ವೇದಿಕೆಗೆ ಬಂದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಚೇರ್ ಕ್ಲೀನ್ ಮಾಡಿಕೊಟ್ಟು ಸರಳತೆ ಮೆರೆದ ಜೂನಿಯರ್ NTR
ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯ್ತು. ವಿಧಾನಸಭೆ ಮುಂದೆ ನಡೆದ ಸಮಾರಂಭದಲ್ಲಿ ಜೂನಿಯರ್ ಎನ್ಟಿಆರ್ ಸರಳತೆ ಮೆರೆದಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಪುನೀತ್ ಪತ್ನಿ ಅಶ್ವಿನಿ ಅವರು ಕರ್ನಾಟಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಿವಣ್ಣ, ರಾಘವೇಂದ್ರ ರಾಜ್ಕುಮಾರ್, ರಜಿನಿಕಾಂತ್, ಜೂ.ಎನ್ಟಿಆರ್ ಸೇರಿ ಸ್ಟಾರ್ ನಟರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಎಂ ಬೊಮ್ಮಾಯಿ, ಸಚಿವ ಆರ್ ಅಶೋಕ್ ಸೇರಿ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ
ಇನ್ನು ಪ್ರಶಸ್ತಿ ಪ್ರದಾನಕ್ಕೂ ಮುಂಚೆ ವಿಧಾನಸೌಧ ಮುಂದೆ ನಡೆದ ಕಾರ್ಯಕ್ರಮದ ವೇದಿಕೆಗೆ ಬಂದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಕೂಡಲು ಜೂನಿಯರ್ ಎನ್ಟಿಆರ್. ಚೇರ್ ವ್ಯವಸ್ಥೆ ಮಾಡಿಕೊಟ್ರು. ಅಲ್ಲದೇ ಸ್ವತಃ ಅವರೇ ತಮ್ಮ ಕೈಯಿಂದ ಮೊದಲು ಚೇರ್ ಕ್ಲೀನ್ ಮಾಡಿ ಕೂರಿಸಿ ಸರಳತೆ ಮೆರೆದರು. ಇನ್ನು ವೇದಿಕೆಗೆ ಬಂದ ಸುಧಾಮೂರ್ತಿ ಅವರಿಗೂ ಕೂಡಲು ವ್ಯವಸ್ಥೆ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.
Latest Videos