Jr NTR: ‘ಕರ್ನಾಟಕ ರತ್ನ’ ಪ್ರಶಸ್ತಿಗೆ ಅರ್ಥವೇ ಪುನೀತ್​; ಮನಸಾರೆ ಮಾತಾಡಿದ ಜೂ. ಎನ್​ಟಿಆರ್​

Karnataka Ratna Puneeth Rajkumar: ‘ನಾನು ಈ ವೇದಿಕೆಗೆ ಬಂದಿದ್ದು ನನ್ನ ಸಾಧನೆಯ ಅರ್ಹತೆಯಿಂದ ಅಲ್ಲ. ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ನಾನು ಇಲ್ಲಿ ನಿಂತಿದ್ದೇನೆ’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ.

Jr NTR: ‘ಕರ್ನಾಟಕ ರತ್ನ’ ಪ್ರಶಸ್ತಿಗೆ ಅರ್ಥವೇ ಪುನೀತ್​; ಮನಸಾರೆ ಮಾತಾಡಿದ ಜೂ. ಎನ್​ಟಿಆರ್​
ಪುನೀತ್​ ರಾಜ್​ಕುಮಾರ್​, ಜೂನಿಯರ್​ ಎನ್​ಟಿಆರ್​
Follow us
| Updated By: ಮದನ್​ ಕುಮಾರ್​

Updated on:Nov 01, 2022 | 6:44 PM

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಗಿದೆ. ಇಂದು (ನ.1) ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಅಪ್ಪು ಪರವಾಗಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಈ ಗೌರವ ಸ್ವೀಕರಿಸಿದರು. ಈ ಸಮಾರಂಭಕ್ಕೆ ರಜನಿಕಾಂತ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪುನೀತ್​ ಬಗ್ಗೆ ಜೂನಿಯರ್​ ಎನ್​ಟಿಆರ್​ (Jr NTR) ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಒಬ್ಬ ಮನುಷ್ಯನಿಗೆ ಉಪನಾಮ ಎಂಬುದು ಹಿರಿಯರಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಎಂಬುದು ಸ್ವಂತ ಸಂಪಾದನೆ. ಅಹಂ ಇಲ್ಲದೇ, ಯುದ್ಧ ಮಾಡದೇ ಕೇವಲ ನಗುವಿನಿಂದ, ವ್ಯಕ್ತಿತ್ವದಿಂದ ಒಂದು ರಾಜ್ಯವನ್ನು ಗೆದ್ದ ರಾಜ ಯಾರಾದರೂ ಇದ್ದರೆ ಅದು ಪುನೀತ್​ ರಾಜ್​ಕುಮಾರ್ (Puneeth Rajkumar) ಅವರು ಒಬ್ಬರೇ’ ಎಂದು ತಾರಕ್​ ಹೇಳಿದ್ದಾರೆ.

‘ಪುನೀತ್​ ಅವರು ಒಬ್ಬ ಸೂಪರ್​ ಸ್ಟಾರ್​, ಶ್ರೇಷ್ಠ ತಂದೆ, ಶ್ರೇಷ್ಠ ಪತಿ, ಶ್ರೇಷ್ಠ ಸ್ನೇಹಿತ ಆಗಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಅವರು ಶ್ರೇಷ್ಠ ಮಾನವನಾಗಿದ್ದರು. ಅವರ ನಗುವಿನಲ್ಲಿ ಇದ್ದ ಶ್ರೀಮಂತಿಕೆ ಬೇರೆ ಎಲ್ಲೂ ನಾನು ನೋಡಿಲ್ಲ. ಅದಕ್ಕಾಗಿ ಅವರನ್ನು ನಗುವಿನ ಒಡೆಯ ಅನ್ನೋದು. ಇವತ್ತು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗುತ್ತಿದೆ. ದಯವಿಟ್ಟು ತಪ್ಪು ತಿಳಿಯಬೇಡಿ, ನನ್ನ ಪ್ರಕಾರ ಕರ್ನಾಟಕ ರತ್ನಕ್ಕೆ ನಿಜವಾದ ಅರ್ಥವೇ ಪುನೀತ್​ ರಾಜ್​ಕುಮಾರ್​ ಅವರು’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ.

ಇದನ್ನೂ ಓದಿ
Image
Karnataka Ratna: ಪುನೀತ್​ ರಾಜ್​ಕುಮಾರ್​ಗೆ ‘ಕರ್ನಾಟಕ ರತ್ನ’: ಅಪ್ಪು ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
Image
ಅಪ್ಪುಗೆ ಕರ್ನಾಟಕ ರತ್ನ: ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್; ಇಲ್ಲಿದೆ ವಿಡಿಯೋ
Image
Karnataka Rajyotsava 2022 Highlights : ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬದಲಾವಣೆ: ಬೊಮ್ಮಾಯಿ ಘೋಷಣೆ
Image
Puneeth Rajkumar Samadhi: ಪುನೀತ್​​ ಸಮಾಧಿ ಎದುರು ಕಣ್ಣೀರು ಹಾಕುತ್ತಿರುವ ಫ್ಯಾನ್ಸ್​; ಮಾಸುವಂಥದ್ದಲ್ಲ ಈ ನೋವು

‘ನಾನು ಈ ವೇದಿಕೆಗೆ ಬಂದಿದ್ದು ನನ್ನ ಸಾಧನೆಯ ಅರ್ಹತೆಯಿಂದ ಅಲ್ಲ. ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗಿ ಆಗಲು ನನಗೆ ಅವಕಾಶ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್​ ಅವರಿಗೆ ಧನ್ಯವಾದಗಳು. ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ನನ್ನ ಧನ್ಯವಾದಗಳು. ಬೇರೆ ರಾಜ್ಯದಿಂದ ಬಂದ ಓರ್ವ ನಟ ಎಂದು ಅವರು ನನ್ನನ್ನು ನೋಡಿಲ್ಲ. ಆ ಕುಟುಂಬದ ಒಬ್ಬ ಸದಸ್ಯನ ರೀತಿ ಅವರು ನನ್ನನ್ನು ಟ್ರೀಟ್​ ಮಾಡಿದ್ದಾರೆ’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:44 pm, Tue, 1 November 22