತನಾಡಿದ್ದು ಸರಿ ಇಲ್ಲ ಎಂದು ಸಂಘದ ಅನೇಕ ಕಾರ್ಯಕರ್ತರು ಹೇಳಿದ್ದರು. ಈಗ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಈ ಬಗ್ಗೆ ಮಾತನಾಡಿದ್ದಾರೆ. ಹಗುರವಾಗಿ ಮಾತನಾಡುವವರಿಗೆ, ಸಂಘದ ಬಗ್ಗೆ ತಪ್ಪು ತಿಳಿದವರಿಗೆ ಅವರು ಸಂಘಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಪ್ರಕಾಶ್ ರಾಜ್ ಅವರಿಗೆ ಈ ರೀತಿ ಆಹ್ವಾನ ಕೊಡುವಾಗ ಜಗ್ಗೇಶ್ ಅವರು ಪ್ರಕಾಶ್ ಬೆಳವಾಡಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರಿಗೆ ಆರ್​​ಎಸ್​ಎಸ್ ಬಗ್ಗೆ ತಪ್ಪು ತಿಳುವಳಿಕೆ ಇತ್ತಂತೆ. 10ನೇ ವಯಸ್ಸಿನಲ್ಲಿದ್ದಾಗ ಪ್ರಕಾಶ್ ಬೆಳವಾಡಿ ತಾಯಿ ಶಾಖೆಗೆ ಹೋಗುವಂತೆ ಒತ್ತಾಯ ಮಾಡಿದ್ದರು. ಆದರೆ, ಆಗ ಹೋಗೋದಿಲ್ಲ ಎಂದು ಅವರು ಹಠ ಹಿಡಿದರು. ನಂತರ ಇದಕ್ಕೆ ತಾಯಿ ಒಪ್ಪಿದರು.

ಬೆಳೆದು ದೊಡ್ಡವರಾದ ಬಳಿಕ ಪ್ರಕಾಶ್ ಬೆಳವಾಡಿ ಮನೆಗೆ  15-20 ಆರ್​ಎಸ್​ಎಸ್​ ಕಾರ್ಯಕರ್ತರು ಆಗಮಿಸಿದರಂತೆ. ಅವರು ಬಯ್ಯುತ್ತಾರೆ ಎಂದು ಪ್ರಕಾಶ್ ಬೆಳವಾಡಿ ಅಂದುಕೊಂಡರು. ಆದರೆ, ಆ ಊಹೆ ತಪ್ಪಾಯಿತು. ‘ಆರ್​​ಎಸ್​ಎಸ್​ ಬಗ್ಗೆ ಇರೋ ನಿಮ್ಮ ತಿಳುವಳಿಕೆ ತಪ್ಪು, ಒಮ್ಮೆ ಶಾಖೆಗೆ ಬನ್ನಿ’ ಎಂದು ಆಹ್ವಾನ ಕೊಟ್ಟರಂತೆ. ಪ್ರಕಾಶ್ ಆಹ್ವಾನ ಸ್ವೀಕರಿಸಿ ತೆರಳಿದರು.

ಇದನ್ನೂ ಓದಿ: ಟೆಂಟ್ ಹಾಕಿ ಮಲಗಬಹುದು; ಹೈಲಕ್ಸ್ ಖರೀದಿಸಿ ಮಾಡಿಫಿಕೇಷನ್​ ಮಾಡಿಸಿದ ಪ್ರಕಾಶ್ ರಾಜ್

ಬ್ರಾಹ್ಮಣರು ಮಾತ್ರ ಆರ್​​ಎಸ್​​ಎಸ್​ ಅಲ್ಲಿರ್ತಾರೆ ಅಂದುಕೊಂಡಿದ್ದರು ಪ್ರಕಾಶ್. ಆದರೆ, ಅದು ತಪ್ಪು ಅನ್ನೋದು ಗೊತ್ತಾಯ್ತು. ಎಲ್ಲಾ ಸಮುದಾಯದ ಜನರಿದ್ದಾರೆ, ತುಂಬಾ ಜ್ಞಾನಿಗಳಿದ್ದಾರೆ ಎಂಬುದು ಅವರಿಗೆ ಅರಿವಾಯಿತು. ದೇಶದ ಬಗ್ಗೆ ಅವರಿಗೆ ಇರೋ ಪ್ರೀತಿ ಕೂಡ ಸ್ಪಷ್ಟವಾಯಿತು.


ಈ ವಿಡಿಯೋನ ಜಗ್ಗೇಶ್ ಹಂಚಿಕೊಂಡಿದ್ದಾರೆ. ಅದಕ್ಕೆ ಜಗ್ಗೇಶ್ ಕ್ಯಾಪ್ಶನ್ ನೀಡಿದ್ದಾರೆ. ‘ಇತ್ತೀಚಿಗೆ ಒಬ್ಬ ದಡ್ಡ ಶಾಸಕ ವಿಧಾನಸಭೆಯಲ್ಲಿ ಹಾಗು ಒಬ್ಬ ಅಜ್ಞಾನಿ ಶಾಸಕ ವಿಧಾನಪರಿಷತ್​ನಲ್ಲಿ ಆರ್​​ಎಸ್​​ಎಸ್​ ಸಂಘಟನೆ ಬಗ್ಗೆ ಲಘುವಾಗಿ ಮಾತಾಡಿದರು. ಸಂಘದ ಬಗ್ಗೆ ಹೀಗೆ ಅರಿವಿರದ ಅನೇಕರು ಇದ್ದಾರೆ. ಜೊತೆಗೆ ಕಲಾವಿದ ಪ್ರಕಾಶ್ ರಾಜ್
ಇವರಂತೆ ಸಂಘಕ್ಕೆ ಒಮ್ಮೆ ಭೇಟಿಕೊಡಿ ಮನಸ್ಥಿತಿ ಬದಲಾಗಿ ಸಂಘದ ದೇಶ ಚಿಂತನೆ ಅರಿವಾಗುತ್ತೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:01 am, Sat, 7 February 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us