AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Ratna Award: ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಕುಟುಂಬ, ಫೋಟೋ ವೈರಲ್

ಪುನೀತ್ ರಾಜ್ ಕುಮಾರ್  ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಪ್ರದಾನ ಮಾಡಿದೆ. ಇನ್ನು ಅಶ್ವಿನಿ ಅವರು ಕರ್ನಾಟಕ ಪ್ರಶಸ್ತಿಯನ್ನು ಪುನೀತ್ ಅವರ ಭಾವಚಿತ್ರಕ್ಕೆ ಅರ್ಪಿಸಿದ್ದು, ಇದೀಗ ಈ ಫೋಟೋ ಫುಲ್ ವೈರಲ್ ಆಗಿದೆ.

Karnataka Ratna Award: ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಕುಟುಂಬ, ಫೋಟೋ ವೈರಲ್
Karnataka Ratna Award For Puneeth
TV9 Web
| Edited By: |

Updated on:Nov 01, 2022 | 7:55 PM

Share

ಅಪ್ಪು, ಅಭಿ, ವೀರಕನ್ನಡಿಗನಾಗಿ ಅಭಿಮಾನಿಗಳ ಹೃಯದಲ್ಲಿ ಅಜರಾಮರಾಗಿರುವ ಪುನೀತ್ ರಾಜ್​ಕುಮಾರ್​ಗೆ (Puneeth Rajkumar) ರಾಜ್ಯದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಿದೆ .  ಇಂದು(ನ.01) ವಿಧಾನಸಭೆ ಮುಂಬಾಗ ನಡೆದ ಸಮಾರಂಭದಲ್ಲಿ ಪುನೀತ್‌ ಪತ್ನಿ ಅಶ್ವಿನಿ ಭಾರವಾದ ಹೃದಯದಲ್ಲೇ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿದ್ರು. ಸೂಪರ್​ ಸ್ಟಾರ್ ರಜನಿಕಾಂತ್ (Rajinikanth)​, ಹಾಗೂ ನಟ ಜೂನಿಯರ್ ಎನ್​ಟಿಆರ್​ (Jr NTR)ಮುಖ್ಯ ಅತಿಥಿಗಳಾಗಿ ಆಗಮಿಸಿ ಅಮೂಲ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು. ಇನ್ನು ಅಶ್ವಿನಿ ಅವರು ಕರ್ನಾಟಕ ಪ್ರಶಸ್ತಿಯನ್ನು ಪುನೀತ್ ಅವರ ಭಾವಚಿತ್ರಕ್ಕೆ ಅರ್ಪಿಸಿದ್ದು, ಇದೀಗ ಈ ಫೋಟೋ ಫುಲ್ ವೈರಲ್ ಆಗಿದೆ.

Karnataka Ratna Award 2022 ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ

ಹೌದು…9ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನವನ್ನು ಅಶ್ವನಿ ಪುನೀತ್ ರಾಜ್​ಕುಮಾರ್​ ಅವರು ವಿಧಾನಸಭೆ ಮುಂದೆ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ರು. ಬಳಿಕ ಮನೆಗೆ ಬಂದು ಅಪ್ಪು ಫೋಟೋಗೆ ಪ್ರಶಸ್ತಿಯನ್ನು ಅರ್ಪಿಸಿದರು. ಈ ಪ್ರಶಸ್ತಿಯು 50 ಗ್ರಾಮ್ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ್ನು ಒಳಗೊಂಡಿದ್ದು, ಈಗ ಈ ಚಿನ್ನದ ಪದಕವನ್ನು ಅಪ್ಪು ಫೋಟೋಗೆ ಹಾಕಿದರು.

ಅಶ್ವಿನಿ ಹಾಗು ಪುತ್ರಿ ವಂದಿತಾ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಹಿಡಿದು ಪುನೀತ್ ಭಾವಚಿತ್ರದ ಮುಂದೆ ನಿಂತಿದ್ದು, ಈ ಫೋಟೋ ಹಲವು ಭಾವನಾತ್ಮಕ ಭಾವನೆಗಳನ್ಜು ಹೇಳುವಂತಿವೆ. ಬಾಳಿದ್ದು ಕೆಲವೇ ವರ್ಷವಾದ್ರೂ, ಸಾಧನೆ ಮಾತ್ರ ಶಿಖರ ಮುಟ್ಟಿದೆ. ಅದೇ ಶಿಖರಕ್ಕೆ ಇವತ್ತು ಕರ್ನಾಟಕ ರತ್ನ ಪ್ರಶಸ್ತಿಯೂ ಸೇರಿಕೊಂಡಿದೆ.

ಅಪ್ಪು, ಅರಸ, ಅಭಿ ಅಂತಾ ಕರುನಾಡನ್ನೇ ಅಪ್ಪಿಕೊಂಡವರು ಪುನೀತ್‌. ಆ ವೀರಕನ್ನಡಿಗ ದೈಹಿಕವಾಗಿ ಇಲ್ಲವಾದ್ರೂ ಕನ್ನಡಿಗರ ಹೃದಯದಲ್ಲಿದ್ದಾರೆ. ಅದೇ ಹೃದಯವಂತನಿಗೆ ಇಂದು ಕರುನಾಡೇ ನಮನ ಸಲ್ಲಿಸಿದೆ. ನಟ ಪುನೀತ್‌ ರಾಜ್‌ಕುಮಾರ್‌ 2021ರ ಅಕ್ಟೋಬರ್‌ 29ರಂದು ವಿಧಿವಶರಾಗಿದ್ರು . ಪುನೀತ್‌ ಗಳಿಸಿಕೊಂಡಿದ್ದ ಪ್ರೀತಿ, ಮಾಡಿದ್ದ ಕೆಲಸ ಅಂದು ಜಗತ್ತಿಗೆ ಗೊತ್ತಾಗಿತ್ತು. ಅದೇ ಯುವರತ್ನನಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿತ್ತು . ರಾಜ್ಯೋತ್ಸವದ ದಿನವಾದ ಇವತ್ತು ನಾಡಿನ ಶಕ್ತಿಸೌಧದ ಮೆಟ್ಟಿಲುಗಳು ಆ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಿದ್ದವು .

Published On - 7:53 pm, Tue, 1 November 22

Follow Us
TV9 Web
TV9 Web

TV9 Kannada

Read More
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ